ಬೆಂಗಳೂರು: ನೌಕರರ ಭವಿಷ್ಯ ನಿಧಿಯನ್ನು ಸಾಮಾನ್ಯವಾಗಿ ಇಪಿಎಫ್(EPF) ಎಂದು ಕರೆಯಲಾಗುತ್ತದೆ. ಇದು ಭಾರತದಲ್ಲಿ ಉದ್ಯೋಗಿಗಳಿಗೆ ಉಳಿತಾಯ,ಪಿಂಚಣಿ, ಹಾಗು ವಿಮಾ ಸೌಲಭ್ಯಗಳನ್ನು ನೀಡುವ ಸಂಸ್ಥೆಯಾಗಿದ್ದು, ಇದು ಭಾರತದ ಎಲ್ಲ ಉದ್ಯೋಗಿಗಳಿಗೂ ಕಡ್ಡಾಯವಾಗಿದೆ. ಇಪಿಎಫ್ ಖಾತೆಯಿಂದ ಹಣ ವಿತ್ ಡ್ರಾ ಮಾಡೋಕೆ ಈಗ ಮೊದಲಿನ ಹಾಗೆ ಕಚೇರಿಯಿಂದ ಕಚೇರಿಗೆ ಅಲೆದಾಟ ನಡೆಸಬೇಕಾಗಿಲ್ಲ. ತಿಂಗಳುಗಟ್ಟಲೆ ಕಾಯಬೇಕಾಗಿಯೂ ಇಲ್ಲ. ಆನ್ ಲೈನ್ ನಲ್ಲಿ ಯುಎಎನ್(UAN) ಪೋರ್ಟಲ್ ಗೆ ಭೇಟಿ ನೀಡಿ ಪ್ರಕ್ರಿಯೆ ಪೂರ್ಣಗೊಳಿಸಬಹುದು.
ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆ(Employees Provident Fund Organization) ಇಪಿಎಫ್ ಗ್ರಾಹಕರ ಖಾತೆಗಳಿಗೆ ಬಡ್ಡಿಯನ್ನು ಜಮಾ ಮಾಡುತ್ತಿದೆ. ಇಪಿಎಫ್ ಖಾತೆದಾರರು ತಮ್ಮ ಠೇವಣಿ ಮೊತ್ತದಿಂದ ಸ್ವಲ್ಪ ಮೊತ್ತವನ್ನು ಹಿಂಪಡೆಯಬಹುದು. ಇಪಿಎಫ್ ಹಣವನ್ನು ಆನ್‌ಲೈನ್‌ನಲ್ಲಿ ಹಿಂಪಡೆಯುವುದು ಹೇಗೆ ಎಂದು ಹಂತ ಹಂತವಾಗಿ ವಿವರಿಸಲಾಗಿದೆ. ಉದ್ಯೋಗಿಗಳು ನಿವೃತ್ತಿಯ ಬಳಿಕ ತಮ್ಮ ಇಪಿಎಫ್ ಖಾತೆಯಲ್ಲಿರುವ ಉಳಿತಾಯದ ಸಂಪೂರ್ಣ ಹಣವನ್ನು ಹಿಂಪಡೆಯಬಹುದು. ಆದರೆ, ಕೆಲವೊಂದು ನಿರ್ದಿಷ್ಟ ಸಂದರ್ಭಗಳಲ್ಲಿ ಅವರು ಪಿಎಫ್(PF) ಖಾತೆಯಲ್ಲಿರುವ ಸ್ವಲ್ಪ ಹಣವನ್ನು ವಿತ್ ಡ್ರಾ ಮಾಡಲು ಅವಕಾಶವಿದೆ. ಉದ್ಯೋಗಕ್ಕೆ ರಾಜೀನಾಮೆ ನೀಡಿದ ಎರಡು ತಿಂಗಳ ಬಳಿಕ ಇಪಿಎಫ್‌ನಲ್ಲಿರೋ ಸಂಪೂರ್ಣ ಹಣವನ್ನು ಹಿಂಪಡೆಯಲು ಉದ್ಯೋಗಿ ಅರ್ಹನಾಗಿರುತ್ತಾನೆ. ಆದ್ರೆ ಆತ ಹೊಸ ಉದ್ಯೋಗಕ್ಕೆ ಇದೇ ಪಿಎಫ್ ಖಾತೆಯನ್ನು ವರ್ಗಾಯಿಸಿರಬಾರದಷ್ಟೆ.
ಬೇರೆ ಉದ್ಯೋಗಕ್ಕೆ ಸೇರದಿರೋರು, ಹೊಸ ಸಂಸ್ಥೆಯಲ್ಲಿ ಹೊಸ ಪಿಎಫ್ ಖಾತೆ ತೆರೆದಿರೋರು ಹಾಗೂ ನಿವೃತ್ತಿಯಾದವರು ಎರಡು ತಿಂಗಳ ಬಳಿಕ ಪಿಎಫ್ ಖಾತೆಯಲ್ಲಿರೋ ಹಣವನ್ನು ಪಡೆಯಬಹುದು. ಇದೀಗ ಪಿಎಫ್ ಚಂದಾದಾರರು ಅಡ್ವಾನ್ಸ್ ನ್ನು ವಿತ್ ಡ್ರಾ ಮಾಡಿಕೊಳ್ಳುವುದಕ್ಕಾಗಿ ಇಪಿಎಫ್ಓ ಯುನಿಫೈಡ್ ಪೋರ್ಟಲ್ ಆಗಿರುವ mem.epfindia.gov.in ನಲ್ಲಿ ಅರ್ಜಿ ಸಲ್ಲಿಸಬಹುದು. ನಂತರ ನೀವು ಸಲ್ಲಿಸಿದ ಅರ್ಜಿಯ ಅನುಮೋದನೆಗಾಗಿ ನಿಮ್ಮ ಉದ್ಯೋಗದಾತರಿಗೆ ಅದನ್ನು ಕಳುಹಿಸಿಕೊಡಲಾಗುತ್ತದೆ.ಒಮ್ಮೆ ಅನುಮೋದನೆ ದೊರೆತ ನಂತರ ನಿಮ್ಮ ಪಿಎಫ್ ಹಣವು ನಿಮ್ಮ ಖಾತೆಗೆ ಜಮಾಗೊಳ್ಳುತ್ತದೆ. ಅದಕ್ಕಾಗಿ ನೀವು ಹೆಚ್ಚು ದಿನ ಕಾಯಬೇಕಾಗೂ ಇಲ್ಲ. ಕೇವಲ 10 ದಿನದ ಒಳಗೆ ನಿಮ್ಮ ಹಣ ನಿಮ್ಮ ಕೈ ಸೇರುತ್ತದೆ.
ಆನ್‌ಲೈನ್ ಮೂಲಕ ಪಿಎಫ್ ಹಣವನ್ನು ಹಿಂಪಡೆಯುವುದು ಹೇಗೆ
1 ಯುಎಎನ್ ಮೆಂಬರ್ ಇ-ಸೇವಾ ಪೋರ್ಟಲ್‌ಗೆ ಭೇಟಿ ನೀಡಿ.
2 ನಿಮ್ಮ ಯುನಿವರ್ಸಲ್ ಅಕೌಂಟ್ ಸಂಖ್ಯೆ (ಯುಎಎನ್) ಮತ್ತು ಪಾಸ್‌ವರ್ಡ್ ಅನ್ನು ನಮೂದಿಸಿ ಮತ್ತು ಕ್ಯಾಪ್ಚಾವನ್ನು ನಮೂದಿಸಿ. ತದನಂತರ, ಸೈನ್ ಇನ್ ಬಟನ್ ಕ್ಲಿಕ್ ಮಾಡಿ.
3 ಈಗ, ಮೇಲಿನ ಮೆನುವಿನಿಂದ ಆನ್‌ಲೈನ್ ಸೇವೆಗಳ ಮೇಲೆ ಕ್ಲಿಕ್ ಮಾಡಿ ಮತ್ತು ನಂತರ CLAIM (FORM-31,19,10C & 10D) ಆಯ್ಕೆಯ ಮೇಲೆ ಕ್ಲಿಕ್ ಮಾಡಿ.
4 ಆನ್‌ಲೈನ್ ಕ್ಲೈಮ್ ಫಾರ್ಮ್‌ನಲ್ಲಿ ಕಂಡುಬರುವ ವಿವರಗಳನ್ನು ಪರಿಶೀಲಿಸಿ.
5 ಪರಿಶೀಲಿಸಿದ ನಂತರ, ನಿಮ್ಮ ಬ್ಯಾಂಕ್ ಖಾತೆ ಸಂಖ್ಯೆಯನ್ನು ನಮೂದಿಸಿ.
6 ಪರಿಶೀಲನೆ ಬಟನ್ ಕ್ಲಿಕ್ ಮಾಡಿ ಮತ್ತು ನಂತರ ಪ್ರಮಾಣಪತ್ರದಲ್ಲಿ ಲಭ್ಯವಿರುವ Yes ಬಟನ್ ಕ್ಲಿಕ್ ಮಾಡಿ.
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


