Tuesday, August 11, 2026
spot_img
More
    spot_img
    HomeLatest newsUgadi 2025 Wishes in Kannada;ಶ್ರೀ ವಿಶ್ವಾವಸು ನಾಮ ಸಂವತ್ಸರ ಯುಗಾದಿಗೆ ಶುಭ ಸಂದೇಶಗಳು

    Ugadi 2025 Wishes in Kannada;ಶ್ರೀ ವಿಶ್ವಾವಸು ನಾಮ ಸಂವತ್ಸರ ಯುಗಾದಿಗೆ ಶುಭ ಸಂದೇಶಗಳು

    ಭಾರತದ ಹಲವೆಡೆಗಳಲ್ಲಿ ಯುಗಾದಿಯನ್ನು ಹೊಸ ವರ್ಷದ ಮೊದಲ ದಿನ ಆಚರಿಸಲಾಗುತ್ತದೆ. ಹಿಂದೂ ಪಂಚಾಂಗದ ಪ್ರಕಾರ, ಇದು ಹೊಸ ವರ್ಷದ ಪ್ರಾರಂಭವನ್ನು ಸೂಚಿಸುತ್ತದೆ. “ಯುಗಾದಿ” ಎಂಬ ಪದ “ಯುಗ + ಆದಿ” ಎಂಬ ಸಂಯೋಜನೆಯಿಂದ ಉಂಟಾಗಿದ್ದು, ಹೊಸ ಯುಗದ ಆರಂಭವನ್ನು ಸೂಚಿಸುತ್ತದೆ. ಈ ಹಬ್ಬವು ಹಿಂದೂ ಸಮುದಾಯದಲ್ಲಿ ಅತ್ಯಂತ ವಿಜೃಂಭಣೆಯಿಂದ ಹಾಗೂ ಸಂಭ್ರಮದಿಂದ ಆಚರಿಸಲ್ಪಡುವ ಪ್ರಮುಖ ಹಬ್ಬಗಳಲ್ಲಿ ಒಂದಾಗಿದೆ.

    Advertisement

    ಯುಗಾದಿಯನ್ನು ಕನ್ನಡ ಮತ್ತು ತೆಲುಗು ಜನಾಂಗದ ಹೊಸ ವರ್ಷವಾಗಿ ಆಚರಿಸಲಾಗುತ್ತದೆ. ಈ ಹಬ್ಬದಲ್ಲಿ ಬೇವು-ಬೆಲ್ಲ ಸವಿಯುತ್ತಾ, ಜೀವನದ ಸಿಹಿ-ಕಹಿಗಳನ್ನು ಸಮಚಿತ್ತದಿಂದ ಸ್ವೀಕರಿಸುವ ಧನಾತ್ಮಕ ಮನೋಭಾವವನ್ನು ಪ್ರತಿಬಿಂಬಿಸುತ್ತೇವೆ. ಯುಗಾದಿ ಹಬ್ಬವನ್ನು ಹಿಂದೂಗಳು ಮಾತ್ರವಲ್ಲದೆ, ಸಿಂಧಿ ಸಮುದಾಯದವರು ಮತ್ತು ಮಹಾರಾಷ್ಟ್ರದ ಜನರೂ ಉತ್ಸಾಹದಿಂದ ಆಚರಿಸುತ್ತಾರೆ. ಈ ದಿನ, ಹೊಸ ಬಟ್ಟೆಗಳನ್ನು ಧರಿಸಿ, ಕುಟುಂಬಸ್ಥರು ಮತ್ತು ಸ್ನೇಹಿತರಿಗೆ ಶುಭಾಶಯ ಕೋರುತ್ತಾರೆ. ವಿಶೇಷವಾಗಿ ‘ಯುಗಾದಿ ಪಚಡಿ’ ಎಂಬ ವೈಶಿಷ್ಟ್ಯಮಯ ಖಾದ್ಯವನ್ನು ತಯಾರಿಸಲಾಗುತ್ತದೆ, ಇದರಲ್ಲಿ ಹಸಿ ಮಾವು, ಬೇವು, ಬೆಲ್ಲ, ಹುಣಸೆಹಣ್ಣು ಮತ್ತು ಮೆಣಸಿನಕಾಯಿ ಸೇರಿದಂತೆ ವಿವಿಧ ರುಚಿಗಳನ್ನು ಒಳಗೊಂಡಿರುತ್ತವೆ.

    ಯುಗಾದಿ ಹಬ್ಬದ ಶುಭಾಶಯಗಳೊಂದಿಗೆ ನಿಮ್ಮ ಪ್ರೀತಿಪಾತ್ರರಿಗೆ ಈ ಸಂದೇಶ ಕಳುಹಿಸಿ!

    *ನಿಮಗೂ, ನಿಮ್ಮ ಕುಟುಂಬಕ್ಕೂ ಯುಗಾದಿ ಹಬ್ಬದ ಶುಭಾಶಯಗಳು. ದೇವರು ನಿಮಗೆ ಬಯಸಿದ್ದೆಲ್ಲವನ್ನೂ ಕರುಣಿಸಲಿ. ವಿಶ್ವಾವಸು ನಾಮ ಸಂವತ್ಸರದ ಶುಭಾಶಯಗಳು.

    • ಈ ಹೊಸ ವರ್ಷದಲ್ಲಿ ನಿಮಗೆ ಸಂತೋಷ ಮತ್ತು ಸಮೃದ್ಧಿ ತರಲಿ. ನಿಮಗೂ ಮತ್ತು ನಿಮ್ಮ ಕುಟುಂಬದವರಿಗೂ ಯುಗಾದಿ ಹಬ್ಬದ ಶುಭಾಶಯಗಳು.

    *ಬೇವು ಬೆಲ್ಲ ಸವಿಯುತ ಕಹಿ ನೆನಪು ಮರೆಯಾಗಲಿ ಸಿಹಿ ನೆನಪು ಚಿರವಾಗಲಿ , ಹೊಸ ದಿನಗಳಲ್ಲಿ ನೀವು ಕಂಡ ಕನಸು ನನಸಾಗಲಿ . ಆ ದೇವರು ನಿಮ್ಮನ್ನು ಸದಾ ಸಂತೋಷದಿಂದಿರಿಸಲಿ

    *ಉತ್ಸಾಹ, ವಿಶ್ವಾಸದೊಂದಿಗೆ ಹೊಸ ಸಂವತ್ಸರವನ್ನು ಸ್ವಾಗತಿಸೋಣ. ಶಾಂತಿ, ನೆಮ್ಮದಿ, ಸಂತಸ, ಸಮೃದ್ಧಿಯ ನಿರೀಕ್ಷೆಯಲ್ಲಿ ಪ್ರಾಮಾಣಿಕವಾಗಿ ಬದುಕೋಣ. ಸರ್ವರಿಗೂ ಯುಗಾದಿ ಹಬ್ಬದ ಶುಭಾಶಯಗಳು

    *ಹಿಂದಿನ ಕಹಿ ಘಟನೆಗಳನ್ನು ಮರೆತು, ಹೊಸ ಭರವಸೆ, ಆಶಾವಾದದಿಂದ ಮುಂದೆ ನೋಡುವ ಸಮಯ ಇದು. ತಮಗೆಲ್ಲರಿಗೂ ಯುಗಾದಿ ಹಬ್ಬದ ಶುಭಾಶಯಗಳು.

    *ಬೇವು ತಿಂದರೆ ಕಹಿ. ಬೆಲ್ಲ ತಿಂದರೆ ಸಿಹಿ.ಸಿಹಿ ಕಹಿ ಎಲ್ಲರ ಜೀವನದಲ್ಲಿರುವ ಸುಖ ದುಃಖ.ಸಮನಾಗಿ ಇರಲೆಂದು ದೇವರಲ್ಲಿ ಪ್ರಾರ್ಥಿಸೋಣ.

    *ಕಂಡ ಕನಸುಗಳೆಲ್ಲಾ ಹೊಸ ವರ್ಷದ ಬೆಳಕಿನ ಸಿಂಚನದಲ್ಲಿ ಚಿಗುರಿ ಸಮೃದ್ಧವಾಗಿ ಬೆಳೆದು ನನಸಾಗಲಿ

    *ಈ ಯುಗಾದಿಯು ನಿಮ್ಮ ಜೀವನದಲ್ಲಿ ಬೆಲ್ಲವನ್ನೇ ಉಣ ಬಡಿಸಲಿ. ಬೇವು ಕಡಿಮೆ ಇರಲಿ. ನಿಮ್ಮೆಲ್ಲ ಕನಸುಗಳು ನನಸಾಗಲಿ. ಹ್ಯಾಪಿ ಯುಗಾದಿ

    *ಕಹಿಯಾದ ಬೇವಿನ ಅಂಚಿನಲ್ಲಿ ಬೆಲ್ಲದ ಸಿಂಚನ ಸಿಗಲಿ ನಿಮ್ಮ ಬಾಳಲ್ಲಿ ಹೊಸ ಚೇತನ, ಉತ್ಸಾಹ, ನೆಮ್ಮದಿ ಇರಲಿ ಯುಗಾದಿ ಹಬ್ಬದ ಶುಭಾಶಯಗಳು

    *ಹೊಸತನ್ನು ಹೊತ್ತು ಯುಗಾದಿ ಬಂದಿದೆ ಈ ಯುಗಾದಿ ಎಲ್ಲರ ಬಾಳಲಿ ಹೊಸ ಹರ್ಷ ತರಲಿ,ಬದುಕಿನಲ್ಲಿ ನೆಮ್ಮದಿ ಇರುವಂತೆ ಮಾಡಲಿ… ವಿಶ್ವಾವಸು ನಾಮ ಸಂವತ್ಸರದ ಶುಭಾಶಯಗಳು

    *ನವ ಚೇತನ ಬೆಲ್ಲದ ಸವಿಯ ತೋರುವ ಮನ ಬೇವನ್ನೂ ಬೆಲ್ಲವಾಗಿ ಸ್ವೀಕರಿಸುವ ಜೀವನ ಶ್ರೀ ವಿಶ್ವಾವಸು ನಾಮ ಸಂವತ್ಸರದ ಶುಭಾಶಯಗಳು

    *ಮರಳಿ ಬಂದಿದೆ ಯುಗಾದಿ.ತಂದಿದೆ ಹೊಸ ವರ್ಷದ ಆದಿ.ತೋರಲಿ ಹೊಸ ವರ್ಷಕ್ಕೆ ಹಾದಿ.


    Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ

    Subscribe to get the latest posts sent to your email.

    Leave a Reply

    Related News

    ಎಸ್‌ಐಆರ್ ಅಕ್ರಮ: ಎನ್‌ಡಿಎ ನಿಯೋಗ ಮುಖ್ಯ ಚುನಾವಣಾ ಆಯುಕ್ತರಿಗೆ ದೂರು

    ಕರ್ನಾಟಕದಲ್ಲಿ ಎಸ್‌ಐಆರ್ ಪ್ರಕ್ರಿಯೆ ದುರುಪಯೋಗದ ಆರೋಪದೊಂದಿಗೆ ಕುಮಾರಸ್ವಾಮಿ ಮತ್ತು ಪ್ರಲ್ಹಾದ ಜೋಶಿ ನೇತೃತ್ವದ ಎನ್‌ಡಿಎ ನಿಯೋಗ ನವದೆಹಲಿಯಲ್ಲಿ ಮುಖ್ಯ ಚುನಾವಣಾ ಆಯುಕ್ತರಿಗೆ ದಾಖಲೆ ಸಮೇತ ದೂರು ಸಲ್ಲಿಸಿತು.

    ಮಾದಪಟ್ಟಣ ಕ್ವಾರಿ ದುರಂತ: ಅಶೋಕ ತಲಾ ₹50 ಲಕ್ಷ ಪರಿಹಾರ ಆಗ್ರಹ

    ಬೆಂಗಳೂರು ಮಾದಪಟ್ಟಣ ಕ್ವಾರಿಯಲ್ಲಿ ಬಂಡೆ ಬಿದ್ದು 7 ಕಾರ್ಮಿಕರು ಮೃತಪಟ್ಟ ಘಟನೆಗೆ ಪ್ರತಿಪಕ್ಷ ನಾಯಕ ಆರ್.ಅಶೋಕ ರಾಜ್ಯ ಸರ್ಕಾರದ ನಿರ್ಲಕ್ಷ್ಯವೇ ಕಾರಣ ಎಂದು ದೂರಿ ತಲಾ ₹50 ಲಕ್ಷ ಪರಿಹಾರ ಒತ್ತಾಯಿಸಿದ್ದಾರೆ.

    Most Popular

    Recent Comments

    Home
    Play
    Notification
    Search

    Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ

    Subscribe now to keep reading and get access to the full archive.

    Continue reading