ಪ್ರಸ್ತುತ ನಡೆಯುತ್ತಿರುವ 18ನೇ ಐಪಿಎಲ್ ಆವೃತ್ತಿಯಲ್ಲಿ ರಾಜಸ್ಥಾನ್ ರಾಯಲ್ಸ್ ಮೊದಲೆರಡು ಪಂದ್ಯಗಳನ್ನು ಸೋತು ಮೂರನೇ ಪಂದ್ಯದಲ್ಲಿ ಜಯ ಸಾಧಿಸುವ ಮೂಲಕ ಅಂಕಪಟ್ಟಿಯಲ್ಲಿ ಗೆಲುವಿನ ಖಾತೆ ತೆರೆದಿದೆ.
ಭಾರತದ ಮಾಜಿ ಕ್ರಿಕೆಟಿಗ, ದಂತಕತೆ ರಾಹುಲ್ ದ್ರಾವಿಡ್ ರಾಜಸ್ಥಾನ್ ರಾಯಲ್ಸ್ ತಂಡವನ್ನು ಕೋಚ್ ಆಗಿ ಮುನ್ನಡೆಸುತ್ತಿದ್ದು, ಟೂರ್ನಿ ಆರಂಭಕ್ಕೂ ಮುನ್ನ ಆದ ಗಾಯದ ಕಾರಣ ವೀಲ್ ಚೇರ್ ಬಳಸಿ ಸದ್ಯ ಶಸ್ತ್ರ ಚಿಕಿತ್ಸೆಯಾಗಿದ್ದರೂ ಸಹ ಮೈದಾನಕ್ಕಿಳಿದು ತಮ್ಮ ಕರ್ತವ್ಯ ನಡೆಸುತ್ತಿದ್ದಾರೆ.
ಹೀಗಿರುವಾಗ ಅಂಬಾಟಿ ರಾಯುಡು ರಾಹುಲ್ ದ್ರಾವಿಡ್ ವೀಲ್ ಚೇರ್ ಬಳಸಿದ್ದರ ಕುರಿತು ನಾಲಿಗೆ ಹರಿಬಿಟ್ಟಿದ್ದಾರೆ. ಮಾತಿನ ಮೇಲೆ ಹಿಡಿತವಿರದೇ ಈ ಹಿಂದೊಮ್ಮೆ ಕೆವಿನ್ ಪೀಟರ್ ಸನ್ ಬಾಯಿಂದ ಜೋಕರ್ ಎನಿಸಿಕೊಂಡಿದ್ದ ರಾಯುಡು ಇದೀಗ ದ್ರಾವಿಡ್ ಬಗ್ಗೆ ಮಾತನಾಡಿ ಕ್ರಿಕೆಟ್ ಪ್ರಿಯರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.
ಚೆನ್ನೈ ಸೂಪರ್ ಕಿಂಗ್ಸ್ ಮತ್ತು ರಾಜಸ್ಥಾನ್ ರಾಯಲ್ಸ್ ತಂಡಗಳ ನಡುವಿನ ಪಂದ್ಯದ ವೇಳೆ ಕಾಮೆಂಟರಿ ಮಾಡುತ್ತಿದ್ದ ರಾಯುಡು ‘ದ್ರಾವಿಡ್ ಅವರಿಗೆ ಏನಾಯಿತು? ಮೈದಾನದಲ್ಲಿ ವೀಲ್ ಚೇರ್ ಬಳಸಲು ಅನುಮತಿ ಇದೆಯಾ?’ ಎಂದು ಹೇಳಿಕೆ ನೀಡುವ ಮೂಲಕ ಮತ್ತೊಮ್ಮೆ ಟ್ರೋಲ್ ಮಟಿರಿಯಲ್ ಆಗಿದ್ದಾರೆ.
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


