ಮೈಸೂರು: ಬಿಜೆಪಿ ಘಟಕದ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರ ಬಣದ 38 ಮಾಜಿ ಸಚಿವರು ಮತ್ತು ಶಾಸಕರ ತಂಡವು ಚಾಮುಂಡಿ ಬೆಟ್ಟಕ್ಕೆ ಭೇಟಿ ನೀಡಿ ತಾಯಿ ಚಾಮುಂಡೇಶ್ವರಿ ತಾಯಿಯ ದರ್ಶನ ಪಡೆದಿದ್ದಾರೆ.
ಇಂದು ಬೆಳಿಗ್ಗೆ ಚಾಮುಂಡಿ ಬೆಟ್ಟಕ್ಕೆ ಭೇಟಿ ನೀಡಿದ ಬಿಜೆಪಿ ಮುಖಂಡರ ತಂಡವೂ ವಿಜಯೇಂದ್ರ ಪರ ಶಕ್ತಿ ಪ್ರದರ್ಶನ ಮಾಡಿದ್ದಾರೆ. ಈ ವೇಳೆ ಎಂ.ಪಿ.ರೇಣುಕಾಚಾರ್ಯ, ಬಿ.ಸಿ.ಪಾಟೀಲ್, ಎಲ್. ನಾಗೇಂದ್ರ, ಕಟ್ಟಾ ಸುಬ್ರಮಣ್ಯ ನಾಯ್ಡು, ವೈ.ಸಂಪಂಗಿ, ರೂಪಾಲಿ ನಾಯಕ, ಅಶೋಕ ಕಾಟವರ, ಹರ್ಷವರ್ಧನ್, ವಿರೂಪಾಕ್ಷ ಬಳ್ಳಾರಿ, ಗಂಗಾಧರ ನಾಯಕ್, ಗುಂಡಪ್ಪ ವಕೀಲ, ಸುನಿಲ್ ಹೆಗಡೆ, ಲಕ್ಷ್ಮೀ ನಾರಾಯಣ, ವೆಂಕಟ ಮುನಿಯಪ್ಪ, ಮಾಧವ ಮಲ್ಲಿಕಾರ್ಜುನ, ಸೋಮಶೇಖರ ರೆಡ್ಡಿ, ಶ್ರೀನಿವಾಸ ಸಜ್ಜನರ, ಶಿಡ್ಲಘಟ್ಟ ರಾಜಣ್ಣ, ಮುನಿಸ್ವಾಮಿ, ಬಸವರಾಜ ನಾಯಕ, ಸುರೇಶ ಮಾರಿಹಾಳ, ಎಸ್.ವಿ.ರಾಮಚಂದ್ರ, ನಿರಂಜನ, ಬೆಳ್ಳಿ ಪ್ರಕಾಶ, ಮಸಾಲ ಜಯರಾಂ, ತರೀಕೆರೆ ಸುರೇಶ, ಪರಣ್ಣ ಮುನವಳ್ಳಿ ಹಾಗೂ ಹರ್ಷವರ್ಧನ ಅವರು ತಾಯಿ ಚಾಮುಂಡೇಶ್ವರಿ ದರ್ಶನ ಪಡೆದು ಶಕ್ತಿ ಪ್ರದರ್ಶನ ಮಾಡಿದ್ದಾರೆ.
ಇದೇ ಸಂದರ್ಭದಲ್ಲಿ ಬಿಜೆಪಿ ನಾಯಕರೆಲ್ಲರೂ ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ಅವರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


