Saturday, September 19, 2026
spot_img
More
    spot_img
    HomeLatest newsನನಗೆ ಯಾವ ಭಯವೂ ಇಲ್ಲ ಸುರ್ಜೇವಾಲ ಬಳಿ ಎಲ್ಲವನ್ನೂ ಹೇಳುತ್ತೇನೆ: ಕಾಂಗ್ರೆಸ್‌ ಶಾಸಕ ರಾಜು ಕಾಗೆ

    ನನಗೆ ಯಾವ ಭಯವೂ ಇಲ್ಲ ಸುರ್ಜೇವಾಲ ಬಳಿ ಎಲ್ಲವನ್ನೂ ಹೇಳುತ್ತೇನೆ: ಕಾಂಗ್ರೆಸ್‌ ಶಾಸಕ ರಾಜು ಕಾಗೆ

    ಬೆಂಗಳೂರು: ಕಾಂಗ್ರೆಸ್ ಸರ್ಕಾರದ ಕಾರ್ಯ ವೈಖರಿ ವಿರುದ್ಧ ಸ್ವತಃ ಪಕ್ಷದ ಶಾಸಕರೇ ಅಸಮಾಧಾನ ಹೊರಹಾಕಿರುವುದು ಸದ್ಯ ಭಾರೀ ವಿವಾದವನ್ನು ಎಬ್ಬಿಸಿದ್ದು, ಪಕ್ಷವನ್ನು ಸರಿ ಹಾದಿಗೆ ತರಲು ಇದೀಗ ಎಐಸಿಸಿ ಪ್ರಧಾನ ಕಾರ್ಯದರ್ಶಿ ಸುರ್ಜೇವಾಲ ಬೆಂಗಳೂರಿಗೆ ಬಂದಿಳಿದಿದ್ದಾರೆ.

    Advertisement

    ಇನ್ನು ಪಕ್ಷದೊಳಗಿನ ಅಸಮಾಧಾನಕ್ಕೆ ಕಾರಣವೇನು, ಯಾರದ್ದು ತಪ್ಪು, ಸರಿಪಡಿಸಬೇಕಾದ ಅಂಶಗಳೇನು ಎಂಬುದನ್ನು ಮನಗಾಣಲು ರಣದೀಪ್‌ ಸಿಂಗ್‌ ಸುರ್ಜೇವಾಲ ಪಕ್ಷದ ಎಲ್ಲ ಶಾಸಕರನ್ನೂ ಭೇಟಿಯಾಗಿ ಮಾತುಕತೆ ನಡೆಸಲಿದ್ದು, ಮೊದಲಿಗೆ ಪಕ್ಷದ ವಿರುದ್ಧ ತಿರುಗಿಬಿದ್ದ ಶಾಸಕರ ಜೊತೆ ಚರ್ಚೆ ನಡೆಸುತ್ತಿದ್ದಾರೆ.

    ನಿನ್ನೆ ( ಜೂನ್‌ 30 ) ಬಿಆರ್‌ ಪಾಟೀಲ್‌ ಸುರ್ಜೇವಾಲ ಅವರನ್ನು ಭೇಟಿಯಾಗಿ ಚರ್ಚಿಸಿ ಬಂದಿದ್ದಾರೆ. ಇಂದು ಬಿಆರ್‌ ಪಾಟೀಲ್‌ ಅವರ ಭ್ರಷ್ಟಾಚಾರ ಆರೋಪವನ್ನು ನಿಜ ಎಂದಿದ್ದ ಮತ್ತೋರ್ವ ಶಾಸಕ ರಾಜು ಕಾಗೆ ಸುರ್ಜೇವಾಲ ಅವರನ್ನು ಭೇಟಿಯಾಗಲಿದ್ದಾರೆ. ಬೆಳಗ್ಗೆ 11 ಗಂಟೆಗೆ ಚರ್ಚೆ ಆರಂಭವಾಗಿದ್ದು, ಇದಕ್ಕೂ ಮುನ್ನ ಮಾತನಾಡಿದ ರಾಜು ಕಾಗೆ ತಾನು ಮಂತ್ರಿ ಸ್ಥಾನದ ಆಕಾಂಕ್ಷಿಯಲ್ಲ, ಹೀಗಾಗಿ ನಾನು ಯಾರಿಗೂ ಹೆದರುವುದೂ ಇಲ್ಲ, ನನ್ನ ಕ್ಷೇತ್ರದ ಜನರ ಕಷ್ಟಗಳಿಗಾಗಿ ದನಿ ಎತ್ತಿದ್ದೇನೆಯೇ ಹೊರತು ನನ್ನ ವೈಯಕ್ತಿಕ ಕಾರಣಕ್ಕಾಗಿ ಅಲ್ಲ, ಹೀಗಾಗಿ ನಾನು ಸುರ್ಜೇವಾಲ ಬಳಿ ಏನಿದೆಯೋ ಎಲ್ಲವನ್ನೂ ಮುಕ್ತವಾಗಿ ಹೇಳುತ್ತೇನೆ ಎಂದು ನೇರ ಹೇಳಿಕೆ ನೀಡಿದ್ದಾರೆ.

    ಸುರ್ಜೇವಾಲ ಮುಂದೆ ಕೋಲಾರ ಗುಂಪುಗಾರಿಕೆ ಹಾಗೂ ದ್ವೇಷ ರಾಜಕಾರಣದ ದೂರುಗಳ ಸುರಿಮಳೆ; ಭೈರತಿ ಸುರೇಶ್‌ ವಿರುದ್ಧ ದೂರು!

    ಎಐ ಕನ್ನಡ ಕೃಷಿ ವೆಬ್‌ಸೈಟ್‌ಗಾಗಿ ಇಲ್ಲಿ ಕ್ಲಿಕ್‌ ಮಾಡಿ


    Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ

    Subscribe to get the latest posts sent to your email.

    Leave a Reply

    Related News

    ಎಸ್‌ಐಆರ್ ಅಕ್ರಮ: ಎನ್‌ಡಿಎ ನಿಯೋಗ ಮುಖ್ಯ ಚುನಾವಣಾ ಆಯುಕ್ತರಿಗೆ ದೂರು

    ಕರ್ನಾಟಕದಲ್ಲಿ ಎಸ್‌ಐಆರ್ ಪ್ರಕ್ರಿಯೆ ದುರುಪಯೋಗದ ಆರೋಪದೊಂದಿಗೆ ಕುಮಾರಸ್ವಾಮಿ ಮತ್ತು ಪ್ರಲ್ಹಾದ ಜೋಶಿ ನೇತೃತ್ವದ ಎನ್‌ಡಿಎ ನಿಯೋಗ ನವದೆಹಲಿಯಲ್ಲಿ ಮುಖ್ಯ ಚುನಾವಣಾ ಆಯುಕ್ತರಿಗೆ ದಾಖಲೆ ಸಮೇತ ದೂರು ಸಲ್ಲಿಸಿತು.

    ಮಾದಪಟ್ಟಣ ಕ್ವಾರಿ ದುರಂತ: ಅಶೋಕ ತಲಾ ₹50 ಲಕ್ಷ ಪರಿಹಾರ ಆಗ್ರಹ

    ಬೆಂಗಳೂರು ಮಾದಪಟ್ಟಣ ಕ್ವಾರಿಯಲ್ಲಿ ಬಂಡೆ ಬಿದ್ದು 7 ಕಾರ್ಮಿಕರು ಮೃತಪಟ್ಟ ಘಟನೆಗೆ ಪ್ರತಿಪಕ್ಷ ನಾಯಕ ಆರ್.ಅಶೋಕ ರಾಜ್ಯ ಸರ್ಕಾರದ ನಿರ್ಲಕ್ಷ್ಯವೇ ಕಾರಣ ಎಂದು ದೂರಿ ತಲಾ ₹50 ಲಕ್ಷ ಪರಿಹಾರ ಒತ್ತಾಯಿಸಿದ್ದಾರೆ.

    Most Popular

    Recent Comments

    Home
    Play
    Notification
    Search

    Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ

    Subscribe now to keep reading and get access to the full archive.

    Continue reading