ಸಿಹಿ ಅಂದ್ರೆ ಯಾರಿಗೆ ಇಷ್ಟವಿಲ್ಲ ಹೇಳಿ. ಅದರಲ್ಲೂ ಮಕ್ಕಳಿಗಂತು ಸಿಹಿ ತಿಂಡಿ ಅಂದ್ರೆ ಪಂಚಪ್ರಾಣ.ಚಿಕ್ಕ ಮಕ್ಕಳಿಂದ ಹಿಡಿದು ಅಜ್ಜ ಅಜ್ಜಿಯಂದಿರು ಇಷ್ಟ ಪಡುವಂತಹ ಸಿಹಿ ತಿಂಡಿ ಎಂದರೆ ದೂಧ್ ಪೇಡಾ/ಹಾಲಿನ ಪೇಡಾ. ನಾವು ಮನೆಯಲ್ಲಿ ಹತ್ತು ಹಲವು ಬಗೆಯ ಸ್ವೀಟ್ ಮಾಡಿರುತ್ತೇವೆ. ಮಕ್ಕಳಿಗೆ, ಮನೆಯವರಿಗೆಲ್ಲ ಇಷ್ಟವಾಗಲಿ ಎಂದು ಬಗೆ ಬಗೆಯ ತಿಂಡಿ ಮಾಡಿ ಸವಿಯುವುದು ಸಾಮಾನ್ಯ. ಅದರಲ್ಲು ಕೆಲವೊಂದು ತಿಂಡಿ ಯಾವಾಗಲು ಮಾಡಿ ಸವಿಯುತ್ತಿರುತ್ತೇವೆ.ಅದರಲ್ಲಿ ಪೇಡವು ಸಹ ಒಂದು. ಪೇಡ ಎಲ್ಲರು ಇಷ್ಟಪಡುವ ಸಿಹಿ ತಿಂಡಿ. ಪೇಡವನ್ನ ಹಲವು ರೀತಿಯಲ್ಲಿ ಮಾಡಬಹುದು,ಭಾರತೀಯರ ಜನಪ್ರಿಯ ಸಿಹಿ ತಿಂಡಿಯಾದ ಇದನ್ನು ಹಬ್ಬ ಹರಿದಿನಗಳಲ್ಲಿ ವಿಶೇಷವಾಗಿ ತಯಾರಿಸುತ್ತಾರೆ. ಭಾರತದ ಮೂಲೆ ಮೂಲೆಯ ಜನರಿಗೂ ಇದರ ಪರಿಚಯವಿದೆ. ಅಲ್ಲದೆ ಇದನ್ನು ಎಲ್ಲಾ ಕಾಲದಲ್ಲೂ ತಯಾರಿಸಬಹುದು.ದೂಧ್ ಪೇಡಾ ಅಥವಾ ಹಾಲಿನ ಪೇಡಾ ಪಾಕವಿಧಾನವನ್ನು ಹಾಲಿನ ಪುಡಿ, ಘನೀಕೃತ ಹಾಲು, ಸಕ್ಕರೆ, ಏಲಕ್ಕಿ ಮತ್ತು ಜಾಯಿಕಾಯಿ ಮಿಶ್ರಣದಿಂದ ತಯಾರಿಸಲಾಗುತ್ತದೆ. ಇದನ್ನು ಬಲು ಸುಲಭವಾಗಿ ಹಾಗೂ ಕಡಿಮೆ ಸಮಯದಲ್ಲಿ ತಯಾರಿಸಬಹುದು.

ಬೇಕಾಗುವ ಪದಾರ್ಥಗಳು
ಹಾಲಿನ ಪುಡಿ- 1 ಬಟ್ಟಲು
ಸಕ್ಕರೆ ಪುಡಿ- 3/4 ಬಚ್ಚಲು
ತುಪ್ಪ- 2 ಚಮಚ
ಹಾಲು – 1/2 ಬಟ್ಟಲು
ಏಲಕ್ಕಿ ಪುಡಿ- ಸ್ವಲ್ಪ

ಮಾಡುವ ವಿಧಾನ
ಮೊದಲಿಗೆ ಒಂದು ಜಾಡಿ ಅಥವಾ ನಾನ್-ಸ್ಟಿಕ್ ಪ್ಯಾನ್ ತೆಗೆದುಕೊಂಡು ಅದರಲ್ಲಿ 1 ಚಮಚ ತುಪ್ಪ ಹಾಕಿ ಮಧ್ಯಮ ಉರಿಯಲ್ಲಿ ಕರಗಿಸಿಕೊಳ್ಳಿ.
ತುಪ್ಪ ಕರಗಿದ ಮೇಲೆ ಅದಕ್ಕೆ ಹಾಲು ಮತ್ತು ಸಕ್ಕರೆ ಪುಡಿ ಸೇರಿಸಿ. ಸಕ್ಕರೆ ಸಂಪೂರ್ಣವಾಗಿ ಕರಗುವವರೆಗೆ ಚೆನ್ನಾಗಿ ಮಿಶ್ರಣ ಮಾಡಿ.
ಈಗ ಅದಕ್ಕೆ ಹಾಲಿನ ಪುಡಿ ಮತ್ತು ಏಲಕ್ಕಿ ಪುಡಿ ಸೇರಿಸಿ. ಗಟ್ಟಿ ಮಿಶ್ರಣವಾಗುವವರೆಗೆ ಗಂಟಾಗದಂತೆ ಕೈಯಾಡಿಸಿ.
ಇನ್ನೊಂದು ಚಮಚ ತುಪ್ಪ ಸೇರಿಸಿ, ಮಿಶ್ರಣವು ಪ್ಯಾನ್‌ನ ತಳ ಬಿಡುವವರೆಗೆ ನಿಲ್ಲದೇ ಕೈಯಾಡಿಸಿ. ಇದರಿಂದ ಪೇಡಾ ಚೆನ್ನಾಗಿ ತಯಾರಾಗುತ್ತದೆ.
ಮಿಶ್ರಣವು ಗಟ್ಟಿ ಆಗಿ ತಳ ಬಿಡಿಸಿದ ಮೇಲೆ ಗ್ಯಾಸ್ ಆಫ್ ಮಾಡಿ, ಅದನ್ನು 10 ನಿಮಿಷ ತಣ್ಣಗಾಗಲು ಬಿಡಿ.
ಕೈಗೆ ಸ್ವಲ್ಪ ತುಪ್ಪ ಸವರಿಕೊಂಡು ಮಿಶ್ರಣದಿಂದ ಚಿಕ್ಕಚಿಕ್ಕ ಉಂಡೆಗಳನ್ನು ಮಾಡಿ ಪೇಡಾ ಆಕಾರಕ್ಕೆ ತಂದುಕೊಳ್ಳಿ.
ಬೇಕಾದರೆ ಮೇಲಿನಿಂದ ಬಾದಾಮಿ ಅಥವಾ ಪಿಸ್ತಾ ತುಂಡುಗಳನ್ನು ಅಲಂಕರಕ್ಕೆ ಹಾಕಬಹುದು.ಈ ಪೇಡಾ ಫ್ರಿಡ್ಜಿನಲ್ಲಿ 4–5 ದಿನಗಳವರೆಗೆ ಚೆನ್ನಾಗಿ ಇರುತ್ತದೆ.
ಬೆಣ್ಣೆಯಂತೆ ಕರಗುವ ಹೆಸರುಬೇಳೆ ಹಲ್ವಾ: ಈ ಫಟಾಫಟ್ ರೆಸಿಪಿ ಒಮ್ಮೆ ಮಾಡಿ ನೋಡಿ
ಕೃಷಿ ಎಐ ಕನ್ನಡ ವೆಬ್‌ಸೈಟ್‌ಗಾಗಿ ಇಲ್ಲಿ ಕ್ಲಿಕ್ ಮಾಡಿ
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


