ನವೆಂಬರ್ ತಿಂಗಳು ಆರಂಭವಾಗುತ್ತಿದ್ದಂತೆ, ದೇಶಾದ್ಯಂತ ಇರುವ ಬ್ಯಾಂಕ್‌ಗಳಲ್ಲಿ ಪ್ರಾದೇಶಿಕ ಹಬ್ಬಗಳು ಮತ್ತು ವಾರಾಂತ್ಯದ ಕಾರಣದಿಂದಾಗಿ ಸುಮಾರು ಒಂಬತ್ತರಿಂದ ಹತ್ತು ದಿನಗಳವರೆಗೆ ರಜಾ ದಿನಗಳನ್ನು ಘೋಷಿಸಲಾಗಿದೆ.
ಭಾರತೀಯ ರಿಸರ್ವ್ ಬ್ಯಾಂಕ್ (RBI) ಬಿಡುಗಡೆ ಮಾಡಿದ ಅಧಿಕೃತ ರಜಾ ಪಟ್ಟಿಯ ಪ್ರಕಾರ, ಗ್ರಾಹಕರು ಯಾವುದೇ ಅನಾನುಕೂಲತೆ ತಪ್ಪಿಸಲು ಬ್ಯಾಂಕ್‌ಗೆ ಭೇಟಿ ನೀಡುವ ಮೊದಲು ಈ ಪಟ್ಟಿಯನ್ನು ಪರಿಶೀಲಿಸುವುದು ಉತ್ತಮ.
ಸಾರ್ವಜನಿಕ ಶಾಖೆಗಳು ಮುಚ್ಚಿದ್ದರೂ ಸಹ, ಗ್ರಾಹಕರು ಎಂದಿನಂತೆ ಎಟಿಎಂ (ATM), ಇಂಟರ್ನೆಟ್ ಬ್ಯಾಂಕಿಂಗ್ ಮತ್ತು ಮೊಬೈಲ್ ಬ್ಯಾಂಕಿಂಗ್ ಸೇವೆಗಳನ್ನು ಬಳಸಬಹುದಾಗಿದೆ.ಭಾನುವಾರ ಮತ್ತು ಎರಡನೇ/ನಾಲ್ಕನೇ ಶನಿವಾರಗಳು ರಾಷ್ಟ್ರವ್ಯಾಪಿ ರಜಾದಿನಗಳಾಗಿವೆ. ಉಳಿದವು ಆಯಾ ರಾಜ್ಯಗಳಿಗೆ ಸೀಮಿತವಾಗಿರುತ್ತವೆ.
2025ರ ನವೆಂಬರ್ ತಿಂಗಳಲ್ಲಿ ಬ್ಯಾಂಕ್ ರಜಾದಿನಗಳು
ನ. 1, ಶನಿವಾರ: ಕನ್ನಡ ರಾಜ್ಯೋತ್ಸವ/ ಹರ್ಯಾಣ ದಿನ / ಪುದುಚೇರಿ ದಿನ / ಕುತ್ (ಕರ್ನಾಟಕ, ಹರ್ಯಾಣ, ಪುದುಚೇರಿ, ಮಣಿಪುರ ರಾಜ್ಯಗಳಲ್ಲಿ ರಜೆ)
ನ. 2: ಭಾನುವಾರದ ರಜೆ
ನ. 5, ಬುಧವಾರ: ಕಾರ್ತಿಕ ಪೂರ್ಣಿಮಾ/ ಗುರುನಾನಕ್ ಜಯಂತಿ (ಹೆಚ್ಚಿನ ರಾಜ್ಯಗಳಲ್ಲಿ ರಜೆ)
ನ. 7, ಶುಕ್ರವಾರ: ವಂಗಲಾ ಹಬ್ಬ (ಮೇಘಾಲಯದಲ್ಲಿ ರಜೆ)
ನ. 8, ಶನಿವಾರ: ಕನಕದಾಸ ಜಯಂತಿ ಹಾಗೂ ಎರಡನೇ ಶನಿವಾರ
ನ. 9: ಭಾನುವಾರದ ರಜೆ
ನ. 11, ಮಂಗಳವಾರ: ಲಹಬಾಬ್ ಡುಚೆನ್ ಹಬ್ಬ (ಸಿಕ್ಕಿಂನಲ್ಲಿ ರಜೆ)
ನ. 16: ಭಾನುವಾರದ ರಜೆ
ನ. 22: ನಾಲ್ಕನೇ ಶನಿವಾರ
ನ. 23: ಭಾನುವಾರದ ರಜೆ
ನ. 30: ಭಾನುವಾರದ ರಜೆ
ಕರ್ನಾಟಕದಲ್ಲಿ ನವೆಂಬರ್ನಲ್ಲಿ ಬ್ಯಾಂಕ್ ರಜಾದಿನಗಳು
ಕರ್ನಾಟಕದಲ್ಲಿ ಏಳು ಭಾನುವಾರ ಮತ್ತು ಶನಿವಾರಗಳನ್ನೂ ಸೇರಿಸಿ ಒಟ್ಟು 9 ದಿನಗಳು ರಜೆ ಇವೆ. ನವೆಂಬರ್ 1ರಂದು ರಾಜ್ಯೋತ್ಸವ ನಿಮಿತ್ತ ರಜೆ ಇದೆ. ನವೆಂಬರ್ 5, ಬುಧವಾರ ಗುರುನಾನಕ್ ಜಯಂತಿಗೂ ಕರ್ನಾಟಕದಲ್ಲಿ ಬ್ಯಾಂಕುಗಳಿಗೆ ರಜೆ ಇರುತ್ತದೆ.
ನ. 1, ಶನಿವಾರ: ಕನ್ನಡ ರಾಜ್ಯೋತ್ಸವ
ನ. 2: ಭಾನುವಾರದ ರಜೆ
ನ. 5, ಬುಧವಾರ: ಗುರುನಾನಕ್ ಜಯಂತಿ
ನ. 8: ಎರಡನೇ ಶನಿವಾರ
ನ. 9: ಭಾನುವಾರದ ರಜೆ
ನ. 16: ಭಾನುವಾರದ ರಜೆ
ನ. 22: ನಾಲ್ಕನೇ ಶನಿವಾರ
ನ. 23: ಭಾನುವಾರದ ರಜೆ
ನ. 30: ಭಾನುವಾರದ ರಜೆ
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


