ಪ್ರೇಮ್ ಸಿನಿಮಾ ಎಂದಾಕ್ಷಣ ಎಲ್ಲರ ತಲೆಗೆ ಮೊದಲು ಬರುವುದೇ ಚಾರ್ಟ್ಬಸ್ಟರ್ ಹಾಡುಗಳು. ವಿಲನ್ ಸಿನಿಮಾವರೆಗೂ ಈ ಛಾಪನ್ನು ಉಳಿಸಿಕೊಂಡು ಬಂದಿದ್ದ ಪ್ರೇಮ್ ಏಕ್ಲವ್ಯಾ ಚಿತ್ರದಲ್ಲಿ ಸಂಗೀತ ನಿರ್ದೇಶಕರಿಂದ ಟ್ರೆಂಡ್ಗೆ ತಕ್ಕ ಕೆಲಸ ತೆಗೆಸುವಲ್ಲಿ ಎಡವಿದರು.
ಸದ್ಯ ಧ್ರುವ ಸರ್ಜಾಗೆ ಕೆಡಿ ಎಂಬ ಎಂಬತ್ತರ ದಶಕರ ಕಥೆಯುಳ್ಳ ಸಿನಿಮಾವನ್ನು ನಿರ್ದೇಶನ ಮಾಡಿರುವ ಪ್ರೇಮ್ ಒಂದೊಂದಾಗಿ ರಿಚ್ ಆಗಿ ಹಾಡುಗಳನ್ನು ಬಿಡುಗಡೆ ಮಾಡುತ್ತಾ ಬಂದಿದ್ದಾರೆ. ಚಿತ್ರದ ಮೊದಲ ಹಾಡು ಶಿವ ಶಿವ ದೊಡ್ಡ ಮಟ್ಟದಲ್ಲಿ ಸದ್ದು ಮಾಡಿತು. ಪ್ರೇಮ್ ಹಾಗೂ ಕೈಲಾಶ್ ಖೇರ್ ದನಿಗಳಲ್ಲಿ ಮೂಡಿ ಬಂದಿದ್ದ ಈ ಹಾಡು ಕೆಲವೇ ಗಂಟೆಗಳಲ್ಲಿ ಹಿಟ್ ಲಿಸ್ಟ್ ಸೇರಿತ್ತು.
ಮೊದಲ ಹಾಡಿನ ಗೆಲುವಿನ ಬಳಿಕ ಸೆಟ್ಟಾಗಲ್ಲ ಹೋಗೆ ನಂಗೂ ನಿಂಗೂ ಎಂಬ ಎರಡನೇ ಹಾಡನ್ನು ಚಿತ್ರತಂಡ ಬಿಡುಗಡೆ ಮಾಡಿದ್ದು, ಈ ಹಾಡು ಹೇಳಿಕೊಳ್ಳುವ ಮಟ್ಟಕ್ಕೆ ಕೇಳುಗರಿಗೆ ಇಷ್ಟವಾಗಿಲ್ಲ. ಪ್ರೇಮ್ ಈ ಹಾಡಿಗೆ ಸಾಹಿತ್ಯ ಬರೆದಿದ್ದು, ಮಿಕಾ ಸಿಂಗ್ ದನಿ ನೀಡಿದ್ದಾರೆ. ಬಹುಶಃ ಕನ್ನಡದ ಗಾಯಕರನ್ನು ಬಳಸಿದ್ದರೆ ಹಾಡು ಚೆನ್ನಾಗಿದೆ ಎಂಬ ಫೀಲ್ ನೀಡುತ್ತಿತ್ತೇನೋ.
ಇನ್ನು ಇದೇ ಹಾಡಿನ ಟ್ಯೂನ್ ಒಂದರ ವಿಚಾರವಾಗಿ ಇದೀಗ ಸಂಗೀತ ನಿರ್ದೇಶಕ ಅರ್ಜುನ್ ಜನ್ಯಾ ಸಾಮಾಜಿಕ ಜಾಲತಾಣದಲ್ಲಿ ಭಾರೀ ಟ್ರೋಲ್ ಎದುರಿಸುತ್ತಿದ್ದಾರೆ. ಹೌದು, ನೆಟ್ಟಿಗರು ಈ ಹಾಡಿನ ಟ್ಯೂನ್ ಒಂದು ಕೆಜಿಎಫ್ ಚಿತ್ರದ ಸಲಾಂ ರಾಕಿ ಭಾಯ್ ಹಾಡಿನ ಟ್ಯೂನ್ ಎಂದು ಆರೋಪಿಸುತ್ತಿದ್ದು ಹಾಡಿನ ತುಣುಕನ್ನು ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


