ದಕ್ಷಿಣ ಕನ್ನಡ: ಧರ್ಮಸ್ಥಳ ಸರಣಿ ಕೊಲೆ, ಅತ್ಯಾಚಾರ ಕೊಲೆ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಅನಾಮಿಕ ಗುರುತಿಸಿದ್ದ 13 ಸ್ಥಳಗಳನ್ನು ಕ್ರಮವಾಗಿ ಅಗೆಯಲಾಗುತ್ತಿದ್ದು, ನಿನ್ನೆ ( ಜುಲೈ 31 ) ಆರನೇ ಪಾಯಿಂಟ್‌ನಲ್ಲಿ ಮೂಳೆಗಳು ಲಭಿಸಿವೆ.
ಮೊದಲಿಗೆ ಐದು ಸ್ಥಳಗಳಲ್ಲಿ ಯಾವುದೇ ಕುರುಹು ಸಿಗದೇ ಬರಿಗೈನಲ್ಲಿ ಹಿಂದಿರುಗಿದ್ದ ಎಸ್‌ಐಟಿ ಅಧಿಕಾರಿಗಳಿಗೆ ಆರನೇ ಪಾಯಿಂಟ್‌ನಲ್ಲಿ 12 ಮೂಳೆಗಳು ಪತ್ತೆಯಾಗಿದ್ದು, ಪ್ರಕರಣಕ್ಕೆ ಸ್ಪೋಟಕ ತಿರುವು ಸಿಕ್ಕಂತಾಗಿದೆ.
ಇನ್ನು ಒಂದೆಡೆ ಮೂಳೆಗಳು ಪತ್ತೆಯಾದರೆ ಪಾಯಿಂಟ್ 1ರಲ್ಲಿ ಪ್ಯಾನ್ ಕಾರ್ಡ್‌ವೊಂದು ಪತ್ತೆಯಾಗಿದ್ದು, ಆ ಪುರುಷ ಕಾಮಾಲೆ ರೋಗದಿಂದ ಮೃತಪಟ್ಟಿದ್ದಾಗಿ ತಿಳಿದುಬಂದಿದೆ.
ಇದೀಗ ಆತನ ತಾಯಿ ಈ ಕುರಿತು ಮಾತನಾಡಿದ್ದು, ತಮ್ಮ ಮಗ ಕುಡಿತದ ಚಟಕ್ಕೆ ಬಿದ್ದಿದ್ದ, ಜಾಂಡೀಸ್ ಬಂದರೂ ಪ್ರತಿದಿನ ಕುಡಿಯುತ್ತಿದ್ದ, ಇದರಿಂದ ಜಾಂಡೀಸ್ ಹೆಚ್ಚಾಯಿತು, ಬಳಿಕ ಆತನನ್ನು ಮನೆಯಿಂದ ಮೂರು ವರ್ಷಗಳ ಕಾಲ ಹೊರಹಾಕಿದ್ದೆವು. ಆದರೆ ಆತನ ಆರೋಗ್ಯ ಕ್ಷೀಣಿಸಿದ ಕಾರಣ ಆತನನ್ನು ಮನೆಗೆ ಕರೆತಂದಿದ್ದೆವು. ಆತ ಪ್ರಾಣಬಿಟ್ಟ ಎಂದು ಹೇಳಿಕೊಂಡಿದ್ದಾರೆ. ಇದಕ್ಕೂ ಧರ್ಮಸ್ಥಳ ಸರಣಿ ಕೊಲೆ ಆರೋಪಕ್ಕೂ ಯಾವುದೇ ಸಂಬಂಧವಿಲ್ಲ ಎಂದೂ ಸಹ ಸ್ಪಷ್ಟಪಡಿಸಿದ್ದಾರೆ.
ಧರ್ಮಸ್ಥಳ ಸರಣಿ ಕೊಲೆ: ಪಾಯಿಂಟ್ 6ರಲ್ಲಿ ಸಿಕ್ಕ ಅಸ್ತಿಪಂಜರ ಯಾರದ್ದು?
ಎಐ ಕನ್ನಡ ಕೃಷಿ ವೆಬ್‌ಸೈಟ್‌ಗಾಗಿ ಇಲ್ಲಿ ಕ್ಲಿಕ್ ಮಾಡಿ
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


