Tuesday, November 3, 2026
spot_img
More
    spot_img
    HomeLatest newsಮಲ್ಪೆ ಎಸ್‌ಬಿಐ ಬ್ಯಾಂಕ್‌ನಲ್ಲಿ ₹73 ಲಕ್ಷ ವಂಚನೆ ಪ್ರಕರಣ ದಾಖಲು

    ಮಲ್ಪೆ ಎಸ್‌ಬಿಐ ಬ್ಯಾಂಕ್‌ನಲ್ಲಿ ₹73 ಲಕ್ಷ ವಂಚನೆ ಪ್ರಕರಣ ದಾಖಲು

    ಉಡುಪಿ, : ಸಾರ್ವಜನಿಕರ ಹಣಕ್ಕೆ ರಕ್ಷಣೆ ನೀಡಬೇಕಾದವರೇ ವಂಚನೆಗೆ ಇಳಿದಿರುವ ಆಘಾತಕಾರಿ ಘಟನೆಯೊಂದು ಮಲ್ಪೆ ಎಸ್‌ಬಿಐ (ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ) ಶಾಖೆಯಲ್ಲಿ ಬೆಳಕಿಗೆ ಬಂದಿದೆ. ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾ (ಎಸ್‌ಬಿಐ) ಮಲ್ಪೆ ಶಾಖೆಯಲ್ಲಿ ₹73 ಲಕ್ಷ ವಂಚನೆ ಪ್ರಕರಣ ಬೆಳಕಿಗೆ ಬಂದಿದೆ. ಶಾಖಾ ವ್ಯವಸ್ಥಾಪಕಿ ಮೀರಾ ಪಲ್ಲವಿ ಟಿ.ಹೆಚ್. ಸೇರಿದಂತೆ ಕೆಲ ಖಾತೆದಾರರು ನಕಲಿ ದಾಖಲೆಗಳನ್ನು ಸೃಷ್ಟಿಸಿ ಹಣವನ್ನು ಅಕ್ರಮವಾಗಿ ವರ್ಗಾಯಿಸಿ ದುರುಪಯೋಗಪಡಿಸಿಕೊಂಡಿದ್ದಾರೆ ಎಂಬ ಆರೋಪ ಹೊರಬಿದ್ದಿದೆ.

    ಆಗಸ್ಟ್ 11ರಿಂದ 22ರ ನಡುವೆ, ಮಲ್ಪೆ ಎಸ್‌ಬಿಐ ಶಾಖೆಯಿಂದ ಒಟ್ಟು ₹73,00,000 ಹಣವು ಸಮುದ ಸುವರ್ಣ (ನಂತೂರ್), ಶರ್ಮಿಲಾ ಎಸ್. (ಮೂಳೂರು), ಸುಶಾಂತ್ ತಿಂಗಳಾಯ (ಕೋಡಿ), ಎಂ. ರಾಮನಾಥ್ (ಬೊಂಡೆಲ್, ಮಂಗಳೂರು), ಮತ್ತು ಸದಾನಂದ ಜಿ. ರಾವ್ (ಕುಂಜಾಲು) ಎಂಬ ಖಾತೆದಾರರ ಖಾತೆಗಳಿಗೆ ವರ್ಗಾವಣೆಯಾಗಿದೆ ಎಂದು ತಿಳಿದುಬಂದಿದೆ.

    ಈ ವಂಚನೆಯು ಒಂದು ಹೌಸಿಂಗ್ ಫೈನಾನ್ಸ್ ಕಂಪನಿಯಿಂದ ಬಂದ ಇ-ಮೇಲ್ ಸಂದೇಶದಿಂದ ಬಯಲಾಗಿದೆ. ತಮ್ಮ ಖಾತೆಯಿಂದ ₹73 ಲಕ್ಷ ವರ್ಗಾವಣೆಯಾಗಿರುವ ಬಗ್ಗೆ ಸ್ಪಷ್ಟನೆ ಕೋರಿ ಎಸ್‌ಬಿಐನ ಮುಂಬೈ ಶಾಖೆ, ಮಲ್ಪೆ ಶಾಖೆಯ ವ್ಯವಸ್ಥಾಪಕ ರಾಜೇಶ್ ಗಣಪತಿ ಅವರನ್ನು ಸಂಪರ್ಕಿಸಿತ್ತು. ರಾಜೇಶ್ ಅವರು ದಾಖಲೆಗಳನ್ನು ಸಲ್ಲಿಸಿದಾಗ, ಹಣ ವರ್ಗಾವಣೆಗೆ ಸಂಬಂಧಿಸಿ ಯಾವುದೇ ಮನವಿಯನ್ನು ಕಳುಹಿಸಿಲ್ಲ ಎಂದು ಹೌಸಿಂಗ್ ಫೈನಾನ್ಸ್ ಕಂಪನಿ ಸ್ಪಷ್ಟಪಡಿಸಿದೆ. ಇದಾದ ನಂತರ ನಡೆದ ಪರಿಶೀಲನೆಯಲ್ಲಿ ಈ ವಂಚನೆ ಬಹಿರಂಗವಾಗಿದೆ.

    ಈ ವಂಚನೆ ಒಂದು ವಸತಿ ಹಣಕಾಸು ಕಂಪನಿಯಿಂದ ಎಸ್‌ಬಿಐಗೆ ಬಂದ ಇ-ಮೇಲ್ ಮೂಲಕ ಬಯಲಾಗಿದೆ. ಇದರಲ್ಲಿ, ಮಲ್ಪೆ ಶಾಖೆಯಿಂದ ಹಣ ವರ್ಗಾವಣೆಯ ಕುರಿತು ಯಾವುದೇ ಮನವಿ ಮಾಡಿಲ್ಲ ಎಂದು ಸ್ಪಷ್ಟಪಡಿಸಿದ ನಂತರ ವಂಚನೆ ದೃಢಪಟ್ಟಿದೆ.ಪ್ರಕರಣದ ಕುರಿತು ಮಲ್ಪೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.

    ರಕ್ತನಾಳ ಬ್ಲಾಕೇಜ್ ಸಂಕೇತಗಳು: ಹೃದಯಾಘಾತದ ಅಪಾಯ ತಪ್ಪಿಸಲು ತಿಳಿಯಲೇಬೇಕಾದ ಲಕ್ಷಣಗಳು

    ಕೃಷಿ ಎಐ ಕನ್ನಡ ವೆಬ್‌ಸೈಟ್‌ಗಾಗಿ ಇಲ್ಲಿ ಕ್ಲಿಕ್‌ ಮಾಡಿ


    Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ

    Subscribe to get the latest posts sent to your email.

    LEAVE A REPLY

    Related News

    ಮಹಾಲಯ ಅಮಾವಾಸ್ಯೆ 2026: ಅಕ್ಟೋಬರ್ 10ರಂದು ಆಚರಣೆ; ಪಿತೃಪೂಜೆಯ ಮಹತ್ವವೇನು?

    ಹಿಂದೂ ಧರ್ಮದಲ್ಲಿ ಮಹಾಲಯ ಅಮಾವಾಸ್ಯೆಗೆ ವಿಶೇಷ ಸ್ಥಾನವಿದೆ. ಪಿತೃಪಕ್ಷದ ಕೊನೆಯ ದಿನವಾದ ಈ ಸಂದರ್ಭದಲ್ಲಿ ಪೂರ್ವಜರನ್ನು ಸ್ಮರಿಸಿ, ಅವರ ಆತ್ಮಕ್ಕೆ ಶಾಂತಿ ಕೋರಿ ವಿವಿಧ ಧಾರ್ಮಿಕ ವಿಧಿವಿಧಾನಗಳನ್ನು ನೆರವೇರಿಸಲಾಗುತ್ತದೆ. ಈ ದಿನ ಶ್ರಾದ್ಧ,...

    ಕರ್ನಾಟಕಕ್ಕೆ ಗುಡ್‌ನ್ಯೂಸ್: ಯುಬಿಯಿಂದ ₹4,500 ಕೋಟಿ ಕೊಡುಗೆ, 36 ಸಾವಿರಕ್ಕೂ ಹೆಚ್ಚು ಉದ್ಯೋಗ

    ಬೆಂಗಳೂರು: ದೇಶದ ಅತಿದೊಡ್ಡ ಬಿಯರ್ ಉತ್ಪಾದನಾ ಸಂಸ್ಥೆ ಹಾಗೂ ಹೈನೆಕನ್‌ ಕಂಪನಿಯ ಭಾಗವಾಗಿರುವ ಬೆಂಗಳೂರು ಮೂಲದ 'ಯುನೈಟೆಡ್ ಬ್ರೂವರೀಸ್ ಲಿಮಿಟೆಡ್' (ಯುಬಿಎಲ್‌), ಕರ್ನಾಟಕದ ಆರ್ಥಿಕತೆ ಮತ್ತು ಉದ್ಯೋಗ ಸೃಷ್ಟಿಯಲ್ಲಿ ಮಹತ್ವದ ಪಾತ್ರ ವಹಿಸುತ್ತಿದೆ...

    Most Popular

    Recent Comments

    Home
    Play
    Notification
    Search