Thursday, November 5, 2026
spot_img
More
    spot_img
    HomeLatest newsಚೀನಾಗೆ ತೆರಳಿದ ಮೋದಿಗೆ ಡ್ರೋನ್‌ ಶೋ ಮೂಲಕ ಸ್ವಾಗತ; ನಕಲಿ ಫೋಟೊ ಸೃಷ್ಟಿಸಿ ಸಿಕ್ಕಿಬಿದ್ದ ಮೋದಿ...

    ಚೀನಾಗೆ ತೆರಳಿದ ಮೋದಿಗೆ ಡ್ರೋನ್‌ ಶೋ ಮೂಲಕ ಸ್ವಾಗತ; ನಕಲಿ ಫೋಟೊ ಸೃಷ್ಟಿಸಿ ಸಿಕ್ಕಿಬಿದ್ದ ಮೋದಿ ಭಕ್ತರು!

    ಚೀನಾದ ಟಯಾಂಜಿನ್‌ನಲ್ಲಿ ನಡೆಯುತ್ತಿರುವ ಶಾಂಘೈ ಶೃಂಗಸಭೆಯಲ್ಲಿ ಭಾರತದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಪಾಲ್ಗೊಂಡಿದ್ದಾರೆ.

    ಬಹು ದಿನಗಳ ಬಳಿಕ ಹಾಗೂ ಭಾರತ ಮತ್ತು ಚೀನಾ ನಡುವೆ ಅಂತಾರಾಷ್ಟ್ರೀಯ ಮಾಧ್ಯಮಗಳಲ್ಲಿ ಎಲ್ಲವೂ ಸರಿಯಿಲ್ಲ ಎಂಬ ಹಲವಾರು ಸುದ್ದಿಗಳು ಹರಿದಾಡಿದ ಬಳಿಕ ಮೋದಿ ಚೀನಾಗೆ ಭೇಟಿ ನೀಡಿದ್ದಾರೆ.

    ಇನ್ನು ಮೋದಿ ಮಾತ್ರವಲ್ಲದೇ ವಿವಿಧ ದೇಶಗಳ ಪ್ರಧಾನಿಗಳೂ ಸಹ ಈ ಶೃಂಗಸಭೆಯಲ್ಲಿ ಭಾಗಿಯಾಗಲು ಚೀನಾಗೆ ತೆರಳಿದ್ದಾರೆ.

    ಇದೇ ಸಂದರ್ಭದಲ್ಲಿ ಸಾಮಾಜಿಕ ಜಾಲತಾಣದಲ್ಲಿ ಮೋದಿ ಅಭಿಮಾನಿಗಳು, ಅವರೇ ಹೇಳಿಕೊಳ್ಳುವ ಹಾಗೆ ಮೋದಿ ಭಕ್ತರು ಡ್ರೋನ್‌ ಶೋನಲ್ಲಿ ಚೀನಾಗೆ ಸ್ವಾಗತ ಮೋದಿ ಎಂದು ಬರೆದಿರುವ ಫೋಟೊವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

    ಈ ಫೋಟೊದಲ್ಲಿ ಮೋದಿ ಭಾವಚಿತ್ರದೊಂದಿಗೆ ʼಮೋದಿ ವೆಲ್‌ಕಮ್‌ ಟು ಚೈನಾʼ ಎಂದು ಡ್ರೋನ್‌ ಶೋನಲ್ಲಿ ಬರೆದಿರುವಂತೆ ಕಾಣುತ್ತಿದೆ. ಆದರೆ ಮೋದಿ ಅಭಿಮಾನಿಗಳು ಹಂಚಿಕೊಂಡ ಈ ಫೋಟೊನ ಅಸಲಿಯತ್ತನ್ನು ಎಐ ಬಟಾಬಯಲು ಮಾಡಿದೆ. ಇದು 2020ರಲ್ಲಿ ಚಾಂಗ್‌ಕಿಂಗ್‌ನಲ್ಲಿ ನಡೆದ ಡ್ರೋನ್‌ ಶೋನ ಫೋಟೊ ಆಗಿದ್ದು, ಇದಕ್ಕೆ ʼಮೋದಿ ವೆಲ್‌ಕಮ್‌ ಟು ಚೈನಾʼ ಎಂಬ ಸಾಲನ್ನು ಸೇರಿಸಿ ಎಡಿಟ್‌ ಮಾಡಲಾಗಿದೆ ಎಂದು ಸತ್ಯಾಂಶವನ್ನು ಹೊರಹಾಕಿದೆ.

    ಪಿಂಚಣಿಗಾಗಿ ಅರ್ಜಿ ಹಾಕಿದ ಮಾಜಿ ಉಪರಾಷ್ಟ್ರಪತಿ ಜಗದೀಪ್‌ ಧನಕರ್‌; ತಿಂಗಳಿಗೆ ಎಷ್ಟು ರೂ?

    ಎಐ ಕನ್ನಡ ಕೃಷಿ ವೆಬ್‌ಸೈಟ್‌ಗಾಗಿ ಇಲ್ಲಿ ಕ್ಲಿಕ್‌ ಮಾಡಿ


    Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ

    Subscribe to get the latest posts sent to your email.

    LEAVE A REPLY

    Related News

    ಮಹಾಲಯ ಅಮಾವಾಸ್ಯೆ 2026: ಅಕ್ಟೋಬರ್ 10ರಂದು ಆಚರಣೆ; ಪಿತೃಪೂಜೆಯ ಮಹತ್ವವೇನು?

    ಹಿಂದೂ ಧರ್ಮದಲ್ಲಿ ಮಹಾಲಯ ಅಮಾವಾಸ್ಯೆಗೆ ವಿಶೇಷ ಸ್ಥಾನವಿದೆ. ಪಿತೃಪಕ್ಷದ ಕೊನೆಯ ದಿನವಾದ ಈ ಸಂದರ್ಭದಲ್ಲಿ ಪೂರ್ವಜರನ್ನು ಸ್ಮರಿಸಿ, ಅವರ ಆತ್ಮಕ್ಕೆ ಶಾಂತಿ ಕೋರಿ ವಿವಿಧ ಧಾರ್ಮಿಕ ವಿಧಿವಿಧಾನಗಳನ್ನು ನೆರವೇರಿಸಲಾಗುತ್ತದೆ. ಈ ದಿನ ಶ್ರಾದ್ಧ,...

    ಕರ್ನಾಟಕಕ್ಕೆ ಗುಡ್‌ನ್ಯೂಸ್: ಯುಬಿಯಿಂದ ₹4,500 ಕೋಟಿ ಕೊಡುಗೆ, 36 ಸಾವಿರಕ್ಕೂ ಹೆಚ್ಚು ಉದ್ಯೋಗ

    ಬೆಂಗಳೂರು: ದೇಶದ ಅತಿದೊಡ್ಡ ಬಿಯರ್ ಉತ್ಪಾದನಾ ಸಂಸ್ಥೆ ಹಾಗೂ ಹೈನೆಕನ್‌ ಕಂಪನಿಯ ಭಾಗವಾಗಿರುವ ಬೆಂಗಳೂರು ಮೂಲದ 'ಯುನೈಟೆಡ್ ಬ್ರೂವರೀಸ್ ಲಿಮಿಟೆಡ್' (ಯುಬಿಎಲ್‌), ಕರ್ನಾಟಕದ ಆರ್ಥಿಕತೆ ಮತ್ತು ಉದ್ಯೋಗ ಸೃಷ್ಟಿಯಲ್ಲಿ ಮಹತ್ವದ ಪಾತ್ರ ವಹಿಸುತ್ತಿದೆ...

    Most Popular

    Recent Comments

    Home
    Play
    Notification
    Search