ಇಂದು, ನವೆಂಬರ್ 01, 2025 ರಂದು, ಚಿನ್ನಾಭರಣ ಪ್ರಿಯರಿಗೆ ಸಂತಸದ ಸುದ್ದಿ ಎಂಬಂತೆ ಮಾರುಕಟ್ಟೆಯಲ್ಲಿ ಚಿನ್ನದ ದರದಲ್ಲಿ ಇಳಿಕೆ ಕಂಡುಬಂದಿದೆ. ಶುಕ್ರವಾರದ ವಹಿವಾಟಿನಲ್ಲಿ 22 ಕ್ಯಾರೆಟ್‌ನ ಪ್ರತಿ ಗ್ರಾಂ ಚಿನ್ನದ ಬೆಲೆಯಲ್ಲಿ ₹25 ಇಳಿಕೆಯಾಗಿದ್ದು, ಇದರ ಹೊಸ ದರ ₹11,275 ಕ್ಕೆ ತಲುಪಿದೆ.
ಅದೇ ರೀತಿ, ಶುದ್ಧ ಚಿನ್ನವಾದ 24 ಕ್ಯಾರೆಟ್‌ನ ಪ್ರತಿ ಗ್ರಾಂ ದರದಲ್ಲಿ ₹28 ಇಳಿಕೆಯಾಗಿದ್ದು, ಇದರ ಬೆಲೆ ₹12,300 ಆಗಿದೆ. ಇಂದಿನ ದರಗಳ ಪ್ರಕಾರ, 22 ಕ್ಯಾರೆಟ್‌ನ 10 ಗ್ರಾಂ ಚಿನ್ನವನ್ನು ಖರೀದಿಸಲು ₹1,12,750 ಹಾಗೂ 24 ಕ್ಯಾರೆಟ್‌ನ 10 ಗ್ರಾಂ ಚಿನ್ನಕ್ಕೆ ₹1,23,000 ಪಾವತಿಸಬೇಕಾಗುತ್ತದೆ.
ನವೆಂಬರ್ 01, 2025 ರಂದು ವಿವಿಧ ನಗರಗಳಲ್ಲಿ ಚಿನ್ನದ ದರಗಳು
| ನಗರ | 22 ಕ್ಯಾರೆಟ್ (1 ಗ್ರಾಂ) | 24 ಕ್ಯಾರೆಟ್ (1 ಗ್ರಾಂ) |
|---|---|---|
| ಚೆನ್ನೈ | 11,275 ರೂ. | 12,300 ರೂ. |
| ಮುಂಬೈ | 11,275 ರೂ. | 12,300 ರೂ. |
| ದಿಲ್ಲಿ | 11,290 ರೂ. | 12,315 ರೂ. |
| ಕೋಲ್ಕತಾ | 11,275 ರೂ. | 12,300 ರೂ. |
| ಹೈದರಾಬಾದ್ | 11,275 ರೂ. | 12,300 ರೂ. |
ಬೆಳ್ಳಿ ದರ
ಬೆಂಗಳೂರಿನಲ್ಲಿ ಬೆಳ್ಳಿ ದರದಲ್ಲಿಯೂ ಕೊಂಚ ಏರಿಕೆ ಕಂಡು ಬಂದಿದೆ. 1 ಗ್ರಾಂಗೆ 152 ರೂ. ಇದ್ದರೆ, 8 ಗ್ರಾಂಗೆ 1,216 ಹಾಗೂ 10 ಗ್ರಾಂಗೆ 1,520 ರೂ. ಮತ್ತು 1 ಕೆಜಿಗೆ 1,52,000 ರೂ. ಇದೆ.
ರಾಜ್ಯ ಸಣ್ಣ ಕೈಗಾರಿಕೆಗಳ ನಿಗಮದಲ್ಲಿ ವಿವಿಧ ಹುದ್ದೆಗಳ ಭರ್ತಿಗೆ ಅಧಿಸೂಚನೆ; ನ. 14 ಕೊನೆ ದಿನ.
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


