ನಿನ್ನೆ ( ಏಪ್ರಿಲ್ 30 ) ಕೇಂದ್ರ ಸರ್ಕಾರ ಜಾತಿಗಣತಿ ಮಾಡುವುದಾಗಿ ಘೋಷಣೆ ಮಾಡಿದೆ. ಮುಂಬರುವ ಜನಗಣತಿ 2025ರಲ್ಲಿ ಜಾತಿ ಆಧಾರಿತ ಸಮೀಕ್ಷೆಯನ್ನು ಸೇರಿಸಲಾಗುವುದು ಎಂದು ಘೋಷಿಸಿದೆ.
ಮೋದಿ ಸರ್ಕಾರ ಈ ಘೋಷಣೆ ಮಾಡುತ್ತಿದ್ದಂತೆ ಕಾಂಗ್ರೆಸ್ ಬೆಂಬಲಿಗರು ಸಾಮಾಜಿಕ ಜಾಲತಾಣದಲ್ಲಿ ಟ್ರೋಲ್ ಶುರುವಿಟ್ಟುಕೊಂಡಿದ್ದಾರೆ. ಕಾರಣ ರಾಹುಲ್ ಗಾಂಧಿ ಈ ಹಿಂದೆ ಇದೇ ಜಾತಿಗಣತಿಯನ್ನು ಪ್ರಸ್ತಾಪಿಸಿದಾಗ ಇಡೀ ಬಿಜೆಪಿ ಹಿಂಬಾಲಕರು ಹೀನಾಯವಾಗಿ ಟ್ರೋಲ್ ಮಾಡಿತ್ತು. ಹಿಂದೂಗಳ ಒಗ್ಗಟ್ಟನ್ನು ಒಡೆಯುವ ಹುನ್ನಾರ ಎಂದು ಕಿಡಿಕಾರಿತ್ತು. ಬಿಜೆಪಿ ನಾಯಕರು ಹಾಗೂ ಬಿಜೆಪಿಗೆ ಜೈ ಎಂದ ಮೈತ್ರಿ ನಾಯಕರು ಸಹ ಇದೇ ರೀತಿ ರಾಹುಲ್ ಗಾಂಧಿ ವಿರುದ್ಧ ಕಿಡಿಕಾರಿದ್ದರು.
ಅಲ್ಲದೇ ರಾಜ್ಯ ಕಾಂಗ್ರೆಸ್ ಸರ್ಕಾರ ಜಾತಿಗಣತಿ ವರದಿ ಸ್ವೀಕರಿಸಿದಾಗಲೂ ಇದೇ ರೀತಿಯ ಟೀಕೆಗಳು ವ್ಯಕ್ತವಾಗಿದ್ದವು. ಆದರೆ ಇದೀಗ ಮೋದಿ ಸರ್ಕಾರ ಸಹ ಅದೇ ಹಾದಿಯಲ್ಲಿ ಜಾತಿ ಗಣತಿಗೆ ಮುಂದಾಗಿದ್ದು, ಅಂದು ಜಾತಿಗಣತಿ ವಿರುದ್ಧ ಮಾತನಾಡಿದವರಿಗೆ ಭಾರೀ ಹಿನ್ನಡೆಯಾಗಿದೆ.
ಹೀಗೆ ಜಾತಿಗಣತಿ ಟೀಕಿಸಿದ್ದವರನ್ನು ಕಾಂಗ್ರೆಸ್ ಬೆಂಬಲಿಗರು ಇದೀಗ ನಮ್ಮ ಸರದಿ ಎಂಬಂತೆ ಹೀನಾಯವಾಗಿ ಟೀಕಿಸುತ್ತಿದ್ದಾರೆ. ಈ ಟೀಕೆಗೆ ಕೇಂದ್ರ ಸಚಿವ ಎಚ್‌ಡಿ ಕುಮಾರಸ್ವಾಮಿ ಸಹ ಒಳಗಾಗಿದ್ದಾರೆ. ರಾಜ್ಯ ಸರ್ಕಾರದ ಜಾತಿಗಣತಿ ಬಗ್ಗೆ ʼಇದು ಜಾತಿಗಣಿಯೇ ಅಥವಾ ವೈರತ್ವ ಮೂಡಿಸುವ ಗಣತಿಯೇ?ʼ ಎಂದು ಟ್ವೀಟ್ ಮಾಡಿ ಕಿಡಿಕಾರಿದ್ದರು.
ನಿನ್ನೆ ಕೇಂದ್ರ ಸರ್ಕಾರ ಜಾತಿಗಣತಿ ಮಾಡಲಿದೆ ಎಂದು ಸುದ್ದಿ ಹೊರಬಿದ್ದ ನಂತರ ಟ್ವೀಟ್ ಮಾಡಿರುವ ಕುಮಾರಸ್ವಾಮಿ ʼಮೋದಿ ಅವರ ಅತ್ಯದ್ಭುತ ನಾಯಕತ್ವದ ಅಡಿಯಲ್ಲಿ ಐತಿಹಾಸಿಕ ಹಾಗೂ ದೂರದೃಷ್ಟಿಯುಳ್ಳ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆʼ ಎಂದು ಬರೆದುಕೊಂಡಿದ್ದಾರೆ. ಈ ಮೂಲಕ ಜಾತಿಗಣತಿ ಬಗ್ಗೆ ಎಚ್‌ಡಿಕೆ ದ್ವಂದ್ವ ಅಭಿಪ್ರಾಯ ಭಾರೀ ಟೀಕೆಗೊಳಗಾಗಿದೆ. ಕಾಮೆಂಟರ್‌ನಲ್ಲಿ ಕೆಲವರು ಏನ್ ಕುಮಾರಣ್ಣ ಇವಾಗ ವೈರತ್ವ, ದ್ವೇಷ ಕಾಣಿಸ್ತಿಲ್ವಾ ಎಂದರೆ, ಮತ್ತೋರ್ವ ನೆಟ್ಟಿಗ ಎರಡೂ ಟ್ವೀಟ್‌ಗಳ ಫೋಟೊ ಹಂಚಿಕೊಂಡು ʼಅಲೆಲೆಲೆ ಕುಮಾರಣ್ಣ.. ನಿನ್ ಬಿಟ್ರೆ ಯಾರೂ ಇಲ್ಲ ಕಣಣ್ಣʼ ಎಂದು ಕಾಲೆಳೆದಿದ್ದಾರೆ.
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


