Sunday, November 1, 2026
spot_img
More
    spot_img
    HomeLatest news1978 ರಲ್ಲಿ ಗೃಹ ಸಾಲ ಪಡೆದ ಮೊದಲ ಭಾರತೀಯ ಯಾರು? ಇಲ್ಲಿದೆ ಆಸಕ್ತಿಕರ ಮಾಹಿತಿ!

    1978 ರಲ್ಲಿ ಗೃಹ ಸಾಲ ಪಡೆದ ಮೊದಲ ಭಾರತೀಯ ಯಾರು? ಇಲ್ಲಿದೆ ಆಸಕ್ತಿಕರ ಮಾಹಿತಿ!

    ಸ್ವಂತ ಮನೆಯನ್ನು ಹೊಂದುವುದು ಭಾರತೀಯ ಕುಟುಂಬಗಳ ದೊಡ್ಡ ಕನಸು. ಇಂದು ಬ್ಯಾಂಕ್‌ಗಳು ಕಡಿಮೆ ಬಡ್ಡಿದರ ಮತ್ತು ಸುಲಭ ಇಎಂಐ (EMI)ಗಳೊಂದಿಗೆ ಗೃಹ ಸಾಲಗಳನ್ನು ನೀಡುವುದರಿಂದ ಈ ಕನಸು ಸಾಕಾರಗೊಳ್ಳುವುದು ಸುಲಭವಾಗಿದೆ. ಆದರೆ ಕೆಲವು ದಶಕಗಳ ಹಿಂದೆ ಪರಿಸ್ಥಿತಿ ಸಂಪೂರ್ಣ ಭಿನ್ನವಾಗಿತ್ತು. ಆಗ ‘ಗೃಹ ಸಾಲ’ ಎಂಬ ಪರಿಕಲ್ಪನೆ ಜನಪ್ರಿಯವಾಗಿರಲಿಲ್ಲ ಮನೆ ಕಟ್ಟಲು ಜನರು ತಮ್ಮ ವೈಯಕ್ತಿಕ ಉಳಿತಾಯ ಅಥವಾ ಕುಟುಂಬದ ಹಣದ ಮೇಲೆಯೇ ಭರಪೂರ ನಿರ್ಭರವಾಗಿದ್ದರು.

    ಈ ಹಿನ್ನೆಲೆಯಲ್ಲೇ ಭಾರತದ ಗೃಹಸಾಲ ಯುಗಕ್ಕೆ ನಾಂದಿ ಹಾಡಿದ, ಬ್ಯಾಂಕ್‌ನಿಂದ ಮನೆ ಕಟ್ಟಲು ಮೊದಲ ಬಾರಿ ಸಾಲ ಪಡೆದ ಆ ದಿಟ್ಟ ವ್ಯಕ್ತಿ ಯಾರು ಎಂಬ ಕುತೂಹಲಕ್ಕೆ ಉತ್ತರ ನಿಜಕ್ಕೂ ಆಸಕ್ತಿಕರ. ಅವರ ಈ ಹೆಜ್ಜೆಯೇ ಭಾರತದ ವಸತಿ ಹಣಕಾಸು ಕ್ಷೇತ್ರದಲ್ಲಿ ಐತಿಹಾಸಿಕ ಬದಲಾವಣೆಗೆ ಕಾರಣವಾಯಿತು.

    ಭಾರತದ ಮೊದಲ ಗೃಹಸಾಲದ ಋಣಿದಾರ

    ಭಾರತದಲ್ಲಿ ಗೃಹ ಸಾಲ ಪಡೆದ ಮೊದಲ ವ್ಯಕ್ತಿ ಮುಂಬೈನ ನಿವಾಸಿ ಡಿ.ಬಿ. ರೆಮೆಡಿಯೋಸ್ (D. B. Remedios). 1978ರಲ್ಲಿ, ಗೃಹಸಾಲಗಳು ಜನಪ್ರಿಯವಾಗುವಬಹುದಕ್ಕೂ ಮುನ್ನವೇ, ಮಲಾಡ್‌ನಲ್ಲಿ ತಮ್ಮ ಕನಸಿನ ಮನೆಯ ನಿರ್ಮಾಣಕ್ಕಾಗಿ ಅವರು ₹30,000 ಸಾಲವನ್ನು ಪಡೆದರು.

    ಆ ಕಾಲಕ್ಕೆ ಇದು ಸಣ್ಣ ಮೊತ್ತವಾದರೂ, ಭಾರತದ ವಸತಿ ಹಣಕಾಸು ಕ್ಷೇತ್ರಕ್ಕೆ ಮಹತ್ವದ ತಿರುವು ನೀಡಿದ ಐತಿಹಾಸಿಕ ಹೆಜ್ಜೆ ಆಗಿತ್ತು.ಅಂದು ಬಹುತೇಕ ಜನರು ಮನೆ ಖರೀದಿಸಲು ವೈಯಕ್ತಿಕ ಉಳಿತಾಯ ಅಥವಾ ಕುಟುಂಬದ ಸಹಾಯದ ಮೇಲೆಯೇ ಅವಲಂಬಿಸುತ್ತಿದ್ದರು. ಇಂತಹ ಸಂದರ್ಭದಲ್ಲಿ ಬ್ಯಾಂಕ್ನಿಂದ ಸಾಲ ಪಡೆಯುವ ರೆಮೆಡಿಯೋಸ್ ಅವರ ನಿರ್ಧಾರವು ಕೇವಲ ಅಪರೂಪವಾಗಿರಲಿಲ್ಲಅದು ಭಾರತದ ಭವಿಷ್ಯದ ಕೋಟ್ಯಂತರ ಮನೆಮಾಲೀಕರಿಗೆ ಮಾರ್ಗ ತೆರೆದ ಮಹತ್ವದ ಕ್ಷಣವೂ ಆಗಿತ್ತು.

    ಸಾಲ ನೀಡಿದ ಮೊದಲ ಸಂಸ್ಥೆ

    ಭಾರತದಲ್ಲಿ ಮೊದಲ ಗೃಹ ಸಾಲವನ್ನು ನೀಡಿದ್ದು ಎಚ್‌ಡಿಎಫ್‌ಸಿ (HDFC). ಇದು ನಂತರ ಭಾರತದ ಅತಿದೊಡ್ಡ ಖಾಸಗಿ ವಲಯದ ಬ್ಯಾಂಕ್ ಮತ್ತು ವಸತಿ ಹಣಕಾಸು ಕ್ಷೇತ್ರದಲ್ಲಿ ಪ್ರವರ್ತಕನಾಗಿ ಬೆಳೆಯಿತು. 1978 ರಲ್ಲಿ, ಎಚ್‌ಡಿಎಫ್‌ಸಿ ಸಂಸ್ಥೆಯು ಆ ಮೊದಲ ಗೃಹ ಸಾಲವನ್ನು ಶೇ 10.5 ರ ಬಡ್ಡಿ ದರದಲ್ಲಿ ನೀಡಿತು, ಇದು ಆ ಯುಗಕ್ಕೆ ಸ್ಪರ್ಧಾತ್ಮಕ ದರವಾಗಿತ್ತು.

    ಎಚ್‌ಡಿಎಫ್‌ಸಿಯ ಈ ನಡೆ ಭಾರತೀಯ ಬ್ಯಾಂಕಿಂಗ್ ವ್ಯವಸ್ಥೆಯ ಸ್ವರೂಪವನ್ನೇ ಬದಲಾಯಿಸಿತು. ಅಲ್ಲಿಯವರೆಗೂ, ಬ್ಯಾಂಕ್‌ಗಳು ಪ್ರಾಥಮಿಕವಾಗಿ ಕೃಷಿ, ವ್ಯಾಪಾರ ಅಥವಾ ಸಣ್ಣ ಉದ್ಯಮಗಳಿಗೆ ಸಾಲ ನೀಡುತ್ತಿದ್ದವು. ವೈಯಕ್ತಿಕ ಸಾಲಗಳು, ವಿಶೇಷವಾಗಿ ವಸತಿಗಾಗಿ, ಅಪರೂಪವಾಗಿದ್ದವು. ಆದರೆ ಎಚ್‌ಡಿಎಫ್‌ಸಿ ಈ ಕ್ಷೇತ್ರದಲ್ಲಿ ಕಾಲಿಟ್ಟ ನಂತರ, ಭಾರತದಾದ್ಯಂತ ಇತರ ಬ್ಯಾಂಕ್‌ಗಳು ಸಹ ಗೃಹ ಸಾಲಗಳನ್ನು ನೀಡಲು ಪ್ರಾರಂಭಿಸಿದವು.

    ಈ ಸಮಯದಲ್ಲಿ, ಸಾಲ ತೆಗೆದುಕೊಂಡು ಮನೆ ಕಟ್ಟುವ ಕಲ್ಪನೆ ನಿಧಾನವಾಗಿ ಜನರಿಗೆ ಇಷ್ಟವಾಯಿತು. 1994 ರ ಹೊತ್ತಿಗೆ ಬಡ್ಡಿ ದರವು ಶೇ. 11 ರಿಂದ 14 ರಷ್ಟಿತ್ತು. ದರ ಜಾಸ್ತಿ ಇದ್ದರೂ, ಸಾಲ ಸಿಗುವುದು ಮಧ್ಯಮ ವರ್ಗದ ಕುಟುಂಬಗಳಿಗೆ ದೊಡ್ಡ ರಿಲೀಫ್ ನೀಡಿತು.

    ಇಂದು ಬ್ಯಾಂಕ್‌ಗಳ ನಡುವೆ ಸ್ಪರ್ಧೆ ಹೆಚ್ಚಾಗಿದೆ. ಸರ್ಕಾರ ಕೂಡ ಅನೇಕ ಸುಧಾರಣೆಗಳನ್ನು ತಂದಿದೆ. ಹಾಗಾಗಿ, ಇಂದು ಸಾಲ ಪಡೆಯುವುದು ಸುಲಭ, ಕೈಗೆಟುಕುವ ದರದಲ್ಲಿ ಸಿಗುತ್ತದೆ ಮತ್ತು ಎಲ್ಲಾ ಪ್ರಕ್ರಿಯೆಗಳನ್ನು ಮೊಬೈಲ್‌ನಲ್ಲೇ (Digital Processing) ಮಾಡಬಹುದು!

    ಕೇವಲ ₹30,000 ಸಾಲ! ಆದರೆ, ಡಿ.ಬಿ. ರೆಮೆಡಿಯೋಸ್ ಅವರ ಆ ಒಂದು ಸಣ್ಣ ಹೆಜ್ಜೆ ಭಾರತದ ಲಕ್ಷಾಂತರ ಕುಟುಂಬಗಳಿಗೆ ಸ್ವಂತ ಮನೆ ಹೊಂದುವ ಕನಸನ್ನು ನನಸಾಗಿಸಿದೆ! ನಿಜಕ್ಕೂ ಅದೊಂದು ಐತಿಹಾಸಿಕ ಹೆಜ್ಜೆ!


    Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ

    Subscribe to get the latest posts sent to your email.

    LEAVE A REPLY

    Related News

    ಮಹಾಲಯ ಅಮಾವಾಸ್ಯೆ 2026: ಅಕ್ಟೋಬರ್ 10ರಂದು ಆಚರಣೆ; ಪಿತೃಪೂಜೆಯ ಮಹತ್ವವೇನು?

    ಹಿಂದೂ ಧರ್ಮದಲ್ಲಿ ಮಹಾಲಯ ಅಮಾವಾಸ್ಯೆಗೆ ವಿಶೇಷ ಸ್ಥಾನವಿದೆ. ಪಿತೃಪಕ್ಷದ ಕೊನೆಯ ದಿನವಾದ ಈ ಸಂದರ್ಭದಲ್ಲಿ ಪೂರ್ವಜರನ್ನು ಸ್ಮರಿಸಿ, ಅವರ ಆತ್ಮಕ್ಕೆ ಶಾಂತಿ ಕೋರಿ ವಿವಿಧ ಧಾರ್ಮಿಕ ವಿಧಿವಿಧಾನಗಳನ್ನು ನೆರವೇರಿಸಲಾಗುತ್ತದೆ. ಈ ದಿನ ಶ್ರಾದ್ಧ,...

    ಕರ್ನಾಟಕಕ್ಕೆ ಗುಡ್‌ನ್ಯೂಸ್: ಯುಬಿಯಿಂದ ₹4,500 ಕೋಟಿ ಕೊಡುಗೆ, 36 ಸಾವಿರಕ್ಕೂ ಹೆಚ್ಚು ಉದ್ಯೋಗ

    ಬೆಂಗಳೂರು: ದೇಶದ ಅತಿದೊಡ್ಡ ಬಿಯರ್ ಉತ್ಪಾದನಾ ಸಂಸ್ಥೆ ಹಾಗೂ ಹೈನೆಕನ್‌ ಕಂಪನಿಯ ಭಾಗವಾಗಿರುವ ಬೆಂಗಳೂರು ಮೂಲದ 'ಯುನೈಟೆಡ್ ಬ್ರೂವರೀಸ್ ಲಿಮಿಟೆಡ್' (ಯುಬಿಎಲ್‌), ಕರ್ನಾಟಕದ ಆರ್ಥಿಕತೆ ಮತ್ತು ಉದ್ಯೋಗ ಸೃಷ್ಟಿಯಲ್ಲಿ ಮಹತ್ವದ ಪಾತ್ರ ವಹಿಸುತ್ತಿದೆ...

    Most Popular

    Recent Comments

    Home
    Play
    Notification
    Search