ಕಾಸ್ಟಿಂಗ್ ಕೌಚ್ ವಿಚಾರವಾಗಿ ಹಲವಾರು ನಟಿಯರು ವಿವಾದಕ್ಕೀಡಾಗಿದ್ದನ್ನು ಕೇಳಿದ್ದೇವೆ. ಸಿನಿಮಾದಲ್ಲಿ ಅವಕಾಶ ಸಿಗಬೇಕೆಂದರೆ ಚಿತ್ರದ ನಿರ್ಮಾಪಕರು ಹಾಗೂ ನಿರ್ದೇಶಕರ ಜತೆ ಖಾಸಗಿ ಕ್ಷಣಗಳನ್ನು ಕಳೆಯಬೇಕು ಎಂಬ ಅಭಿಪ್ರಾಯ ಜನರಲ್ಲೂ ಬರುವಂತೆ ಮಾಡಿಬಿಟ್ಟಿವೆ ಈ ವಿವಾದಗಳು.
ಮೀಟೂ ಅಭಿಯಾನ ಆರಂಭವಾದಾಗಿನಿಂದ ಹಲವಾರು ಆರೋಪಗಳನ್ನು ನಟಿಯರು ಮಾಡಿದ್ದಾರೆ. ಇದೀಗ ಅಂತಹದ್ದೇ ಆದರೆ ನಟಿಯೇ ಕಾಸ್ಟಿಂಗ್ ಕೌಚ್‌ಗೆ ಒಳಗಾಗಿ ಬಳಿಕ ವಿಡಿಯೊ ಲೀಕ್ ಆಗಿರುವ ಘಟನೆ ಕಾಲಿವುಡ್‌ನಲ್ಲಿ ನಡೆದಿದೆ.
ಹೌದು, ಶೃತಿ ನಾರಾಯಣನ್ ಎಂಬ ನಟಿಯದ್ದು ಎನ್ನಲಾದ 14 ನಿಮಿಷಗಳ ವಿಡಿಯೊ ಎಲ್ಲೆಡೆ ವೈರಲ್ ಆಗಿತ್ತು. ಎಕ್ಸ್ ಖಾತೆಯಲ್ಲಿ ಈ ವಿಡಿಯೊಗಳ ತುಣುಕೂ ಸಹ ಹರಿದಾಡಿತ್ತು. ನಟಿ ಇದು ನಕಲಿ ಎಂದು ಏನೇ ಸಮಜಾಯಿಷಿ ಕೊಟ್ಟರೂ ಪ್ರೇಕ್ಷಕರು ಇದು ನಕಲಿ ಅಲ್ಲ ಎಂದು ಕಾಮೆಂಟ್‌ನಲ್ಲೇ ನಟಿಗೆ ಪ್ರತಿಕ್ರಿಯೆ ನೀಡಿದ್ದರು.
ಹೀಗಿರುವಾಗಲೇ ನಿನ್ನೆಯಿಂದ ಇದೇ ನಟಿಯ ಮತ್ತೊಂದು ಖಾಸಗಿ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಇನ್ನು ಎರಡೂ ವಿಡಿಯೊಗಳೂ ಸಹ ಸಿನಿಮಾಗೆ ಸಂಬಂಧಿಸಿದ ವ್ಯಕ್ತಿಯೊಬ್ಬರ ಜತೆ ವಿಡಿಯೊದಲ್ಲಿರುವ ಯುವತಿ ಮಾಡಿದ ವಿಡಿಯೊ ಕಾಲ್ ಆಗಿದ್ದು, ಇದರಲ್ಲಿ ಹಲವಾರು ಬಾರಿ ಸಿನಿಮಾಗಾಗಿ ಆಡಿಷನ್ ಎಂದು ಉಲ್ಲೇಖಿಸಲಾಗಿದೆ. ಕೊನೆಯಲ್ಲಿ ಆಡಿಷನ್ ಕೊಟ್ಟಿದ್ದಕ್ಕೆ ಧನ್ಯವಾದ ಎಂಬ ಮಾತೂ ಸಹ ಇದೆ.
ಹೀಗೆ ವೈರಲ್ ಆಗಿರುವ ಈ ವಿಡಿಯೊಗಳು ಸದ್ಯ ಇದೀಗ ಮತ್ತೊಮ್ಮೆ ಕಾಲಿವುಡ್ ಅನ್ನು ಅತಿ ಹೀನಾಯ ಸ್ಥಿತಿಯಲ್ಲಿ ನಿಲ್ಲುವಂತೆ ಮಾಡಿವೆ.
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


