ಅಗ್ನಿ ಐಪಿಎಸ್, ಪೋಲಿಸ್ ಸ್ಟೋರಿ ಸಿನಿಮಾಗಳಿಗೆ ಬರಹಗಾರರಾಗಿ ಕೆಲಸ ಮಾಡಿದ್ದ ಎಸ್ಎಸ್.ಡೇವಿಡ್ ನಿಧನ ಹೊಂದಿದ್ದಾರೆ. ಎಸ್ಎಸ್ ಡೇವಿಡ್ ಅವರು ಚಿತ್ರಕಥೆ ಬರಹಗಾರನಾಗಿ ಮಾತ್ರವಲ್ಲದೆ ನಿರ್ದೇಶಕರೂ ಆಗಿದ್ದರು. ‘ಹಾಯ್ ಬೆಂಗಳೂರು’ ಹಾಗೂ ‘ಧೈರ್ಯ’ ಚಿತ್ರವನ್ನ ನಿರ್ದೇಶನ ಮಾಡಿದ್ದರು. ಅದರೆ ಇಂದು ಅನಾಥ ಶವವಾಗಿದ್ದಾರೆ. ಅವರ ಹೆಣವನ್ನು ನೋಡಲೂ ಯಾರೂ ಇಲ್ಲವಾಗಿದ್ದಾರೆ. ಕುಟುಂಬದವರು ಅವರ ಶವ ಪಡೆಯಲು ಸಿದ್ಧರಿಲ್ಲ.
ಡೇವಿಡ್ ಅವರು ಆಗಸ್ಟ್ 31ರಂದು ಮೆಡಿಕಲ್ ಶಾಪ್ಗೆ ಹೋಗಿದ್ದರು. ಅಲ್ಲಿ ಪ್ರಜ್ಞೆ ತಪ್ಪಿ ಬಿದ್ದಿದ್ದಾರೆ. ಅವರನ್ನು ಬೆಂಗಳೂರಿನ ಆರ್ಆರ್ ನಗರದ ಎಸ್ಎಸ್ ಆಸ್ಪತ್ರೆಗೆ ದಾಖಲು ಮಾಡಲಾಯಿತು. ಹೃದಯಘಾತದಿಂದ ನಿಧನ ಹೊಂದಿದರು.ಕುಟುಂಬದವರು ಬರದೆ ಬಾಡಿ ಕೊಡೋದಿಲ್ಲ ಎಂದು ಆರ್ಆರ್ ನಗರ ಪೊಲೀಸರು ಹೇಳಿದ್ದಾರೆ. ಡೇವಿಡ್ ಅಕ್ಕ ಉಡುಪಿಯ ಕಾಪುವಿನಲ್ಲಿದ್ದಾರೆ. ಅವರು ತಮಗೆ ಬರೋಕೆ ಸಾಧ್ಯವಿಲ್ಲ ಎಂದು ಹೇಳಿದ್ದಾರೆ. ವಿಕ್ಟೋರಿಯಾ ಆಸ್ಪತ್ರೆಗೆ ಡೇವಿಡ್ ಪಾರ್ಥಿವ ಶರೀರ ಅನಾಧವಾಗಿ ಮಲಗಿದೆ.
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


