ಬೆಂಗಳೂರು: ಕನ್ನಡ ಚಿತ್ರರಂಗದಲ್ಲಿ ಮತ್ತೊಮ್ಮೆ ಮಲ್ಟಿಪ್ಲೆಕ್ಸ್ಗಳಿಂದ ಕನ್ನಡ ಚಿತ್ರಗಳಿಗೆ ಸಮಸ್ಯೆ ಉಂಟಾಗಿದೆ. ಇತ್ತೀಚೆಗೆ ಬಿಡುಗಡೆಯಾದ ಯುದ್ಧಕಾಂಡ 2 ಚಿತ್ರವು ಬೆಂಗಳೂರಿನ ಮಲ್ಟಿಪ್ಲೆಕ್ಸ್ಗಳಲ್ಲಿ ಪ್ರೈಮ್ ಟೈಮ್ ಸ್ಲಾಟ್ಗಳನ್ನು ಕಳೆದುಕೊಳ್ಳುತ್ತಿದೆ ಎಂದು ಚಿತ್ರತಂಡ ಆರೋಪಿಸಿದೆ.
ಈ ಕುರಿತು ಮಾತನಾಡಿದ ನಟ ಅಜಯ್ ರಾವ್ “ಮಲ್ಟಿಪ್ಲೆಕ್ಸ್ಗಳು ಕನ್ನಡ ಸಿನಿಮಾಗಳಿಗೆ ಸಾಕಷ್ಟು ಪ್ರದರ್ಶನ ಕೊಡುತ್ತಿಲ್ಲ. ಕೊಡುವ ಕೆಲವೇ ಪ್ರದರ್ಶನಗಳು ಪ್ರೈಮ್ ಟೈಮ್ನಲ್ಲಿ ಇರುವುದಿಲ್ಲ, ಇದರಿಂದ ಪ್ರೇಕ್ಷಕರಿಗೆ ಸಿನಿಮಾ ನೋಡಲು ಕಷ್ಟವಾಗುತ್ತಿದೆ. ಒಳ್ಳೆಯ ಸಮಯದಲ್ಲಿ ಪ್ರದರ್ಶನ ಕೊಡಿ ಎಂದು ಭಿಕ್ಷೆ ಬೇಡುವ ಪರಿಸ್ಥಿತಿ ಬಂದಿದೆ. ಅಲ್ಲದೇ ಈ ವಾರ ಇನ್ನೂ ಹೆಚ್ಚಿನ ಪರಭಾಷಾ ಸಿನಿಮಾಗಳು ಬಿಡುಗಡೆಯಾಗಲಿದ್ದು, ಎಲ್ಲಿ ಪ್ರದರ್ಶನ ಸಿಗುತ್ತೊ ಅಲ್ಲಿ ಕೊಡುತ್ತೇವೆ ಎಂದಿದ್ದಾರೆ. ಈ ರೀತಿ ಅವರು ಕೊಡುವ ಪ್ರಸಾದವನ್ನು ಪಡೆಯುವಂತಹ ಕಾಲಘಟ್ಟದಲ್ಲಿ ನಾವಿದ್ದೀವಾ” ಎಂದು ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಈ ವಿಷಯದ ಬಗ್ಗೆ ಎಕ್ಸ್ ಬಳಕೆದಾರರು ಕಿಡಿಕಾರಿದ್ದಾರೆ: “ಕನ್ನಡ ಚೇಂಬರ್ಗೆ ಸೂಟ್ಕೇಸ್ಗಳು ಬರ್ತೀವೆ.. ಕಚಡಾ ಗಳು ಅವರಿಂದನೇ ಬೆಂಗಳೂರಿನಲ್ಲಿ ಬೇರೆ ಭಾಷೆಯ ಫಿಲ್ಮ್ಗೆ ಜಾಸ್ತಿ ಥಿಯೇಟರ್ ಸಿಕ್ತೀರೋದು,” ಎಂದು ಥಿಯೇಟರ್ ಹಂಚಿಕೆಯಲ್ಲಿ ಪಕ್ಷಪಾತ ಆರೋಪಿಸಿದ್ದಾರೆ.
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


