ಕೊಳ್ಳೇಗಾಲ: ನಗರದ ಸಮೀಪದಲ್ಲಿರುವ ತಿ ನರಸೀಪುರ ತಾಲೂಕಿನ ವ್ಯಾಪ್ತಿಯಲ್ಲಿ ಬರುವ ಮೇದಿನಿ ಗ್ರಾಮದ ಕಾವೇರಿ ನದಿಯಲ್ಲಿ ಈಜಲು ತೆರಳಿದ್ದ ಪಟ್ಟಣದ ಇಬ್ಬರು ವಿದ್ಯಾರ್ಥಿಗಳು ನೀರು ಪಾಲಾಗಿದ್ದಾರೆ.
ಕೊಳ್ಳೇಗಾಲದ ನಿಸರ್ಗ ಕಾಲೇಜು ದ್ವೀತಿಯ ಪಿಯುಸಿ ವಿದ್ಯಾರ್ಥಿ ಭರತ್ (17) ಹಾಗೂ ವಾಸವಿ ಕಾಲೇಜು ಪಿಯುಸಿ ವಿದ್ಯಾರ್ಥಿ ಲಿಖಿತ್(17) ನೀರು ಪಾಲಾದವರು.
ಇವರಿಬ್ಬರು ದ್ವಿತೀಯ ಪಿಯುಸಿ ಪರೀಕ್ಷೆ ವ್ಯಾಸಾಂಗ ಮುಗಿಸಿ ಪರೀಕ್ಷೆ ಬರೆದಿದ್ದರು. ಶನಿವಾರ ಇವರಿಬ್ಬರನ್ನು ಸೇರಿದಂತೆ ಐವರು ಸ್ನೇಹಿತರು ಮೇದನಿ ಗ್ರಾಮದ ಕಾವೇರಿ ನದಿಗೆ ಈಜಲು ತೆರಳಿದ್ದರು. ಈ ವೇಳೆ ಈಜಲಾಗದೆ ಲಿಖಿತ್ ಹಾಗೂ ಭರತ್ ನೀರು ಪಾಲಾಗಿದ್ದಾರೆ. ಮಾಹಿತಿ ತಿಳಿದ ತಲಕಾಡು ಪೊಲೀಸ್ ಠಾಣೆಯ ಪೊಲೀಸರು ನೀರಿನಲ್ಲಿ ಮುಳುಗಿದ ಬಾಲಕರ ಪತ್ತೆಗೆ ಶೋಧಕಾರ್ಯ ನಡೆ ಸುತ್ತಿದ್ದಾರೆ.
ಇನ್ನು ಮೇದಿನಿ ಗ್ರಾಮದ ಸಮೀಪದಲ್ಲಿರುವ ಕಾವೇರಿ ನದಿ ತೀರಪ್ರದೇಶದಲ್ಲಿ ಯಾವುದೇ ರೀತಿಯ ಎಚ್ಚರಿಕೆಯ ಫಲಕಗಳಾಗಲಿ, ರಕ್ಷಣಾ ಬೇಲಿಯಾಗಲಿ ಇಲ್ಲ. ಕಾವೇರಿ ನದಿಗೆ ಅಡ್ಡಲಾದ ಕಟ್ಟೆಯೊಂದು ಇಲ್ಲಿರುವ ಕಾರಣ ಸ್ಥಳದ ಪರಿಚಯ ಇರುವ ವಿದ್ಯಾರ್ಥಿಗಳು ಹಾಗೂ ಪಡ್ಡೆ ಹುಡುಗರ ಗುಂಪು ಇಲ್ಲಿಗೆ ವಾರಾಂತ್ಯದಲ್ಲಿ ಈಜಲು ಹಾಗೂ ಮೀನು ಹಿಡಿಯಲು ಆಗಮಿಸುತ್ತಿರುತ್ತಾರೆ. ಹೀಗಾಗಿ ಇಲ್ಲಿ ಮುನ್ನೆಚ್ಚರಿಕಾ ಕ್ರಮ ಕೈಗೊಂಡು ಎಚ್ಚರಿಕಾ ಫಲಕವನ್ನು ಹಾಕಬೇಕಿದೆ ಹಾಗೂ ನೀರಿನಲ್ಲಿ ಈಜದಂತೆ ನಿಯಮ ತರಬೇಕಾದ ಅಗತ್ಯವಿದೆ.
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


