ಹಿಂದೂ ಪಂಚಾಂಗದ ಪ್ರಕಾರ ಶ್ರಾವಣ ಮಾಸದ ಶುದ್ಧ ಪಂಚಮಿಯನ್ನು ನಾಗರ ಪಂಚಮಿ (Nagara Panchami) ಎಂದು ಆಚರಿಸಲಾಗುತ್ತದೆ. ಈ ಹಬ್ಬವನ್ನು ಹಿಂದೂಗಳು ಶ್ರಾವಣ ಮಾಸದ ಮೊದಲನೇ ಮಹತ್ವದ ಹಬ್ಬವಾಗಿ ಆಚರಿಸುತ್ತಾರೆ,ನಾಗರಪಂಚಮಿಯ ನಂತರ ಒಂದಾದ ಮೇಲೊಂದು ಹಬ್ಬಗಳು ಬರುತ್ತವೆ.ನಾಗರಪಂಚಮಿಯ ದಿನ, ದಕ್ಷಿಣ ಕನ್ನಡ, ಉಡುಪಿ, ಶಿವಮೊಗ್ಗ, ಉತ್ತರ ಕನ್ನಡ ಸೇರಿದಂತೆ ಕರಾವಳಿ ಭಾಗಗಳಲ್ಲಿ ಅರಿಶಣದ ಎಲೆಯ ಸಿಹಿ ಕಡುಬು ತಯಾರಿಸಿ ದೇವರಿಗೆ ಅರ್ಪಿಸುವುದು ಪ್ರಮುಖ ಸಂಪ್ರದಾಯ. ಅರಿಶಣದ ಎಲೆಗಳಲ್ಲಿ ಸುತ್ತಿ ಈ ವಿಶೇಷ ಸಿಹಿ ತಿಂಡಿಯನ್ನು ಮಾಡಲಾಗುತ್ತದೆ. ಇದನ್ನು ‘ಅರಿಶಿನ ಎಲೆ ಕಡುಬು’ ಅಥವಾ ‘ಗಟ್ಟಿ’ ಎಂದೂ ಕರೆಯಲಾಗುತ್ತದೆ,
ತುಳುವಿನಲ್ಲಿ ಇದನ್ನು ‘ಎರಡ್ಯೆ’ ಅಥವಾ ‘ಪತೋಳಿ’ ಎಂದು ಕರೆಲಾಗುತ್ತದೆ,ನಾಗರಪಂಚಮಿಗೆ ಅರಿಶಣದ ಎಲೆಯ ಸಿಹಿ ಕಡುಬನ್ನು ನೈವೇದ್ಯವಾಗಿ ಸಮರ್ಪಿಸುವುದು ಹಲವಾರು ಕಾರಣಗಳಿವೆ. ಪ್ರಧಾನವಾಗಿ, ನಾಗದೇವತೆಗೆ ಅರಿಶಣ ಅತ್ಯಂತ ಪ್ರಿಯವಾದದು ಎಂಬ ನಂಬಿಕೆ ಇದೆ. ಜೊತೆಗೆ ಅರಿಶಿಣದ ಎಲೆಗಳಲ್ಲಿ ಆರೋಗ್ಯಕರ ಗುಣಗಳು ಹೆಚ್ಚಾಗಿ ದೊರೆಯುತ್ತವೆ ಹುಮ್ಮಸ್ಸು, ಶುದ್ಧತೆ, ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವಂತ ಆರೋಗ್ಯ ಪ್ರಯೋಜನಗಳಿದೆ. ವಿಶೇಷವಾಗಿ ಮಳೆಗಾಲದಲ್ಲಿ ಹರಡುವ ಸಾಂಕ್ರಾಮಿಕ ರೋಗಗಳಿಂದ ರಕ್ಷಣೆಗಾಗಿ ಈ ಎಲೆಗಳನ್ನು ಆಹಾರದಲ್ಲಿ ಬಳಸುವುದು ಒಳ್ಳೆಯ ಪರಂಪರೆಯಾಗಿದೆ ಎಂದು ತಿಳಿಯುತ್ತದೆ.ಅರಿಶಣದ ಎಲೆಯಲ್ಲಿ ಸುತ್ತಿದ ಈ ಸಿಹಿ ಕಡುಬಿನಲ್ಲಿ ತೆಂಗಿನಕಾಯಿ ಪುಡಿ ಮತ್ತು ಬೆಲ್ಲವನ್ನು ಸೇರಿಸಿ ನುಗ್ಗಿದ ಭಾಗದಲ್ಲಿಯೇ ಅನನ್ಯವಾದ ರುಚಿ ಹಾಗೂ ಪರಿಮಳವನ್ನು ನೀಡುತ್ತದೆ. ಇದರ ಸುವಾಸನೆ ಹಾಗೂ ರುಚಿಯನ್ನು ಒಮ್ಮೆ ಅನುಭವಿಸಿದರೆ ಮರೆಯಲಾಗದು.

ಬೇಕಾಗುವ ಪದಾರ್ಥಗಳು
ಅಕ್ಕಿ-1 ಕಪ್
ತೆಂಗಿನಕಾಯಿ ತುರಿ- 2 ಕಪ್
ತುರಿದ ಬೆಲ್ಲ- 1 ಕಪ್
ಏಲಕ್ಕಿ ಕಾಳು – 4
ಹಸಿ ಅಕ್ಕಿ – 2 ಕಪ್
ಒಂದು ಚಿಟಿಕೆ ಉಪ್ಪು
ಬಾಳೆ ಎಲೆಗಳು

ಅರಿಶಣದ ಎಲೆಯ ಸಿಹಿ ಕಡುಬು ಮಾಡುವ ವಿಧಾನ:
ಮೊದಲು ಅಕ್ಕಿಯನ್ನು ಸ್ವಚ್ಛವಾಗಿ ತೊಳಸಿ, ಎರಡು ಗಂಟೆಗಳ ಕಾಲ ನೀರಿನಲ್ಲಿ ನೆನೆಸಿಡಿ.
ನಂತರ ಅಕ್ಕಿಯಿಂದ ನೀರೆಲ್ಲಾ ಬಸಿದು, ಅದಕ್ಕೆ ಬೆಲ್ಲದ ತುಂಡುಗಳು, ಸ್ವಲ್ಪ ಉಪ್ಪು ಮತ್ತು ಸ್ವಲ್ಪ ನೀರು ಸೇರಿಸಿ ಮಿಕ್ಸಿಯಲ್ಲಿ ನುಣ್ಣಗೆ ರುಬ್ಬಿ, ಹಿಟ್ಟನ್ನು ಒಂದು ಪಾತ್ರೆಗೆ ಹಾಕಿ ಇಡಿ.
ಬೇರೆ ಪಾತ್ರೆಯಲ್ಲಿ ಬೆಲ್ಲವನ್ನು ತುರಿದು, ಅದಕ್ಕೆ ತೆಂಗಿನಕಾಯಿ ತುರಿ ಮತ್ತು ಏಲಕ್ಕಿ ಕಾಳು (ಅಥವಾ ಪುಡಿ) ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ.
ಈಗ ಸ್ವಚ್ಛವಾಗಿ ತೊಳೆಯಲಾದ ಅರಿಶಿನ ಎಲೆಗಳ ಮೇಲೆ ತೆಳುವಾಗಿ ಹಿಟ್ಟನ್ನು ಹಚ್ಚಿ, ಮಧ್ಯದಲ್ಲಿ ಬೆಲ್ಲ-ತೆಂಗಿನಕಾಯಿ ಮಿಶ್ರಣವನ್ನು ಹಾಕಿ ಎಲೆಯನ್ನು ಮಡಚಿ ಮುಚ್ಚಿ.
ಈ ಎಲೆಗಳನ್ನೆಲ್ಲಾ ಬಾಳೆ ಎಲೆಯಲ್ಲಿ ಮಡಚಿ ಇಡ್ಲಿ ಪಾತ್ರೆಗೆ ಅಥವಾ ಸ್ಟೀಮ್ ಮಾಡುವ ಪಾತ್ರೆಗೆ ಜೋಡಿಸಿ.
ಕಡುಬುಗಳನ್ನು ಒಂದಕ್ಕೊಂದು ಅಂಟಿಕೊಳ್ಳದಂತೆ ಅಲ್ಪ ದೂರದಿಂದ ಇಟ್ಟು, 10–12 ನಿಮಿಷಗಳವರೆಗೆ ಸ್ಟೀಮ್ ಮಾಡಿ.
ಹೆಲ್ತ್ ಫ್ರೆಂಡ್ಲಿ ಬ್ರೇಕ್‌ಫಾಸ್ಟ್: ಮೃದುವಾದ ಓಟ್ಸ್ ಇಡ್ಲಿ ಟ್ರೈ ಮಾಡಿ
ಕೃಷಿ ಎಐ ಕನ್ನಡ ವೆಬ್‌ಸೈಟ್‌ಗಾಗಿ ಇಲ್ಲಿ ಕ್ಲಿಕ್ ಮಾಡಿ
ಎಐ ಅಡ್ವೋಕೇಟ್ ಅಸಿಸ್ಟೆಂಟ್ ವೆಬ್‌ಸೈಟ್‌ಗಾಗಿ ಇಲ್ಲಿ ಕ್ಲಿಕ್ ಮಾಡಿ
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


