ಪನೀರ್ ಇಷ್ಟವಿಲ್ಲದವರು ಅಪರೂಪ. ಪನೀರ್‌ನಿಂದ ತಯಾರಾಗುವ ಪನೀರ್ ಚಿಲ್ಲಿ, ಪನೀರ್ ಮಂಚೂರಿ, ಪನೀರ್ ಪರಾಟಾ, ಬಟರ್ ಪನೀರ್ ಮಸಾಲಾ, ಪನೀರ್ ಗೀ ರೋಸ್ಟ್‌ಗಳು ಎಲ್ಲರ ಬಾಯಲ್ಲಿ ನೀರೂರಿಸುತ್ತವೆ. ಈಗ ಈ ಪಟ್ಟಿ ಸೇರಿಸಿಕೊಳ್ಳಿ ಟೀ ಟೈಮ್‌ಗೆ ತಯಾರಾಗುವ ಕ್ರಿಸ್ಪಿ ಪನೀರ್ ಫ್ರೈ ಪ್ರತಿ ಬಾರಿ ಪಕೋಡಾ ಅಥವಾ ಬಜ್ಜಿ ಮಾಡಿದ್ರೆ ಬೇಸರವಾಗಬಹುದು. ಆ ಸಮಯದಲ್ಲಿ ಬೇಗ ತಯಾರಾಗುವ ಪನೀರ್ ಫ್ರೈ ನಿಮ್ಮ ಮನೆಯವರ ಫೇವರಿಟ್ ಆಗೋದು ಖಚಿತ. ಪೌಷ್ಟಿಕ, ರುಚಿಕರ ಮತ್ತು ಮಕ್ಕಳಿಗೆ ಅಚ್ಚುಮೆಚ್ಚು.ಪನೀರ್ ನಿಂದ ಮಾಡಿದಂತಹ ಖಾದ್ಯಗಳು ತುಂಬಾ ರುಚಿ ಹಾಗೂ ಆರೋಗ್ಯಕ್ಕೂ ಇದು ಒಳ್ಳೆಯದು. ಪನೀರ್ ಚಿಲ್ಲಿ, ಪನೀರ್ ಮಂಚೂರಿ, ಪನೀರ್ ಸ್ಯಾಂಡ್ ವಿಚ್, ಪನೀರ್ ಪರಾಟ, ಬಟರ್ ಪನೀರ್ ಮಸಾಲ, ಪನೀರ್ ಗೀ ರೋಸ್ಟ್ ಇತ್ಯಾದಿಗಳು ಬಾಯಿಯಲ್ಲಿ ನೀರೂರಿಸುವಂತೆ ಮಾಡುತ್ತೆ.ಟೀ ಟೈಮ್‌ನಲ್ಲಿ ಹೊಸ ಹೊಸದಾಗಿ ಸವಿಯಬೇಕೆಂದು ಎಲ್ಲರೂ ಇಷ್ಟ ಪಡುತ್ತಾರೆ. ಆದರೆ ಪ್ರತಿ ಬಾರಿ ಅದೇ ಪಕೋಡಾವನ್ನೇ ತಿಂದು ಬೋರ್ ಹೊಡೆದಿದ್ದರೆ, ಒಮ್ಮೆ ಕುರುಕಲಾದ ಪನೀರ್ ಫ್ರೈ ಅನ್ನು ಟ್ರೈ ಮಾಡಿ

ಬೇಕಾಗುವ ಪದಾರ್ಥಗಳು
ಪನೀರ್ – 200 ಗ್ರಾಂ
ಗರಂ ಮಸಾಲಾ ಪುಡಿ- 1 ಚಮಚ
ಬ್ರೆಡ್ ಕ್ರಂಬ್ಸ್ – 1/4 ಬಟ್ಟಲು
ನಿಂಬೆ ರಸ- 4 ಚಮಚ
ಕಾಳು ಮೆಣಸಿನ ಪುಡಿ- 1/4 ಪುಡಿ
ಅಚ್ಚಖಾರದ ಪುಡಿ- 1 ಚಮಚ
ಕಾರ್ನ್ ಫ್ಲೋರ್- 1/4 ಬಟ್ಚಲು
ದನಿಯಾ ಪುಡಿ- 1 ಚಮಚ
ಎಣ್ಣೆ- ಅಗತ್ಯಕ್ಕೆ ತಕ್ಕಷ್ಟು
ಉಪ್ಪು- ರುಚಿಗೆ ತಕ್ಕಷ್ಟು

ಮಾಡುವ ವಿಧಾನ.
ಒಂದು ಬೌಲ್‌ನಲ್ಲಿ ಕಾರ್ನ್‌ಫ್ಲೋರ್, ಉಪ್ಪು, ಕರಿಮೆಣಸಿನ ಪುಡಿ, ಕೆಂಪು ಮೆಣಸಿನ ಪುಡಿ, ಗರಂ ಮಸಾಲಾ ಮತ್ತು ಕೊತ್ತಂಬರಿ ಪುಡಿಯನ್ನು ಸೇರಿಸಿ.
ಈ ಮಿಶ್ರಣಕ್ಕೆ ಅಗತ್ಯಮಟ್ಟಿಗೆ ನೀರನ್ನು ಸೇರಿಸಿ, ನಯವಾದ ಪೇಸ್ಟ್ ಆಗುವಂತೆ ಚೆನ್ನಾಗಿ ಕಲಸಿ.
ಪನೀರ್ ಅನ್ನು ಸಣ್ಣ ಕ್ಯೂಬ್‌ಗಳಾಗಿ ಕತ್ತರಿಸಿ.ಈ ಪನೀರ್ ತುಂಡುಗಳ ಮೇಲೆ ನಿಂಬೆ ರಸವನ್ನು ಹಚ್ಚಿ ಚೆನ್ನಾಗಿ ಮಿಕ್ಸ್ ಮಾಡಿ.
ನಂತರ, ಪ್ರತಿ ಪನೀರ್ ಕ್ಯೂಬ್ ಅನ್ನು ಪೇಸ್ಟ್‌ನಲ್ಲಿ ಮುಚ್ಚಿ, ನಂತರ ಬ್ರೆಡ್ ಕ್ರಂಬ್ಸ್‌ನಲ್ಲಿ ಲೇಪಿಸಿ.
ಒಂದು ಬಾಣಲೆಗೆ ಸಾಸಿವೆ ಎಣ್ಣೆ ಹಾಕಿ ಚೆನ್ನಾಗಿ ಕುದಿಸಿ.ಎಣ್ಣೆ ಕಾದ ಮೇಲೆ, ಲೇಪಿತ ಪನೀರ್ ತುಂಡುಗಳನ್ನು ನಿಧಾನವಾಗಿ ಹಾಕಿ.
ಮಧ್ಯಮ ಉರಿಯಲ್ಲಿ ಗೋಲ್ಡನ್ ಬ್ರೌನ್ ಆಗುವವರೆಗೆ ಡೀಪ್ ಫ್ರೈ ಮಾಡಿ.
ಹಾಲಿನ ಪುಡಿಯಿಂದ ಬಾಯಲ್ಲಿ ಕರಗುವ ಪೇಡಾ ಮಾಡುವ ಅತ್ಯಂತ ಸುಲಭ ವಿಧಾನ
ಕೃಷಿ ಎಐ ಕನ್ನಡ ವೆಬ್‌ಸೈಟ್‌ಗಾಗಿ ಇಲ್ಲಿ ಕ್ಲಿಕ್ ಮಾಡಿ
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


