ವಾಷಿಂಗ್ಟನ್: ಭಾರತದಿಂದ ಆಮದು ಮಾಡಿಕೊಳ್ಳುವ ಸರಕುಗಳ ಮೇಲೆ ನಾಳೆಯಿಂದ ( ಆಗಸ್ಟ್ 1 ) ಶೇ.25ರಷ್ಟು ಸುಂಕ ವಿಧಿಸಲಾಗುವುದು ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.
ಈ ಕುರಿತು ತಮ್ಮ ಒಡೆತನದ ‘ಟ್ರುತ್’ ಸಾಮಾಜಿಕ ಮಾಧ್ಯಮದಲ್ಲಿ ಮಾಹಿತಿ ನೀಡಿದ್ದಾರೆ. ಅಮೆರಿಕದ ಅಧ್ಯಕ್ಷ ರಾಗಿ 2ನೇ ಬಾರಿ ಅಧಿಕಾರಕ್ಕೆ ಬಂದ ನಂತರ ಟ್ರಂಪ್ ಕಠಿಣ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿದ್ದಾರೆ. ಈಗಾ ಗಲೇ ಕೆನಡಾ, ಮೆಕ್ಸಿಕೋ, ಚೀನಾ, ಯುರೋಪಿಯನ್ ಯೂನಿಯನ್,ರಷ್ಯಾ, ಜಪಾನ್ ಮೇಲೂ ಸುಂಕ ವಿಧಿಸಿದ್ದಾರೆ. ಮುಂದುವರಿದು ಆ ದೇಶಗಳ ಮೇಲೆ ಒತ್ತಡ ಹೇರಿ ವ್ಯಾಪಾರ ಕಡಿಮೆಯಾಗುತ್ತದೆ ಒಪ್ಪಂದಗಳನ್ನು ಮಾಡಿಕೊಳ್ಳುತ್ತಿದ್ದಾರೆ.
ಸದ್ಯ ಭಾರತಕ್ಕೂ ಬಿಸಿ ಮುಟ್ಟಿದೆ. ‘ಭಾರತ ನಮ್ಮ ಸ್ನೇಹಿತನಾಗಿದ್ದರೂ ಅವರೊಂದಿಗೆ ನಾವು ವ್ಯವಹಾರ ಮಾಡಿರುವುದು ಕಡಿಮೆಯೇ. ಅಮೆರಿಕದ ಸರಕುಗಳ ಮೇಲೆ ಅವರು (ಭಾರತ) ಅಧಿಕ ಸುಂಕ ವಿಧಿಸಿರುವುದೇ ಅದಕ್ಕೆ ಕಾರಣವಾಗಿದೆ. ಇತರೆ ದೇಶಗಳಿಗೆ ಹೋಲಿಸಿದರೆ ಅವರದ್ದು ಅಧಿಕ ಸುಂಕವಾಗಿದೆ ಎಂದು ತಿಳಿಸಿದ್ದಾರೆ.
ಉಕ್ರೇನ್‌ನಲ್ಲಿ ಜನರ ಹತ್ಯೆ ಮಾಡುವುದನ್ನು ರಷ್ಯಾವು ನಿಲ್ಲಿಸಬೇಕು ಎಂದು ಜಗತ್ತು ಆಗ್ರಹಿಸುತ್ತಿರುವಾಗ ಭಾರತವು ರಷ್ಯಾದಿಂದ ಇಂಧನ ಖರೀದಿಸುತ್ತಿದೆ. ಇದು ಒಳ್ಳೆಯದಲ್ಲ. ಆದ್ದರಿಂದ ಆ.1ರಿಂದ ಜಾರಿಯಾಗುವಂತೆ ಭಾರತದ ಸರಕುಗಳ ಮೇಲೆ ಶೇ.25ರಷ್ಟು ಸುಂಕ ವಿಧಿಸಲಾಗಿದೆ ಎಂದು ಹೇಳಿದ್ದಾರೆ.
ಅಲ್ಲದೇ ತನ್ನ ಬಹುಪಾಲು ಮಿಲಿಟರಿ ಉಪಕರಣಗಳನ್ನು ರಷ್ಯಾದಿಂದ ಖರೀದಿಸಿದ್ದಕ್ಕಾಗಿ ಭಾರತ ದಂಡವನ್ನೂ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ. ಈ ಕ್ರಮವು ಉಭಯ ದೇಶಗಳ ವ್ಯಾಪಾರ ಸಂಬಂಧಗಳ ಮೇಲೆ ಪರಿಣಾಮಬೀರಬಹುದು ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ಅಮೆರಿಕ ಮತ್ತು ಭಾರತದ ವ್ಯಾಪಾರ ಸಂಬಂಧಗಳು ಎರಡೂ ದೇಶಗಳಿಗೆ ಮುಖ್ಯವಾಗಿವೆ. ಎರಡೂ ದೇಶಗಳು ಪರಸ್ಪರ ದೊಡ್ಡ ವ್ಯಾಪಾರ ಪಾಲುದಾರರು, ಈ ಸುಂಕದಿಂದ ಉಭಯ ದೇಶಗಳಿಗೂ ಬಿಸಿ ತಟ್ಟಲಿದೆ. ಭಾರತದ ಮೇಲೆ ಅಮೆರಿಕ ಸುಂಕ ವಿಧಿಸಿರುವುದು ಆರ್ಥಿಕ ವಲಯದಲ್ಲಿ ಚರ್ಚೆಗೆ ಕಾರಣವಾಗಿದೆ. ಈ ಬೆಳವಣಿಗೆಯನ್ನು ಭಾರತ ಹೇಗೆ ಎದುರಿಸುತ್ತದೆ ಎಂದು ಕಾದು ನೋಡಬೇಕಿದೆ.
ಈ ಹಿಂದೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಏಪ್ರಿಲ್‌ನಲ್ಲಿ ಭಾರತ ಸೇರಿದಂತೆ ಹಲವು ದೇಶಗಳ ಮೇಲೆ ಶೇ. 26 ರಷ್ಟು ಹೆಚ್ಚುವರಿ ಸುಂಕವನ್ನು ವಿಧಿಸಿ ದ್ದರು. ಆದರೆ ಅದನ್ನು ಜುಲೈ 9ರವರೆಗೆ ಅಮಾನತ್ತು ಗೊಳಿಸಿದ್ದರು. ನಂತರ ಈ ಅಮಾನತ್ತನ್ನು ಆಗಸ್ಟ್ 1 ರವರೆಗೆ ವಿಸ್ತರಿಸಲಾಯಿತು. ಆದಾಗ್ಯೂ, ಈ ಅವಧಿ ಯಲ್ಲಿ ಶೇ. 10ರ ಮೂಲ ಸುಂಕ ಅನ್ವಯಿಸುತ್ತಿತ್ತು. ಈಗ ಟ್ರಂಪ್ ಭಾರತದ ಮೇಲೆ ಶೇ. 25ರಷ್ಟು ಸುಂಕ ವಿಧಿಸುವುದಾಗಿ ಘೋಷಿಸಿದ್ದಾರೆ.
ಕಸ್ಟಮ್ಸ್ ಸುಂಕವನ್ನು ತರ್ಕಬದ್ಧಗೊಳಿಸಲು ಭಾರತ ಮತ್ತು ಅಮೆರಿಕ ದ್ವಿಪಕ್ಷೀಯ ವ್ಯಾಪಾರ ಒಪ್ಪಂದದ ಬಗ್ಗೆ ಮಾತುಕತೆ ನಡೆಸುತ್ತಿವೆ. ಆಗಸ್ಟ್ 1ರ ಮೊದಲು ಅವರು ಮಧ್ಯಂತರ ಒಪ್ಪಂದ ವನ್ನು ತಲುಪಲು ಪ್ರಯತ್ನಿಸುತ್ತಿದ್ದಾರೆ. ಆದರೆ ಈ ಬಗ್ಗೆ ಇನ್ನೂ ಅಂತಿಮ ಒಮ್ಮತಕ್ಕೆ ಬಂದಿಲ್ಲ.
ಹಾಲಿನ ಪುಡಿಯಿಂದ ಬಾಯಲ್ಲಿ ಕರಗುವ ಪೇಡಾ ಮಾಡುವ ಅತ್ಯಂತ ಸುಲಭ ವಿಧಾನ
ಎಐ ಕನ್ನಡ ಕೃಷಿ ವೆಬ್‌ಸೈಟ್‌ಗಾಗಿ ಇಲ್ಲಿ ಕ್ಲಿಕ್ ಮಾಡಿ
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


