Tuesday, September 1, 2026
spot_img
More
    spot_img
    HomeLatest newsBIG NEWS: ಓಲಾ, ಊಬರ್ ರೀತಿ ಆಂಬ್ಯುಲೆನ್ಸ್ ಬುಕ್‌ ಮಾಡಲು ಸರ್ಕಾರದಿಂದ ಅಪ್ಲಿಕೇಶನ್

    BIG NEWS: ಓಲಾ, ಊಬರ್ ರೀತಿ ಆಂಬ್ಯುಲೆನ್ಸ್ ಬುಕ್‌ ಮಾಡಲು ಸರ್ಕಾರದಿಂದ ಅಪ್ಲಿಕೇಶನ್

    ಕಾರವಾರ: ಕರ್ನಾಟಕದಲ್ಲಿ ಶೀಘ್ರವೇ ಓಲಾ, ಊಬರ್ ರೀತಿಯಲ್ಲಿ ಆಂಬ್ಯು ಲೆನ್ಸ್ ಅನ್ನು ಬುಕ್ ಮಾಡುವಂಥ ಸೌಲಭ್ಯ ಬರಲಿದೆ. ಅಷ್ಟೇ ಅಲ್ಲದೆ, ಆಂಬ್ಯುಲೆನ್ಸ್ ಸೇವೆಗಳನ್ನು ಕರ್ನಾಟಕ ಪೈವೇಟ್ ಮೆಡಿಕಲ್ ಎಸ್ಟಾಬ್ಲಿಷ್ ಮೆಂಟ್ಸ್ (ಕೆಪಿಎಂಎ) ಕಾಯ್ದೆಯಡಿ ತರಲು ನಿರ್ಧರಿಸಲಾಗಿದೆ.

    Advertisement

    ಆಂಬ್ಯುಲೆನ್ಸ್ ಹೇಗಿರಬೇಕು, ಎಷ್ಟು ಶುಲ್ಕ ಪಡೆಯಬೇಕು ಎನ್ನುವ ಬಗ್ಗೆ ಮಾನದಂಡ ರೂಪಿಸಲಾಗುತ್ತಿದ್ದು, ಆಂಬ್ಯುಲೆನ್ಸ್‌ನಲ್ಲಿ ಏನಿರಬೇಕು. ಏನಿರಬಾರದು ಎಂಬ ನಿಯಮ ಗಳನ್ನು ಜಾರಿಗೆ ತರಲಾಗುತ್ತದೆ.

    ಕಾರವಾರದಲ್ಲಿ ಮಾತನಾಡಿದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ ಗುಂಡೂರಾವ್ ಆಂಬ್ಯುಲೆನ್ಸ್ ಸೇವೆಗಳನ್ನು ಕರ್ನಾಟಕ ಪ್ರೈವೇಟ್ ಮೆಡಿಕಲ್ ಎಸ್ಟಾಬ್ಲಿಷ್ ಮೆಂಟ್ಸ್ ಕಾಯ್ದೆಯೊಳಗೆ ತರುವ ತಿದ್ದುಪಡಿ ಮಸೂದೆಯನ್ನು ಬರುವ ಅಧಿವೇಶದಲ್ಲಿ ಮಂಡಿಸಲಾಗುತ್ತದೆ ಎಂದರು.

    ಇನ್ನು ಮುಂದೆ ಮೊಬೈಲ್ ಆರೋಗ್ಯ ಘಟಕ ಮತ್ತು ಅಂಬುಲೆನ್ಸ್‌ಗೆ ಕೆಪಿಎಂಎ ಅನುಮತಿ ಬೇಕಾಗುತ್ತದೆ. ಆಂಬ್ಯುಲೆನ್ಸ್‌ನಲ್ಲಿ ಏನೇನಿರಬೇಕು, ಹೇಗಿರಬೇಕು, ದರ ಎಷ್ಟಿರಬೇಕು ಎಲ್ಲವನ್ನು ಕಾನೂನು ಅಡಿ ತರುತ್ತಿದ್ದೇವೆ. ಅಲ್ಲದೆ, ಮುಂದೆ ಆಂಬ್ಯುಲೆನ್ಸ್ ಸೇವೆಯನ್ನು ಓಲಾ, ಊಬರ್ ಆ್ಯಪ್ ರೀತಿಯಲ್ಲಿ ಆಯ್ಕೆ ಮಾಡಿಕೊಳ್ಳುವ ಪಾರದರ್ಶಕತೆಯನ್ನು ತರುತ್ತಿದ್ದೇವೆ ಎಂದರು. ಅಂದರೆ, ಆಂಬ್ಯುಲೆನ್ಸ್ ಸೇವೆಯಲ್ಲಿ ಮೊದಲೇ ದರ ನಿಗದಿಯಾಗಿ ರುತ್ತದೆ. ಬೇಕಾಬಿಟ್ಟಿ ಹಣ ಪಡೆಯುವುದನ್ನು ತಪ್ಪಿಸಲು ಈ ರೀತಿಯ ವ್ಯವಸ್ಥೆ ತರಲಾಗುತ್ತಿದೆ ಎಂದು ಹೇಳಿದರು.

    ನಾಳೆಯಿಂದ ಯುಪಿಐನಲ್ಲಿ ಹಲವು ಬದಲಾವಣೆ; ಬ್ಯಾಲೆನ್ಸ್‌ ಚೆಕ್‌ ಮಾಡಲು ಇಷ್ಟು ಬಾರಿ ಮಾತ್ರ ಅವಕಾಶ

    ಎಐ ಕನ್ನಡ ಕೃಷಿ ವೆಬ್‌ಸೈಟ್‌ಗಾಗಿ ಇಲ್ಲಿ ಕ್ಲಿಕ್‌ ಮಾಡಿ


    Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ

    Subscribe to get the latest posts sent to your email.

    Leave a Reply

    Related News

    ಎಸ್‌ಐಆರ್ ಅಕ್ರಮ: ಎನ್‌ಡಿಎ ನಿಯೋಗ ಮುಖ್ಯ ಚುನಾವಣಾ ಆಯುಕ್ತರಿಗೆ ದೂರು

    ಕರ್ನಾಟಕದಲ್ಲಿ ಎಸ್‌ಐಆರ್ ಪ್ರಕ್ರಿಯೆ ದುರುಪಯೋಗದ ಆರೋಪದೊಂದಿಗೆ ಕುಮಾರಸ್ವಾಮಿ ಮತ್ತು ಪ್ರಲ್ಹಾದ ಜೋಶಿ ನೇತೃತ್ವದ ಎನ್‌ಡಿಎ ನಿಯೋಗ ನವದೆಹಲಿಯಲ್ಲಿ ಮುಖ್ಯ ಚುನಾವಣಾ ಆಯುಕ್ತರಿಗೆ ದಾಖಲೆ ಸಮೇತ ದೂರು ಸಲ್ಲಿಸಿತು.

    ಮಾದಪಟ್ಟಣ ಕ್ವಾರಿ ದುರಂತ: ಅಶೋಕ ತಲಾ ₹50 ಲಕ್ಷ ಪರಿಹಾರ ಆಗ್ರಹ

    ಬೆಂಗಳೂರು ಮಾದಪಟ್ಟಣ ಕ್ವಾರಿಯಲ್ಲಿ ಬಂಡೆ ಬಿದ್ದು 7 ಕಾರ್ಮಿಕರು ಮೃತಪಟ್ಟ ಘಟನೆಗೆ ಪ್ರತಿಪಕ್ಷ ನಾಯಕ ಆರ್.ಅಶೋಕ ರಾಜ್ಯ ಸರ್ಕಾರದ ನಿರ್ಲಕ್ಷ್ಯವೇ ಕಾರಣ ಎಂದು ದೂರಿ ತಲಾ ₹50 ಲಕ್ಷ ಪರಿಹಾರ ಒತ್ತಾಯಿಸಿದ್ದಾರೆ.

    Most Popular

    Recent Comments

    Home
    Play
    Notification
    Search

    Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ

    Subscribe now to keep reading and get access to the full archive.

    Continue reading