Saturday, November 7, 2026
spot_img
More
    spot_img
    HomeLatest newsUPSC ನೇಮಕಾತಿ 2025: ವಿವಿಧ ಹುದ್ದೆಗಳಿಗಾಗಿ ಅರ್ಜಿ ಆಹ್ವಾನ

    UPSC ನೇಮಕಾತಿ 2025: ವಿವಿಧ ಹುದ್ದೆಗಳಿಗಾಗಿ ಅರ್ಜಿ ಆಹ್ವಾನ

    ಬೆಂಗಳೂರು;ಕೇಂದ್ರ ಸರ್ಕಾರ ವ್ಯಾಪ್ತಿಯಲ್ಲಿ ಉದ್ಯೋಗ ಹುಡುಕುತ್ತಿರುವವರಿಗೆ ಉತ್ತಮ ಅವಕಾಶ ಒದಗಿ ಬಂದಿದೆ. ಕೇಂದ್ರ ಲೋಕಸೇವಾ ಆಯೋಗ (UPSC) ಹಿರಿಯ ಪಶುವೈದ್ಯಾಧಿಕಾರಿ ಸೇರಿದಂತೆ ವಿವಿಧ ಹುದ್ದೆಗಳಿಗೆ ನೇಮಕಾತಿ ಆರಂಭಿಸಿದ್ದು, ಈ ಸಂಬಂಧ ಅಧಿಕೃತ ಪ್ರಕಟಣೆ ಹೊರಡಿಸಲಾಗಿದೆ. ಆಸಕ್ತ ಅಭ್ಯರ್ಥಿಗಳು ಕೂಡಲೇ UPSC ವೆಬ್‌ಸೈಟ್ http://www.upsc.gov.in ಮೂಲಕ ಆನ್‌ಲೈನ್ ಅರ್ಜಿ ಸಲ್ಲಿಸಬೇಕು.ಈ ನೇಮಕಾತಿಯಡಿಯಲ್ಲಿ UPSC ಹುದ್ದೆಗಳ ಭರ್ತಿಗೆ ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದ್ದು, ಈಗಾಗಲೇ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಆರಂಭವಾಗಿದೆ.

    ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 2025ರ ಮೇ 15 ಎಂದು ನಿಗದಿಪಡಿಸಲಾಗಿದೆ. ಅಂತಿಮ ದಿನದವರೆಗೆ ಕಾಯದೇ, ಶೀಘ್ರದಲ್ಲಿ ಅರ್ಜಿ ಸಲ್ಲಿಸಲು ಅಭ್ಯರ್ಥಿಗಳಿಗೆ ಸೂಚಿಸಲಾಗಿದೆ.ಈ ನೇಮಕಾತಿ ಅಭಿಯಾನದಲ್ಲಿ UPSC ಒಟ್ಟು 40 ಹುದ್ದೆಗಳನ್ನು ಭರ್ತಿ ಮಾಡುವ ಗುರಿಯನ್ನು ಹೊಂದಿದ್ದು, ಪ್ರಕಟಿತ ಹುದ್ದೆಗಳಲ್ಲಿ ಹಿರಿಯ ಪಶುವೈದ್ಯಾಧಿಕಾರಿ, ವಿಜ್ಞಾನಿ-ಬಿ, ವೈಜ್ಞಾನಿಕ ಅಧಿಕಾರಿ, ಎಂಜಿನಿಯರ್ ಮತ್ತಿತರ ಹುದ್ದೆಗಳು ಸೇರಿವೆ.ಇದರಲ್ಲಿ ವಿದ್ಯಾರ್ಹತೆ, ವಯೋಮಿತಿ, ಖಾಲಿ ಹುದ್ದೆಗಳ ಸಂಖ್ಯೆ ಮತ್ತು ಇತರ ಮಾಹಿತಿಗೆ UPSC ವೆಬ್‌ಸೈಟ್ ಭೇಟಿನೀಡಿ.

    ನೇಮಕಾತಿ ಪೂರ್ಣ ವಿವರ ನೇಮಕಾತಿ ಸಂಸ್ಥೆ:ಕೇಂದ್ರ ಲೋಕಸೇವಾ ಆಯೋಗ (UPSC)

    ಹುದ್ದೆಗಳ ಹೆಸರು: ಹಿರಿಯ ಪಶು ವೈಧ್ಯಾಧಿಕಾರಿ ಮತ್ತು ಇತರ

    ಒಟ್ಟು ಹುದ್ದೆಗಳ ಸಂಖ್ಯೆ: 40

    ಅರ್ಜಿ ಸಲ್ಲಿಕೆ ವಿಧಾನ: ಆನ್‌ಲೈನ್ ಅರ್ಜಿ ಸಲ್ಲಿಕೆ

    ವಿಳಾಸ: http://www.upsc.gov.in

    ಅರ್ಜಿ ಸಲ್ಲಿಕೆ ಕೊನೆ ದಿನ: ಮೇ 15

    ಮಾಸಿಕ ವೇತನ: ನಿಯಮಾನುಸಾರ

    ಗರಿಷ್ಠ ವಯೋಮಿತಿ: ಹುದ್ದೆಗೆ ಅನುಗುಣವಾಗಿ 30 ರಿಂದ 38

    ಅರ್ಜಿ ಶುಲ್ಕ

    ಮಹಿಳಾ ಅಭ್ಯರ್ಥಿಗಳು, ಎಸ್‌ಸಿ/ಎಸ್‌ಟಿ ವರ್ಗದವರು ಮತ್ತು ಬೆಂಚ್‌ಮಾರ್ಕ್ ಅಂಗವಿಕಲರು ಅರ್ಜಿ ಶುಲ್ಕದಿಂದ ಸಂಪೂರ್ಣ ವಿನಾಯಿತಿಯಿದ್ದಾರೆ.

    ಇತರ ವರ್ಗದ ಅಭ್ಯರ್ಥಿಗಳಿಗೆ ರೂ.25/- ಅರ್ಜಿ ಶುಲ್ಕವನ್ನು ಪಾವತಿಸುವುದು ಕಡ್ಡಾಯವಾಗಿದೆ.

    ಪಾವತಿಸುವ ವಿಧಾನಗಳು

    ಎಸ್‌ಬಿಐನ ಯಾವುದೇ ಶಾಖೆಯಲ್ಲಿ ನಗದು ಠೇವಣಿ

    ಬ್ಯಾಂಕಿನ ನೆಟ್ ಬ್ಯಾಂಕಿಂಗ್ ಸೌಲಭ್ಯ

    ವೀಸಾ/ಮಾಸ್ಟರ್/ರುಪೇ ಕ್ರೆಡಿಟ್ ಅಥವಾ ಡೆಬಿಟ್ ಕಾರ್ಡ್ ಬಳಸಿ

    ಯುಪಿಐ (UPI) ಪಾವತಿ

    ಪ್ರಮುಖ ದಿನಾಂಕ

    ಅರ್ಜಿಯ ಆರಂಭ ದಿನಾಂಕ: ಈಗಾಗಲೇ ಪ್ರಾರಂಭವಾಗಿದೆ

    ಅರ್ಜಿಯ ಕೊನೆ ದಿನಾಂಕ: 2025 ಮೇ 15

    UPSC ಗೆ ಅರ್ಜಿ ಸಲ್ಲಿಸುವ ವಿಧಾನ:

    ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ upsc.gov.in

    ‘Recruitments’ ವಿಭಾಗವನ್ನು ಆಯ್ಕೆಮಾಡಿ ಹಾಗೂ ಸಂಬಂಧಿತ ಹುದ್ದೆಯ ಲಿಂಕ್ ಮೇಲೆ ಕ್ಲಿಕ್ ಮಾಡಿ.

    ಹುದ್ದೆಯನ್ನು ಆಯ್ಕೆಮಾಡಿ ಮತ್ತು ಅರ್ಜಿ ನಮೂನೆಯನ್ನು ಶ್ರದ್ಧೆಯಿಂದ ಭರ್ತಿ ಮಾಡಿ.

    ಅಗತ್ಯ ದಾಖಲೆಗಳನ್ನು ಸಕಾಲದಲ್ಲಿ ಸ್ಕ್ಯಾನ್ ಮಾಡಿ ಹಾಗೂ ಅಪ್ಲೋಡ್ ಮಾಡಿ.

    ಅರ್ಜಿ ಶುಲ್ಕವನ್ನು ಪಾವತಿಸಿ, ನಂತರ ಫೈನಲ್ ಸಬ್ಮಿಷನ್ ಮಾಡಿ.


    Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ

    Subscribe to get the latest posts sent to your email.

    LEAVE A REPLY

    Related News

    ಮಹಾಲಯ ಅಮಾವಾಸ್ಯೆ 2026: ಅಕ್ಟೋಬರ್ 10ರಂದು ಆಚರಣೆ; ಪಿತೃಪೂಜೆಯ ಮಹತ್ವವೇನು?

    ಹಿಂದೂ ಧರ್ಮದಲ್ಲಿ ಮಹಾಲಯ ಅಮಾವಾಸ್ಯೆಗೆ ವಿಶೇಷ ಸ್ಥಾನವಿದೆ. ಪಿತೃಪಕ್ಷದ ಕೊನೆಯ ದಿನವಾದ ಈ ಸಂದರ್ಭದಲ್ಲಿ ಪೂರ್ವಜರನ್ನು ಸ್ಮರಿಸಿ, ಅವರ ಆತ್ಮಕ್ಕೆ ಶಾಂತಿ ಕೋರಿ ವಿವಿಧ ಧಾರ್ಮಿಕ ವಿಧಿವಿಧಾನಗಳನ್ನು ನೆರವೇರಿಸಲಾಗುತ್ತದೆ. ಈ ದಿನ ಶ್ರಾದ್ಧ,...

    ಕರ್ನಾಟಕಕ್ಕೆ ಗುಡ್‌ನ್ಯೂಸ್: ಯುಬಿಯಿಂದ ₹4,500 ಕೋಟಿ ಕೊಡುಗೆ, 36 ಸಾವಿರಕ್ಕೂ ಹೆಚ್ಚು ಉದ್ಯೋಗ

    ಬೆಂಗಳೂರು: ದೇಶದ ಅತಿದೊಡ್ಡ ಬಿಯರ್ ಉತ್ಪಾದನಾ ಸಂಸ್ಥೆ ಹಾಗೂ ಹೈನೆಕನ್‌ ಕಂಪನಿಯ ಭಾಗವಾಗಿರುವ ಬೆಂಗಳೂರು ಮೂಲದ 'ಯುನೈಟೆಡ್ ಬ್ರೂವರೀಸ್ ಲಿಮಿಟೆಡ್' (ಯುಬಿಎಲ್‌), ಕರ್ನಾಟಕದ ಆರ್ಥಿಕತೆ ಮತ್ತು ಉದ್ಯೋಗ ಸೃಷ್ಟಿಯಲ್ಲಿ ಮಹತ್ವದ ಪಾತ್ರ ವಹಿಸುತ್ತಿದೆ...

    Most Popular

    Recent Comments

    Home
    Play
    Notification
    Search