ಟೀಂ ಇಂಡಿಯಾದ ಮಾಜಿ ಆಟಗಾರ, ಮಹೇಂದ್ರ ಸಿಂಗ್ ಧೋನಿ ಅವರನ್ನು ಭಾರತೀಯ ತಂಡದ ಮಾರ್ಗದಶಕರಾಗಿ ಆಯ್ಕೆ ಮಾಡಲು ಬಿಸಿಸಿಐ ರೆಡಿಯಿದೆ. 2021ರ ಟಿ20 ವಿಶ್ವಕಪ್ ಸಮಯದಲ್ಲಿ ಮಹೇಂದ್ರ ಸಿಂಗ್ ಧೋನಿ ಅವರು ಭಾರತ ತಂಡದ ಮಾರ್ಗದರ್ಶಕ ಆಗಿದ್ದರು.
ಈ ಬಾರಿ ಮಾರ್ಗದರ್ಶಕ ಆಗಲು ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ ಭಾರತದ ಮಾಜಿ ನಾಯಕ ಎಂಎಸ್ ಧೋನಿ ಅವರನ್ನು ಸಂಪರ್ಕಿಸಿದೆ. ಆದರೆ ಧೋನಿ ಇನ್ನೂ ಒಪ್ಪಿಕೊಂಡಿಲ್ಲ ಎನ್ನಲಾಗುತ್ತಿದೆ. ಗಂಭೀರ್ ಕೋಚ್ ಆಗಿರುವ ಕಾರಣ ಧೋನಿ ಅವರು ಬಿಸಿಸಿಐ ನ ಹೊಸ ಆಫರ್ ಒಪ್ಪಿಕೊಳ್ಳುವುದು ಕಷ್ಟ ಎನ್ನಲಾಗಿದೆ.
2007 ರ ಟಿ 20 ವಿಶ್ವಕಪ್, 2011 ರ ಏಕದಿನ ವಿಶ್ವಕಪ್ ಮತ್ತು 2013 ರ ಚಾಂಪಿಯನ್ಸ್ ಟ್ರೋಫಿಯನ್ನು ಭಾರತ ಅವರ ನಾಯಕತ್ವದಲ್ಲಿ ಗೆದ್ದಿದೆ. ಶಾಂತ ನಾಯಕತ್ವ, ಪ್ರತಿಭೆ ಮತ್ತು ಯುವ ಪ್ರತಿಭೆಗಳನ್ನು ಬೆಳೆಸುವ ಸಾಮರ್ಥ್ಯ ಅವರಲ್ಲಿದೆ. ಮಾರ್ಗದರ್ಶನ ಮಾಡಲು ಧೋನಿ ಸೂಕ್ತ ಎನ್ನಲಾಗುತ್ತಿದೆ. ಆದರೆ ಧೋನಿ ಒಪ್ಪಿಕೊಳ್ಳುತ್ತಾರೊ ಇಲ್ಲವೊ ಕಾದು ನೋಡಬೇಕು.
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


