2024 ಮುಕ್ತಾಯವಾಗುತ್ತಿದ್ದು, ಇನ್ನೆರಡು ದಿನಗಳಲ್ಲಿ ನೂತನ ವರ್ಷಕ್ಕೆ ಕಾಲಿಡಲು ಜನ ಕಾತರರಾಗಿ ಕಾಯುತ್ತಿದ್ದಾರೆ.
ಹೊಸ ವರ್ಷದ ರೆಸೊಲ್ಯೂಷನ್ ಕುರಿತ ಚರ್ಚೆಗಳೂ ಸಹ ಜೋರಾಗಿದ್ದು, ಈ ವರ್ಷದ ನೆನಪುಗಳನ್ನೂ ಸಹ ಮೆಲುಕು ಹಾಕುತ್ತಿದ್ದಾರೆ. ಇನ್ನು ಸೆಲೆಬ್ರಿಟಿಗಳ ಪಾಲಿಗೂ ಇದು ಅನ್ವಯಿಸಲಿದೆ. ಈ ವರ್ಷ ಅನೇಕರು ಒಳ್ಳೊಳ್ಳೆ ಸಿನಿಮಾ ಮಾಡಿ ಸದ್ದು ಮಾಡಿದ್ದರೆ, ಇನ್ನೂ ಕೆಲ ಕಲಾವಿದರು ಜೈಲಿಗೆ ಹೋಗುವ ಮೂಲಕ ಸುದ್ದಿ ಮಾಡಿದ್ದರು.
ಹೀಗೆ 2024ರಲ್ಲಿ ಜೈಲಿಗೆ ಹೋದ ಕಲಾವಿದರ ಪಟ್ಟಿ ಕೆಳಕಂದಂತಿದೆ..
ದರ್ಶನ್
ರೇಣುಕಾಸ್ವಾಮಿ ಕೊ* ಪ್ರಕರಣದಲ್ಲಿ ನಟ ದರ್ಶನ್ ಜೂನ್ 11ರಂದು ಬಂಧನವಾಗಿದ್ದರು. ಬಳಿಕ ವಿಚಾರಣೆ ಎದುರಿಸಿದರು. ಪ್ರಕರಣದಲ್ಲಿ ಎ2 ಆರೋಪಿಯಾಗಿ ದರ್ಶನ್ ಪರಪ್ಪನ ಅಗ್ರಹಾರ ಜೈಲು ಸೇರುವಂತಾಯಿತು. ಅಲ್ಲಿ ರಾಜಾತಿಥ್ಯ ಸಿಗುತ್ತಿದೆ ಎಂದು ಗೊತ್ತಾದ ಬಳಿಕ ಬಳ್ಳಾರಿ ಜೈಲಿಗೆ ಅವರನ್ನು ಸ್ಥಳಾಂತರಿಸಲಾಗಿತ್ತು. ಕೊನೆಗೆ ಆರೋಗ್ಯ ಸಮಸ್ತೆ ನೆಪವೊಡ್ಡಿ ಮಧ್ಯಂತರ ಜಾಮೀನು ಪಡೆದು ದರ್ಶನ್ ಹೊರ ಬಂದರು. ಒಟ್ಟು 141 ದಿನ ದರ್ಶನ್ ಜೈಲಿನಲ್ಲಿ ಕಳೆದರು.
ತೆಲುಗು ಡಾನ್ಸ್ ಮಾಸ್ಟರ್ ಜಾನಿ
ಅಪ್ರಾಪ್ತ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದಲ್ಲಿ ಖ್ಯಾತ ಕೊರಿಯೋಗ್ರಫರ್ ಜಾನಿ ಮಾಸ್ಟರ್ ಜೈಲು ಸೇರಿದ್ದರು. ತಮ್ಮ ತಂಡದಲ್ಲೇ ಇದ್ದ ಯುವತಿಯ ಲೈಂಗಿಕ ದೌರ್ಜನ್ಯ ನಡೆಸಿರುವುದಾಗಿ ಸಂತ್ರಸ್ತ ಯುವತಿ ದೂರಿದ್ದರು. ಈ ಸಂಬಂಧ ಡ್ಯಾನ್ಸ್ ಮಾಸ್ಟರ್ ವಿರುದ್ಧ ಫೋಕ್ಸೋ ಪ್ರಕರಣ ದಾಖಲಾಗಿತ್ತು. ಜೈಲು ಸೇರಿದ್ದ ಜಾನಿ ಮಾಸ್ಟರ್ ಬಳಿಕ ಷರತ್ತುಬದ್ಧ ಜಾಮೀನು ಪಡೆದು ಹೊರಬಂದರು.
ಪವಿತ್ರಾ ಗೌಡ
ದರ್ಶನ್ ಬಂಧನವಾಗಿದ್ದ ರೇಣುಕಾಸ್ವಾಮಿ ಪ್ರಕರಣದಲ್ಲೇ ನಟಿ ಪವಿತ್ರಾ ಗೌಡ ಕೂಡ ದರ್ಶನ್ ಜೊತೆ ಜೈಲು ಸೇರುವಂತಾಗಿತ್ತು. ಪವಿತ್ರಾಗೆ ರೇಣುಕಾಸ್ವಾಮಿ ಕೆಟ್ಟದಾಗಿ ಮೆಸೇಜ್ ಕಳುಹಿಸಿದ್ದರು. ಅದು ದರ್ಶನ್‌ಗೆ ಗೊತ್ತಾಗಿ ಆತನನ್ನು ಅಪಹರಿಸಿ ಬೆಂಗಳೂರಿಗೆ ಕರೆತಂದು ಬುದ್ಧಿಕಲಿಸಲು ಮುಂದಾಗಿದ್ದರು. ಆದ ಆತನ ಪ್ರಾಣವೇ ಹೋಗಿತ್ತು. 179 ದಿನಗಳ ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದ ಆಕೆ ಇತ್ತೀಚೆಗೆ ಜಾಮೀನು ಪಡೆದು ಹೊರ ಬಂದರು.
ತೆಲುಗು ನಟ ಅಲ್ಲು ಅರ್ಜುನ್
ಇತ್ತೀಚೆಗೆ ಜೈಲು ಸೇರುವಂತಾಗಿತ್ತು ಮಧ್ಯಂತರ ಜಾಮೀನು ಪಡೆದರೂ ಕೂಡ ಒಂದು ರಾತ್ರಿ ಚಂಚಲಗೂಡ್ ಜೈಲಿನಲ್ಲಿರುವಂತಾಯಿತು. ‘ಪುಷ್ಪ’-2 ಸಿನಿಮಾ ಪ್ರೀಮಿಯರ್ ಶೋ ವೇಳೆ ನಡೆದ ಕಾಲ್ತುಳಿತ ಪ್ರಕರಣದಲ್ಲಿ ಮಹಿಳೆಯೊಬ್ಬರು ಸಾವನ್ನಪ್ಪಿದ್ದರು. ಆಕೆಯ ಪುತ್ರ ಆಸ್ಪತ್ರೆಯಲ್ಲಿದ್ದಾನೆ. ಅಲ್ಲು ಅರ್ಜುನ್ ಸರಿಯಾದ ಭದ್ರತೆ ಇಲ್ಲದೇ ಸಿನಿಮಾ ನೋಡಲು ಚಿತ್ರಮಂದಿರಕ್ಕೆ ಬಂದಿದ್ದೇ ಇಷ್ಟಕ್ಕೆಲ್ಲಾ ಕಾರಣ ಎನ್ನಲಾಗ್ತಿದೆ.
ನಟಿ ಕಸ್ತೂರಿ ಶಂಕರ್
ತಮಿಳುನಾಡಿನಲ್ಲಿ ನೆಲೆಸಿರುವ ತೆಲುಗು ಜನರ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿ ನಟಿ ಕಸ್ತೂರಿ ಶಂಕರ್ ಕೂಡ ಸಂಕಷ್ಟ ಎದುರಿಸಿದ್ದರು. ಅವಹೇಳನಕಾರಿ ಹೇಳಿಕೆ ಸಂಬಂಧ ಹೈದರಾಬ್ ಪೊಲೀಸರು ಆಕೆಯನ್ನು ಬಂಧಿಸಿದ್ದರು. ಬಳಿಕ ಚೆನ್ನೈಗೆ ಆಕೆಯನ್ನು ಕರೆತರಲಾಗಿತ್ತು. ವಿಚಾರಣಾಧೀನ ಕೈದಿಯಾಗಿ ಕಸ್ತೂರಿ ಬಳಿಕ ಷರತ್ತುಬದ್ಧ ಜಾಮೀನು ಪಡೆದು ಜೈಲಿನಿಂದ ಬಿಡುಗಡೆ ಆಗಿದ್ದರು.
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


