ಹಲ್ವಾ ಎಂದರೆ ಮಕ್ಕಳಿಂದ ಹಿಡಿದು ವಯಸ್ಕರ ತನಕ ಎಲ್ಲರಿಗೂ ಬಹುಪರಿಚಿತವಾದ ಮತ್ತು ಮೆಚ್ಚಿನ ಸಿಹಿತಿಂಡಿ. ಹೆಸರು ಬೇಳೆ (ಮೂಂಗ್‌ದಾಲ್) ಹಲ್ವಾ ಮಾತ್ರ ವಿಭಿನ್ನ. ಮೂಲತಃ ರಾಜಸ್ಥಾನದಿಂದ ಪ್ರಾರಂಭವಾದ ಈ ಹಲ್ವಾ, ಉತ್ತರ ಭಾರತದ ಊಟದ ತಟ್ಟೆಯಲ್ಲಿ ಅತ್ಯಂತ ಜನಪ್ರಿಯವಾದ ಸಿಹಿತಿಂಡಿಯಾಗಿ ಕಾಣಸಿಗುತ್ತದೆ. ಚಳಿಗಾಲದಲ್ಲಿ ಈ ಹಲ್ವಾವನ್ನು ಹೆಚ್ಚು ಇಷ್ಟಪಡುವರು, ಏಕೆಂದರೆ ಇದರ ರುಚಿ ಮತ್ತು ಪೋಷಕಾಂಶಗಳು ಎರಡೂ ಶ್ರೇಷ್ಠ.ತುಪ್ಪ, ಸಕ್ಕರೆ ಮತ್ತು ಒಣ ಹಣ್ಣುಗಳಿಂದ ಈ ಹಲ್ವಾಗೆ ರುಚಿಗುಣದ ಜೋಡಣೆ ದೊರೆಯುತ್ತದೆ. ಉತ್ಸವಗಳು, ಹಬ್ಬಗಳು ಹಾಗೂ ವಿಶೇಷ ಸಂದರ್ಭಗಳಲ್ಲಿ ಈ ಸಿಹಿತಿಂಡಿಗೆ ಹೆಚ್ಚಿನ ಪ್ರಾಮುಖ್ಯತೆ ಇದೆ. ಹೆಸರು ಬೇಳೆ ಪ್ರೋಟೀನ್‌ನಲ್ಲಿ ಸಮೃದ್ಧವಾಗಿರುವುದರಿಂದ, ಇದು ಆರೋಗ್ಯದ ದೃಷ್ಟಿಯಿಂದಲೂ ಉತ್ತಮ ಆಯ್ಕೆಯಾಗಿದೆ. ಈ ಹಲ್ವಾವನ್ನು ಹಾಲಿನೊಂದಿಗೆ ಅಥವಾ ಹಾಲಿಲ್ಲದೇ ತಯಾರಿಸಬಹುದಾಗಿದೆ ನಿಮ್ಮ ಇಷ್ಟದಂತೆ.ತಯಾರಿಸಲು ಸ್ವಲ್ಪ ಹೆಚ್ಚು ಸಮಯ ಬೇಕಾದರೂ, ಮಾಡಿರುವ ಶ್ರಮಕ್ಕೆ ತಕ್ಕ ಪ್ರತಿಫಲ ಸಿಗುತ್ತದೆ. ಶ್ರಾವಣ ಮಾಸದ ಹಬ್ಬಗಳು ಅಥವಾ ಅತಿಥಿಗಳು ಮನೆಗೆ ಬಂದಾಗ ತಯಾರಿಸಲು ಇದೊಂದು ಐಡಿಯಲ್ ರೆಸಿಪಿ. ನಿಮಗಾಗಿ ಹಂತ ಹಂತವಾಗಿ ಈ ಸಿಹಿತಿಂಡಿಯ ಪಾಕವಿಧಾನ ಇಲ್ಲಿದೆ.

ಬೇಕಾಗುವ ಪದಾರ್ಥಗಳು:
ಹೆಸರು ಬೇಳೆ – 3 ಬಟ್ಟಲು
ತುಪ್ಪ – 3 ಬಟ್ಟಲು
ಸಕ್ಕರೆ – 2 ಬಟ್ಟಲು
ಹಾಲು – 5 ಬಟ್ಟಲು
ಏಲಕ್ಕಿ ಪುಡಿ – ¾ ಟೀ ಚಮಚ
2 ಟೇಬಲ್ ಚಮಚ ಬಿಸಿ ನೀರಿನಲ್ಲಿ ನೆನೆಸಿದ ಕೇಸರಿ – 10 ಎಳೆ
ಗೋಡಂಬಿ – 4 ಟೇಬಲ್ ಚಮಚ
ಬಾದಾಮಿ ಮತ್ತು ದ್ರಾಕ್ಷಿ – ತಲಾ 2 ಟೇಬಲ್ ಚಮಚ

ಹೆಸರು ಬೇಳೆ ಹಲ್ವಾ ಮಾಡೋದು ಹೇಗೆ?
ಮೊದಲು ಹೆಸರು ಬೇಳೆಯನ್ನು ತೆಗೆದುಕೊಂಡು ಎರಡು ಬಾರಿ ಚೆನ್ನಾಗಿ ತೊಳೆದು ಕಾಟನ್ ಬಟ್ಟೆಯ ಮೇಲೆ ಹಾಕಿ ನೀರು ಹೋಗುವಂತೆ ಮಾಡಿ. ನಂತರ ಅದನ್ನ ಬಾಣಲೆಗೆ ಹಾಕಿ ಸಣ್ಣ ಉರಿಯಲ್ಲಿ ಹುರಿದುಕೊಳ್ಳಿ. ಅದರ ಹಸಿ ವಾಸನೆ ಹೋಗಿ ಕಂದು ಬಣ್ಣಕ್ಕೆ ತಿರುಗುತ್ತಿದ್ದಂತೆ ಉರಿಯನ್ನ ಆರಿಸಿ. ಹುರಿದ ಹೆಸರುಕಾಳನ್ನು ಮಿಕ್ಸರ್ ಜಾರ್‌ಗೆ ಹಾಕಿ ಪುಡಿ ಮಾಡಿಕೊಳ್ಳಿ.
ಅರ್ಧ ಬಟ್ಟಲು (ಅಂದಾಜು ಅರ್ಧ ಕಪ್) ಬೆಲ್ಲವನ್ನು ತೆಗೆದುಕೊಳ್ಳಿ.ಅದಕ್ಕೆ ಸ್ವಲ್ಪ ನೀರು (ಅಂದಾಜು 2–3 ಟೇಬಲ್ ಸ್ಪೂನ್) ಸಿಂಪಡಿಸಿ.ಇದನ್ನು ಸಣ್ಣ ಉರಿಯ ಮೇಲೆ ಇಟ್ಟು ಬೆಲ್ಲ ಕರಗುವವರೆಗೆ ಬೆಚ್ಚಗಿಸಿ.ಬೆಲ್ಲ ಸಂಪೂರ್ಣವಾಗಿ ಕರಗಿದ ನಂತರ ಅದನ್ನು ಸಿಂಪಲ್ ಸಿರಪ್ ಆಗಿ ಫಿಲ್ಟರ್ ಮಾಡಿಟ್ಟುಕೊಳ್ಳಿ.
ಇದರ ಜೊತೆಜೊತೆಗೇ ಮತ್ತೊಂದು ಪಾತ್ರೆಯಲ್ಲಿ ಅರ್ಧ ಬಟ್ಟಲು ಬೆಲ್ಲವನ್ನ ತೆಗೆದುಕೊಂಡು ಅದಕ್ಕೆ ಸ್ವಲ್ಪ ನೀರು ಸಿಂಪಡಿಸಿ ಸಣ್ಣ ಉರಿಯ ಮೇಲಿಟ್ಟು ಬೆಲ್ಲದ ಸಿರಪ್ ತಯಾರಿಸಿಟ್ಟುಕೊಳ್ಳಿ. ಈಗ ಸ್ವಲ್ಪ ದಪ್ಪ ತಳದ ಬಾಣಲೆಯನ್ನ ತೆಗೆದುಕೊಂಡು ಅದಕ್ಕೆ ಒಂದು ಟೇಬಲ್ ಸ್ಪೂನ್ ತುಪ್ಪ ಹಾಕಿ ಗೋಡಂಬಿ, ದ್ರಾಕ್ಷಿ ಹಾಗೂ ಬಾದಾಮಿ ಚೂರುಗಳನ್ನು ಹಾಕಿ ಕೆಂಪಗೆ ಹುರಿದು ತೆಗೆದಿಟ್ಟುಕೊಳ್ಳಿ.
ನಂತರ ಬಾಣಲೆಯಲ್ಲಿ ಉಳಿದಿದ್ದ ತುಪ್ಪಕ್ಕೆ ಇನ್ನೊಂದು ಟೇಬಲ್ ಸ್ಪೂನ್ ತುಪ್ಪ ಸೇರಿಸಿ ಅದಕ್ಕೆ ಹೆಸರು ಬೇಳೆಯ ಹಿಟ್ಟನ್ನು ಹಾಕಿ ಹುರಿಯಿರಿ ತುಪ್ಪದೊಂದಿಗೆ ಸೇರಿ ಹೆಸರು ಬೇಳೆಯ ಪುಡಿ ಮೆತ್ತಗಾಗುತ್ತಿದ್ದಂತೆ ಅದಕ್ಕೆ ಬಿಸಿ ಹಾಲನ್ನು ಹಾಕಿ ಚನ್ನಾಗಿ ಕಲಕಿ. ಹಾಲಿನಲ್ಲಿ ಹೆಸರು ಬೇಳೆಯ ಹಿಟ್ಟು ಬೇಯುತ್ತಿದ್ದಂತೆ ಉಳಿದ ತುಪ್ಪ ಮತ್ತು ಬೆಲ್ಲದ ಸಿರಪ್‌ನ್ನೂ ಸೇರಿಸಿ ಸಣ್ಣ ಉರಿಯಲ್ಲಿ ಸರಿಯಾಗಿ ತಿರುವಿ.
ಮಿಶ್ರಣ ಸರಿಯಾಗಿ ಬೆಂದಾಗ ಅದು ತುಪ್ಪ ಬಿಡುತ್ತದೆ. ಆಗ ಹಲ್ವಾ ಸಿದ್ಧಗೊಂಡಿದೆ ಎಂದು ಅರ್ಥ. ಸಿದ್ಧಗೊಂಡ ಹಲ್ವಾಕ್ಕೆ ಏಲಕ್ಕಿ ಪುಡಿ ಮತ್ತು ಈಗ ಕತ್ತರಿಸಿದ ಗೋಡಂಬಿ, ಬಾದಾಮಿ ಮತ್ತು ಪಿಸ್ತಾಗಳನ್ನು ಹಲ್ವಾ ಮೇಲೆ ಹಾಕಿ ಅಲಂಕರಿಸಿ. ಇಷ್ಟು ಮಾಡಿದರೆ ಸಾಕು, ರುಚಿಕರವಾದ ಹೆಸರುಬೇಳೆ ಹಲ್ವಾ ಸಿದ್ಧವಾಗುತ್ತದೆ
ಕೇವಲ 10 ನಿಮಿಷಗಳಲ್ಲಿ ರೆಡಿ! ಹೆಲ್ದಿ ಅಂಡ್ ಟೇಸ್ಟಿ ಗೋಧಿ ದೋಸೆ ತಯಾರಿಸೋದು ತುಂಬಾ ಸುಲಭ
ಕೃಷಿ ಎಐ ಕನ್ನಡ ವೆಬ್‌ಸೈಟ್‌ಗಾಗಿ ಇಲ್ಲಿ ಕ್ಲಿಕ್ ಮಾಡಿ
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


