Tuesday, September 1, 2026
spot_img
More
    spot_img
    HomeStateDistrictಧರ್ಮಸ್ಥಳ ಸರಣಿ ಕೊಲೆ: ಪಾಯಿಂಟ್‌ 6ರಲ್ಲಿ ಸಿಕ್ಕ ಅಸ್ತಿಪಂಜರ ಯಾರದ್ದು?

    ಧರ್ಮಸ್ಥಳ ಸರಣಿ ಕೊಲೆ: ಪಾಯಿಂಟ್‌ 6ರಲ್ಲಿ ಸಿಕ್ಕ ಅಸ್ತಿಪಂಜರ ಯಾರದ್ದು?

    ದಕ್ಷಿಣ ಕನ್ನಡ: ಧರ್ಮಸ್ಥಳ ಸರಣಿ ಕೊಲೆ, ಅತ್ಯಾಚಾರ ಕೊಲೆ ಪ್ರಕರಣಕ್ಕೆ ನಿನ್ನೆ ( ಜುಲೈ 31 ) ಸ್ಪೋಟಕ ತಿರುವು ಸಿಕ್ಕಿದ್ದು, ಅನಾಮಿಕ ಗುರುತಿಸಿದ್ದ ಜಾಗದಲ್ಲಿ ಅಸ್ತಿಪಂಜರದ ಕುರುಹುಗಳು ಪತ್ತೆಯಾಗಿವೆ.

    Advertisement

    ಮೊದಲಿಗೆ ಸ್ಥಳ ಮಹಜರು ನಡೆಸಿದ ಸಂದರ್ಭದಲ್ಲಿ ಅನಾಮಿಕ 13 ಪಾಯಿಂಟ್‌ಗಳನ್ನು ಗುರುತಿಸಿದ್ದ. ಎಸ್‌ಐಟಿ ಅಧಿಕಾರಿಗಳು ಕ್ರಮಸಂಖ್ಯೆ ಪ್ರಕಾರ ಪಾಯಿಂಟ್‌ಗಳಲ್ಲಿ ಅಗೆಯುತ್ತಾ ಬಂದಿದ್ದರು. ಮೊದಲಿಗೆ ಐದು ಪಾಯಿಂಟ್‌ಗಳಲ್ಲಿ ಅಸ್ತಿಪಂಜರದ ಯಾವುದೇ ಕುರುಹುಗಳು ಸಹ ಪತ್ತೆಯಾಗಲಿಲ್ಲ. ಆದರೆ ನಿನ್ನೆ ಪಾಯಿಂಟ್‌ 6ರಲ್ಲಿ 12 ಮೂಳೆಗಳು ದೊರಕಿದ್ದು, ಪ್ರಕರಣಕ್ಕೆ ಭಾರೀ ತಿರುವು ನೀಡಿದೆ.

    ಅಸ್ತಿಪಂಜರದ ಮೂಳೆಗಳನ್ನು ಎಫ್‌ಎಸ್‌ಎಲ್‌ಗೆ ರವಾನಿಸಲಾಗಿದ್ದು, ಎಸ್‌ಐಟಿ ಅಧಿಕಾರಿಗಳು ಮೂಳೆಗಳು ಪತ್ತೆಯಾದ ಕೂಡಲೇ ಅನಾಮಿಕನಿಗೆ ಹಲವು ಪ್ರಶ್ನೆಗಳನ್ನು ಕೇಳಿದ್ದಾರೆ. ಎಷ್ಟು ವರ್ಷಗಳ ಹಿಂದೆ ಈ ಶವ ಹೂತಿಟ್ಟಿದ್ದೆ? ಶವ ಕೊಟ್ಟವರು ಯಾರು ಹಾಗೂ ಶವ ಕೊಟ್ಟವರು ಏನೆಂದು ಹೇಳಿದರು? ಎಂಬ ಪ್ರಶ್ನೆಯನ್ನು ಕೇಳಿದ್ದಾರೆ.

    ಇನ್ನು ಇಂದು ಎಸ್‌ಐಟಿ ಏಳನೇ ಪಾಯಿಂಟ್‌ನಲ್ಲಿ ಉತ್ಖನನ ಮುಂದುವರಿಸಲಿದ್ದು, ಈ ಪಾಯಿಂಟ್‌ನಲ್ಲಿಯೂ ಮೂಳೆಗಳು ದೊರಕಲಿವೆಯಾ ಎಂಬ ಪ್ರಶ್ನೆ ಹುಟ್ಟಿಸಿದೆ. ಒಂದು ವೇಳೆ ಇಲ್ಲಿ ಮೂಳೆ ದೊರೆತದ್ದೇ ಆದರೆ ಪ್ರಕರಣ ತೀವ್ರ ಗಂಭೀರ ಸ್ವರೂಪ ಪಡೆದುಕೊಳ್ಳಲಿದೆ.

    ಬ್ಯಾಂಕ್ ಆಫ್ ಬರೋಡಾದಲ್ಲಿ ಸ್ಪೆಷಲಿಸ್ಟ್ ಅಧಿಕಾರಿ ಹುದ್ದೆಗಳ ನೇಮಕಾತಿ ಆರಂಭ

    ಎಐ ಕನ್ನಡ ಕೃಷಿ ವೆಬ್‌ಸೈಟ್‌ಗಾಗಿ ಇಲ್ಲಿ ಕ್ಲಿಕ್‌ ಮಾಡಿ


    Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ

    Subscribe to get the latest posts sent to your email.

    Leave a Reply

    Related News

    ಎಸ್‌ಐಆರ್ ಅಕ್ರಮ: ಎನ್‌ಡಿಎ ನಿಯೋಗ ಮುಖ್ಯ ಚುನಾವಣಾ ಆಯುಕ್ತರಿಗೆ ದೂರು

    ಕರ್ನಾಟಕದಲ್ಲಿ ಎಸ್‌ಐಆರ್ ಪ್ರಕ್ರಿಯೆ ದುರುಪಯೋಗದ ಆರೋಪದೊಂದಿಗೆ ಕುಮಾರಸ್ವಾಮಿ ಮತ್ತು ಪ್ರಲ್ಹಾದ ಜೋಶಿ ನೇತೃತ್ವದ ಎನ್‌ಡಿಎ ನಿಯೋಗ ನವದೆಹಲಿಯಲ್ಲಿ ಮುಖ್ಯ ಚುನಾವಣಾ ಆಯುಕ್ತರಿಗೆ ದಾಖಲೆ ಸಮೇತ ದೂರು ಸಲ್ಲಿಸಿತು.

    ಮಾದಪಟ್ಟಣ ಕ್ವಾರಿ ದುರಂತ: ಅಶೋಕ ತಲಾ ₹50 ಲಕ್ಷ ಪರಿಹಾರ ಆಗ್ರಹ

    ಬೆಂಗಳೂರು ಮಾದಪಟ್ಟಣ ಕ್ವಾರಿಯಲ್ಲಿ ಬಂಡೆ ಬಿದ್ದು 7 ಕಾರ್ಮಿಕರು ಮೃತಪಟ್ಟ ಘಟನೆಗೆ ಪ್ರತಿಪಕ್ಷ ನಾಯಕ ಆರ್.ಅಶೋಕ ರಾಜ್ಯ ಸರ್ಕಾರದ ನಿರ್ಲಕ್ಷ್ಯವೇ ಕಾರಣ ಎಂದು ದೂರಿ ತಲಾ ₹50 ಲಕ್ಷ ಪರಿಹಾರ ಒತ್ತಾಯಿಸಿದ್ದಾರೆ.

    Most Popular

    Recent Comments

    Home
    Play
    Notification
    Search

    Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ

    Subscribe now to keep reading and get access to the full archive.

    Continue reading