Thursday, September 3, 2026
spot_img
More
    spot_img
    HomeLatest newsಆಟೋ ಪ್ರಯಾಣ ಈಗ ಇನ್ನಷ್ಟು ದುಬಾರಿ: ಬೆಂಗಳೂರಿನಲ್ಲಿ ನಾಳೆಯಿಂದ ಹೊಸ ದರಗಳು ಜಾರಿ

    ಆಟೋ ಪ್ರಯಾಣ ಈಗ ಇನ್ನಷ್ಟು ದುಬಾರಿ: ಬೆಂಗಳೂರಿನಲ್ಲಿ ನಾಳೆಯಿಂದ ಹೊಸ ದರಗಳು ಜಾರಿ

    ಇದೀಗ ಬೆಂಗಳೂರು ನಗರದಲ್ಲಿ ಆಟೋದಾರ ಏರಿಕೆಯಾಗಿದ್ದು, ನಾಳೆ (ಆಗಸ್ಟ್ 1) ರಿಂದ ಪರಿಷ್ಕೃತ ದರಗಳು ಜಾರಿಗೆ ಬರಲಿವೆ. ಬೆಂಗಳೂರಿನ ಡಿಸಿ ಅಧಿಕೃತ ಆದೇಶ ಹೊರಡಿಸಿ, ಆಟೋರಿಕ್ಷಾ ದರಗಳನ್ನು ಹೆಚ್ಚಿಸಿದ್ದು, ಈಗಾಗಲೇ ಕೆಎಸ್‌ಆರ್‌ಟಿಸಿ ಬಸ್ ಮತ್ತು ನಮ್ಮ ಮೆಟ್ರೋ ಟಿಕೆಟ್ ದರ ಏರಿಕೆಯಿಂದ ನೊಂದಿರುವ ಪ್ರಯಾಣಿಕರಿಗೆ ಮತ್ತೊಂದು ಆರ್ಥಿಕ ಹೊರೆ ಉಂಟಾಗಿದೆ.ಹೊಸ ದರಗಳ ಪ್ರಕಾರ, ಆರಂಭಿಕ ಎರಡು ಕಿಲೋಮೀಟರ್ ಪ್ರಯಾಣಕ್ಕೆ ₹36 ನಿಗದಿಪಡಿಸಲಾಗಿದ್ದು, ನಂತರ ಪ್ರತಿಕಿಲೋಮೀಟರ್‌ಗೆ ₹18 ಶುಲ್ಕ ವಿಧಿಸಲಾಗುತ್ತದೆ. ಕಾಯುವಿಕೆ ದರದಲ್ಲಿ ಮೊದಲ ಐದು ನಿಮಿಷ ಉಚಿತವಾಗಿದ್ದು, ನಂತರ ಪ್ರತಿ 15 ನಿಮಿಷಗಳಿಗೋಸ್ಕರ ₹10 ವಿಧಿಸಲಾಗುತ್ತದೆ. ಲಗೇಜ್‌ಗಾಗಿ 20 ಕೆ.ಜಿವರೆಗೆ ಶುಲ್ಕವಿಲ್ಲ, ಆದರೆ ಅದಕ್ಕಿಂತ ಅಧಿಕ ತೂಕಕ್ಕೆ ₹10 ಹೆಚ್ಚುವರಿ ಶುಲ್ಕ ವಿಧಿಸಲಾಗುವುದು.

    Advertisement

    ರಾತ್ರಿಯ ವೇಳೆಯಲ್ಲಿ, ಅಂದರೆ ರಾತ್ರಿ 10 ರಿಂದ ಬೆಳಿಗ್ಗೆ 5 ರವರೆಗೆ, ಸಾಮಾನ್ಯ ದರದ ತೊಂದರೆಯಿಂದ 1.5 ಪಟ್ಟು ಹೆಚ್ಚು ದರವನ್ನು ಪಾವತಿಸಬೇಕಾಗುತ್ತದೆ. ಹೊಸ ದರಪಟ್ಟಿ ಪ್ರತಿಯೊಂದು ಆಟೋದಲ್ಲಿ ಕಡ್ಡಾಯವಾಗಿ ಪ್ರದರ್ಶಿಸಬೇಕು ಹಾಗೂ ಅಕ್ಟೋಬರ್ 31, 2025ರೊಳಗೆ ಹೊಸ ಮೀಟರ್‌ಗಳನ್ನು ಅಳವಡಿಸಿಕೊಳ್ಳುವಂತೆ ಅಧಿಕಾರಿಗಳು ಸೂಚಿಸಿದ್ದಾರೆ.ಈ ದರ ಏರಿಕೆಯಿಂದ ನಗರದ ಜನರ ದೈನಂದಿನ ಪ್ರಯಾಣದ ವೆಚ್ಚ ಹೆಚ್ಚಾಗುವ ಆತಂಕವಿದ್ದು, ಆಟೋ ಚಾಲಕರ ಒತ್ತಾಯಕ್ಕೆ ಮಣಿದು ಸರ್ಕಾರ ಈ ನಿರ್ಧಾರ ಕೈಗೊಂಡಿರುವುದು ನಗರದಲ್ಲಿ ಚರ್ಚೆಗೆ ಕಾರಣವಾಗಿದೆ.ಆ.1ರಿಂದ ಆಟೋ ದರ ಏರಿಕೆಯಾಗಲಿದ್ದು, ಕೆಲವು ಸೂಚನೆಗಳನ್ನು ನೀಡಿದ್ದಾರೆ. ಈ ಪೈಕಿ ಆಟೋ ದರ ಏರಿಕೆ ಬಳಿಕ ಹೆಚ್ಚುವರಿ ಹಣವನ್ನು ಪಡೆಯುವಂತಿಲ್ಲ. ಒಂದು ವೇಳೆ ಹೆಚ್ಚುವರಿ ಹಣ ಪಡೆದರೆ ಚಾಲಕರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದ್ದಾರೆ.ಬೆಂಗಳೂರು ನಗರ ಜಿಲ್ಲೆಯ ಪ್ರಾದೇಶಿಕ ಸಾರಿಗೆ ಪ್ರಾಧಿಕಾರವು ಆಟೋರಿಕ್ಷಾ ಮೀಟರ್ ದರ ಪರಿಷ್ಕರಣೆ ಕುರಿತು ಕೂಲಂಕಷವಾಗಿ ಪರಿಶೀಲಿಸಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಆಟೋರಿಕ್ಷಾ ದರಗಳನ್ನು ಈ ಕೆಳಕಂಡಂತೆ ಪರಿಷ್ಕರಣೆ ಮಾಡಿ ದಿನಾಂಕ: 01-08-2025 ರಿಂದ ಜಾರಿಗೆ ಬರುವಂತೆ ಆದೇಶಿಸಿದೆ.

    ಬೆಂಗಳೂರು ಆಟೋ ದರ ಪರಿಷ್ಕರಣೆ ಆಗಸ್ಟ್ 1, 2025ರಿಂದ ಜಾರಿಗೆ

    1) ಕನಿಷ್ಠ ದರ:ಮೊದಲ 2 ಕಿ.ಮೀ.ಗೆ ₹36 (ಮೂರು ಜನರಿಗೆ)

    2) ನಂತರದ ದರ:ಪ್ರತಿ ಅತಿ ರಷ್ಟು ಕಿ.ಮೀ.ಗೆ ₹18 (ಮೂರು ಜನರಿಗೆ)

    3) ಕಾಯುವಿಕೆ ದರ:ಮೊದಲ 5 ನಿಮಿಷ ಉಚಿತ,ನಂತರ ಪ್ರತಿ 15 ನಿಮಿಷಕ್ಕೆ ₹10

    4) ಲಗೇಜ್ ಶುಲ್ಕ:20 ಕೆ.ಜಿ.ವರೆಗೆ ಉಚಿತ,ಅದಕ್ಕಿಂತ ಹೆಚ್ಚಿನ ತೂಕಕ್ಕೆ ಪ್ರತಿ 20 ಕೆ.ಜಿಗೆ ₹10,ಗರಿಷ್ಠ ಲಗೇಜ್ ಲಿಮಿಟ್ 50 ಕೆ.ಜಿ.

    5) ರಾತ್ರಿ ವೇಳೆ ಹೆಚ್ಚುವರಿ ದರ:ರಾತ್ರಿ 10:00 ರಿಂದ ಬೆಳಗ್ಗೆ 5:00 ರವರೆಗೆ,ಸಾಮಾನ್ಯ ದರ + ಅದರ ಅರ್ಧ ಪಟ್ಟು ಹೆಚ್ಚುವರಿ ದರ ವಿಧಿಸಲಾಗುತ್ತದೆ

    6) ಅಧಿಕೃತ ಸೂಚನೆಗಳು:ಈ ಪರಿಷ್ಕೃತ ದರಪಟ್ಟಿಯನ್ನು ಪ್ರತಿಯೊಂದು ಆಟೋದಲ್ಲಿಯೂ ಸ್ಪಷ್ಟವಾಗಿ ಪ್ರದರ್ಶಿಸಬೇಕು,ಪುನಃ ಸತ್ಯಾಪಿತ ಮೀಟರ್‌ಗಳನ್ನು ಅಕ್ಟೋಬರ್ 31, 2025ರೊಳಗೆ (90 ದಿನಗಳೊಳಗೆ) ಅಳವಡಿಸಿ ಮುದ್ರೆ ಹಾಕಿಸಿಕೊಳ್ಳುವುದು ಕಡ್ಡಾಯ

    ಮದ್ಯದ ಹಣಕ್ಕಾಗಿ ತಾಯಿಯ ಹತ್ಯೆ: ಕೊಡಲಿಯಿಂದ ಕೊಚ್ಚಿದ ಮಗನ ಬಂಧನ

    ಕೃಷಿ ಎಐ ಕನ್ನಡ ವೆಬ್‌ಸೈಟ್‌ಗಾಗಿ ಇಲ್ಲಿ ಕ್ಲಿಕ್‌ ಮಾಡಿ


    Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ

    Subscribe to get the latest posts sent to your email.

    Leave a Reply

    Related News

    ಎಸ್‌ಐಆರ್ ಅಕ್ರಮ: ಎನ್‌ಡಿಎ ನಿಯೋಗ ಮುಖ್ಯ ಚುನಾವಣಾ ಆಯುಕ್ತರಿಗೆ ದೂರು

    ಕರ್ನಾಟಕದಲ್ಲಿ ಎಸ್‌ಐಆರ್ ಪ್ರಕ್ರಿಯೆ ದುರುಪಯೋಗದ ಆರೋಪದೊಂದಿಗೆ ಕುಮಾರಸ್ವಾಮಿ ಮತ್ತು ಪ್ರಲ್ಹಾದ ಜೋಶಿ ನೇತೃತ್ವದ ಎನ್‌ಡಿಎ ನಿಯೋಗ ನವದೆಹಲಿಯಲ್ಲಿ ಮುಖ್ಯ ಚುನಾವಣಾ ಆಯುಕ್ತರಿಗೆ ದಾಖಲೆ ಸಮೇತ ದೂರು ಸಲ್ಲಿಸಿತು.

    ಮಾದಪಟ್ಟಣ ಕ್ವಾರಿ ದುರಂತ: ಅಶೋಕ ತಲಾ ₹50 ಲಕ್ಷ ಪರಿಹಾರ ಆಗ್ರಹ

    ಬೆಂಗಳೂರು ಮಾದಪಟ್ಟಣ ಕ್ವಾರಿಯಲ್ಲಿ ಬಂಡೆ ಬಿದ್ದು 7 ಕಾರ್ಮಿಕರು ಮೃತಪಟ್ಟ ಘಟನೆಗೆ ಪ್ರತಿಪಕ್ಷ ನಾಯಕ ಆರ್.ಅಶೋಕ ರಾಜ್ಯ ಸರ್ಕಾರದ ನಿರ್ಲಕ್ಷ್ಯವೇ ಕಾರಣ ಎಂದು ದೂರಿ ತಲಾ ₹50 ಲಕ್ಷ ಪರಿಹಾರ ಒತ್ತಾಯಿಸಿದ್ದಾರೆ.

    Most Popular

    Recent Comments

    Home
    Play
    Notification
    Search

    Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ

    Subscribe now to keep reading and get access to the full archive.

    Continue reading