Wednesday, September 2, 2026
spot_img
More
    spot_img
    HomeLatest newsಕೇವಲ 10 ನಿಮಿಷಗಳಲ್ಲಿ ರೆಡಿ! ಹೆಲ್ದಿ ಅಂಡ್ ಟೇಸ್ಟಿ ಗೋಧಿ ದೋಸೆ ತಯಾರಿಸೋದು ತುಂಬಾ ಸುಲಭ

    ಕೇವಲ 10 ನಿಮಿಷಗಳಲ್ಲಿ ರೆಡಿ! ಹೆಲ್ದಿ ಅಂಡ್ ಟೇಸ್ಟಿ ಗೋಧಿ ದೋಸೆ ತಯಾರಿಸೋದು ತುಂಬಾ ಸುಲಭ

    ಬೆಳಿಗ್ಗೆ ಮನೆಯಲ್ಲಿ ಎಲ್ಲರೂ ತಕ್ಷಣ ಉಪಾಹಾರ ಕೇಳುವ ಸಮಯದಲ್ಲಿ “ಏನು ಮಾಡೋದು?” ಎಂಬ ಪ್ರಶ್ನೆ ಸದಾ ಗೃಹಿಣಿಯ ಮನದಲ್ಲಿ. ಇಂತಹ ಒತ್ತಡದ ಸಮಯದಲ್ಲಿ ಕೇವಲ 10 ನಿಮಿಷದಲ್ಲಿ ತಯಾರಿಸಬಹುದಾದ ಗೋಧಿ ದೋಸೆ ಅವರಿಗೊಂದು ಉತ್ತಮ ಆಯ್ಕೆ.ಹೌದು, ಈ ದೋಸೆವನ್ನು ತಕ್ಷಣವೇ ಮಾಡಬಹುದು ಮತ್ತು ಇದು ಆರೋಗ್ಯಕ್ಕೂ ಹಿತ. ಟಿಫಿನ್ ಬಾಕ್ಸ್‌ಗೆ ಅಥವಾ ಮುಂಜಾನೆ ಉಪಾಹಾರಕ್ಕಾಗಿಯೂ ಇದು ಪರಿಪೂರ್ಣವಾದ ಆಯ್ಕೆ. ದಕ್ಷಿಣ ಭಾರತದ ಸಾಂಪ್ರದಾಯಿಕ ದೋಸೆಗಳಾದ ಇಡ್ಲಿ, ವಡೆ, ಮಸಾಲೆ ದೋಸೆ ಮುಂತಾದವುಗಳಿಗೆ ಇದು ವಿಭಿನ್ನ ಪರ್ಯಾಯವಾಗಿದ್ದು, ಅದಕ್ಕಿಂತ ಕಡಿಮೆ ಸಮಯದಲ್ಲಿ ಸಿದ್ಧವಾಗುತ್ತದೆ.ನಾವು ದೋಸೆ, ಇಡ್ಲಿ, ವಡೆ ತಿನ್ನಲು ಎಷ್ಟು ಇಷ್ಟಪಡುವೆವೋ, ಕೆಲವರಿಗೆ ಇನ್ನೂ ಹೊಸದಾಗಿ ವಿಭಿನ್ನ ರೀತಿಯ ದೋಸೆಗಳನ್ನು ಪ್ರಯತ್ನಿಸುವೂ ಆಸೆ ಇರುತ್ತದೆ. ಆದರೆ ಕಡಿಮೆ ಸಮಯದಲ್ಲಿ ತಯಾರಿಸಬಹುದಾದ ಗೋಧಿ ದೋಸೆ (Wheat Dosa) ಬಗ್ಗೆ ಬಹುತೇಕ ಜನರಿಗೆ ತಿಳಿದಿಲ್ಲ.ಆದರೆ ನಾವಿಂದು ನಿಮಗೆ ಸುಲಭವಾಗಿ ತಕ್ಷಣದಲ್ಲಿಯೇ ಗೋಧಿ ದೋಸೆಯನ್ನು ತಯಾರಿಸುವುದು ಹೇಗೆ? ಎನ್ನುವುದನ್ನು ತಿಳಿಸಿಕೊಡುತ್ತೇವೆ. ಮೆಣಸಿನಕಾಯಿ, ಜೀರಿಗೆ, ಕೊತ್ತಂಬರಿ ಸೊಪ್ಪುಗಳ ಮಿಶ್ರಣದೊಂದಿಗೆ ಈ ದೋಸೆಯನ್ನು ತಯಾರಿಸಲಾಗುವುದು. ರುಚಿಕರವಾದ ಈ ಪಾಕವಿಧಾನವನ್ನು ನೀವು ಮನೆಯಲ್ಲಿ ತಯಾರಿಸಿ, ನಿಮ್ಮವರಿಗೆ ಸವಿಯಲು ನೀಡಿ.

    Advertisement

    ಗೋಧಿ ದೋಸೆ ತಯಾರಿಸಲು ಬೇಕಾಗುವ ಪದಾರ್ಥಗಳು •

    ಗೋಧಿ ಹಿಟ್ಟು – 1 ಕಪ್

    ಅಕ್ಕಿ ಹಿಟ್ಟು – ಅರ್ಧ ಕಪ್

    ಮೊಸರು – 2 ಸ್ಪೂನ್

    ನೀರು – ಅಗತ್ಯಕ್ಕೆ ತಕ್ಕಂತೆ

    ಹಸಿ ಮೆಣಸಿನಕಾಯಿ – 1 (ಸಣ್ಣಗೆ ಕತ್ತರಿಸಿದ)

    ಶುಂಠಿ – ಅರ್ಧ ತುಂಡು

    ಈರುಳ್ಳಿ – 1 (ಸಣ್ಣಗೆ ಕತ್ತರಿಸಿದ)

    ಕೊತ್ತಂಬರಿ ಸೊಪ್ಪು – ಸ್ವಲ್ಪ (ಸಣ್ಣಗೆ ಕತ್ತರಿಸಿದ)

    ಉಪ್ಪು – ರುಚಿಗೆ ತಕ್ಕಂತೆ

    ಜೀರಿಗೆ – ಅರ್ಧ ಸ್ಪೂನ್

    ಕರಿಬೇವಿನ ಎಲೆ – 5 ರಿಂದ 6

    ಹಿಂಗು – ಸ್ವಲ್ಪ

    ಎಣ್ಣೆ ಅಥವಾ ತುಪ್ಪ – ಹುರಿಯಲು

    ಗೋಧಿ ದೋಸೆ ಮಾಡುವ ವಿಧಾನ

    ಒಂದು ಪಾತ್ರೆಗೆ ಗೋಧಿ ಹಿಟ್ಟು, ಹೆಚ್ಚಿದ ಹಸಿಮೆಣಸಿನಕಾಯಿ, ಕೊತ್ತಂಬರಿ ಸೊಪ್ಪು, ಮತ್ತು ಜೀರಿಗೆ ಸೇರಿಸಿ ಚೆನ್ನಾಗಿ ಮಿಶ್ರಗೊಳಿಸಿ.

    ಈ ಮಿಶ್ರಣಕ್ಕೆ ಸ್ವಲ್ಪಸ್ವಲ್ಪವಾಗಿ ನೀರು ಸೇರಿಸುತ್ತಾ, ನಂತರ ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ ಮತ್ತೆ ಚೆನ್ನಾಗಿ ಕಲಸಿ.

    ಈಗ ದೋಸೆ ತವಾ ಅನ್ನು ಮೀಡಿಯಂ ಉರಿಯಲ್ಲಿ ಇಟ್ಟು ಚೆನ್ನಾಗಿ ಬಿಸಿಯಾಗಲು ಬಿಡಿ.

    ತವಾ ಬಿಸಿಯಾದ ನಂತರ, ತಯಾರಿಸಿದ ಹಿಟ್ಟನ್ನು ತವೆಯ ಮೇಲೆ , ದೋಸೆ ಆಕಾರದಲ್ಲಿ ಹರಡಿ.

    ಅಗತ್ಯವಿದ್ದಷ್ಟು ಎಣ್ಣೆ ಅಥವಾ ತುಪ್ಪ ಹಾಕಿ, ದೋಸೆ ಬೆಂದಾಗ ತಿರುವಿಸಿ ಎರಡೂ ಬದಿಗಳೂ ಹೊಂಬಣ್ಣಕ್ಕೆ ಬರುವವರೆಗೆ ಬೇಯಿಸಿ.

    ಬಿಸಿ ಬಿಸಿ ದೋಸೆಗಳನ್ನು ಚಟ್ನಿ, ಸಾಂಬಾರ್ ಅಥವಾ ತುಪ್ಪದೊಂದಿಗೆ ಸವಿಯಲು ನೀಡಿ.

    ನಾಗರಪಂಚಮಿ ಹಬ್ಬದ ವಿಶೇಷ: ಆರೋಗ್ಯದಿಂದ ಕೂಡಿದ ಸಿಹಿ ತಿನಿಸು ಅರಿಶಿಣ ಎಲೆ ಕಡುಬು

    ಕೃಷಿ ಎಐ ಕನ್ನಡ ವೆಬ್‌ಸೈಟ್‌ಗಾಗಿ ಇಲ್ಲಿ ಕ್ಲಿಕ್‌ ಮಾಡಿ


    Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ

    Subscribe to get the latest posts sent to your email.

    Leave a Reply

    Related News

    ಎಸ್‌ಐಆರ್ ಅಕ್ರಮ: ಎನ್‌ಡಿಎ ನಿಯೋಗ ಮುಖ್ಯ ಚುನಾವಣಾ ಆಯುಕ್ತರಿಗೆ ದೂರು

    ಕರ್ನಾಟಕದಲ್ಲಿ ಎಸ್‌ಐಆರ್ ಪ್ರಕ್ರಿಯೆ ದುರುಪಯೋಗದ ಆರೋಪದೊಂದಿಗೆ ಕುಮಾರಸ್ವಾಮಿ ಮತ್ತು ಪ್ರಲ್ಹಾದ ಜೋಶಿ ನೇತೃತ್ವದ ಎನ್‌ಡಿಎ ನಿಯೋಗ ನವದೆಹಲಿಯಲ್ಲಿ ಮುಖ್ಯ ಚುನಾವಣಾ ಆಯುಕ್ತರಿಗೆ ದಾಖಲೆ ಸಮೇತ ದೂರು ಸಲ್ಲಿಸಿತು.

    ಮಾದಪಟ್ಟಣ ಕ್ವಾರಿ ದುರಂತ: ಅಶೋಕ ತಲಾ ₹50 ಲಕ್ಷ ಪರಿಹಾರ ಆಗ್ರಹ

    ಬೆಂಗಳೂರು ಮಾದಪಟ್ಟಣ ಕ್ವಾರಿಯಲ್ಲಿ ಬಂಡೆ ಬಿದ್ದು 7 ಕಾರ್ಮಿಕರು ಮೃತಪಟ್ಟ ಘಟನೆಗೆ ಪ್ರತಿಪಕ್ಷ ನಾಯಕ ಆರ್.ಅಶೋಕ ರಾಜ್ಯ ಸರ್ಕಾರದ ನಿರ್ಲಕ್ಷ್ಯವೇ ಕಾರಣ ಎಂದು ದೂರಿ ತಲಾ ₹50 ಲಕ್ಷ ಪರಿಹಾರ ಒತ್ತಾಯಿಸಿದ್ದಾರೆ.

    Most Popular

    Recent Comments

    Home
    Play
    Notification
    Search

    Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ

    Subscribe now to keep reading and get access to the full archive.

    Continue reading