ದಕ್ಷಿಣ ಕನ್ನಡ: ಧರ್ಮಸ್ಥಳದಲ್ಲಿ ಸರಣಿ ಕೊಲೆ ಹಾಗೂ ಅತ್ಯಾಚಾರ ಕೊಲೆಗಳು ನಡೆದಿವೆ ಎಂದು ಆರೋಪ ಮಾಡಿ ತಾನೇ ಆ ಶವಗಳನ್ನು ಹೂತುಹಾಕಿದ್ದಾಗಿ ದೂರು ನೀಡಿದ್ದ ಅನಾಮಿಕ ವ್ಯಕ್ತಿ ಆ ಶವಗಳನ್ನು ಹೂತ ಸ್ಥಳ ತೋರಿಸಿ ಅಗೆದು ತೋರಿಸುವುದಾಗಿ ಹೇಳಿಕೊಂಡಿದ್ದ.
ಆ ದೂರಿನ ಮೇರೆಗೆ ರಾಜ್ಯ ಸರ್ಕಾರ ಎಸ್‌ಐಟಿ ರಚನೆ ಮಾಡಿದ್ದು, ತನಿಖೆ ಭರದಿಂದ ನಡೆಯುತ್ತಿದೆ. ಮೊದಲೆರಡು ದಿನ 5 ಕಡೆ ಗುಂಡಿ ಅಗೆದ ಎಸ್‌ಐಟಿ ತಂಡಕ್ಕೆ ಯಾವುದೇ ಕುರುಹು ಪತ್ತೆಯಾಗಿರಲಿಲ್ಲ. ಆದರೆ ಇಂದು ( ಜುಲೈ 31 ) ಆರನೇ ಪಾಯಿಂಟ್‌ನಲ್ಲಿ ಅಗೆಯಲು ಮುಂದಾದಾಗ ಮೊದಲಿಗೆ 2 ಎಲುಬು ಮೂಳೆಗಳು ಪತ್ತೆಯಾಗಿದ್ದವು.
ನಂತರ ಎಸ್‌ಐಟಿ ಅಧಿಕಾರಿಳು ಮತ್ತಷ್ಟು ಆಳಕ್ಕೆ ಅಗೆಸಿದ್ದು, ಕೈಕಾಲ ಮೂಳೆಗಳು ಹಾಗೂ ತಲೆ ಬುರುಡೆಯ ಒಂದು ಪೀಸ್ ಪತ್ತೆಯಾಗಿದೆ ಎಂದು ತಿಳಿದುಬಂದಿದೆ.
ಈ ಎಲ್ಲ ಮೂಳೆಗಳನ್ನು ಸಂಗ್ರಹಿಸಿರುವ ಎಸ್‌ಐಟಿ ಅಧಿಕಾರಿಗಳು ಅವುಗಳನ್ನು ಎಫ್‌ಎಎಸ್‌ಎಲ್ ಅಧಿಕಾರಿಗಳಿಗೆ ಹಸ್ತಾಂತರಿಸಿದ್ದು, ಲ್ಯಾಬ್‌ಗೆ ಕೊಂಡೊಯ್ಯಲಿದ್ದಾರೆ.
IBPS ಕ್ಲರ್ಕ್ ನೇಮಕಾತಿ 2025: ಅರ್ಜಿ ಪ್ರಕ್ರಿಯೆ ಆಗಸ್ಟ್ 1ರಿಂದ ಪ್ರಾರಂಭ!
ಎಐ ಕನ್ನಡ ಕೃಷಿ ವೆಬ್‌ಸೈಟ್‌ಗಾಗಿ ಇಲ್ಲಿ ಕ್ಲಿಕ್ ಮಾಡಿ
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


