Monday, August 3, 2026
spot_img
More
    spot_img
    HomeKarunaduಕನ್ನಡ ರಾಜ್ಯೋತ್ಸವ: ಮೆಟ್ರೊ ರೈಲಿನ ತುಂಬಾ ಪುನೀತ್ ರಾಜ್‌ಕುಮಾರ್‌; ವಿಡಿಯೊ

    ಕನ್ನಡ ರಾಜ್ಯೋತ್ಸವ: ಮೆಟ್ರೊ ರೈಲಿನ ತುಂಬಾ ಪುನೀತ್ ರಾಜ್‌ಕುಮಾರ್‌; ವಿಡಿಯೊ

    ಬೆಂಗಳೂರು: ರಾಜ್ಯಾದ್ಯಂತ 70ನೇ ಕನ್ನಡ ರಾಜ್ಯೋತ್ಸವದ ಆಚರಣೆ ಜೋರಾಗಿದ್ದು, ಎಲ್ಲೆಡೆ ಹಳದಿ ಕೆಂಪು ಬಾವುಟದ ಕಲರವ ಜೋರಾಗಿದೆ. .

    Advertisement

    ವಿವಿಧ ನಗರಗಳಲ್ಲಿ ಭಿನ್ನ ವಿಭಿನ್ನವಾಗಿ ಕನ್ನಡ ರಾಜ್ಯೋತ್ಸವವನ್ನು ಆಚರಿಸಲಾಗಿದ್ದು, ನಮ್ಮ ಮೆಟ್ರೊದ ಹಸಿರು ಮಾರ್ಗದ ರೈಲಿನ ಮೇಲೆ ಪುನೀತ್‌ ರಾಜ್‌ಕುಮಾರ್‌ ಫೋಟೊಗಳು ಕನ್ನಡ ರಾಜ್ಯೋತ್ಸವದ ಶುಭಾಶಯದ ಬರಹದೊಂದಿಗೆ ರಾರಾಜಿಸಿವೆ.

    ಪಿಆರ್‌ಕೆ ಪ್ರೊಡಕ್ಷನ್‌ ಹಾಗೂ ಪಿಆರ್‌ಕೆ ಆಡಿಯೊ ಲೋಗೊ ಜತೆ ಕನ್ನಡವೇ ಹಸಿರು ಕನ್ನಡವೇ ಉಸಿರು ಎಂಬ ಸಾಲುಗಳುಳ್ಳ ಅಪ್ಪು ಕನ್ನಡದ ರಾಜ್ಯೋತ್ಸವದ ಪೋಸ್ಟರ್‌ಗಳನ್ನು ಇಡೀ ರೈಲಿಗೆ ಹಾಕಲಾಗಿದ್ದು, ಇದರ ವಿಡಿಯೊಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿವೆ.

    ಈ ಮೂಲಕ ಪಿಆರ್‌ಕೆ ಸಂಸ್ಥೆ ನಾಡಿನ ಜನತೆಗೆ ಕನ್ನಡ ರಾಜ್ಯೋತ್ಸವದ ಶುಭಾಶಯಗಳನ್ನು ಕೋರಿದೆ.

    ಸಾಮಾಜಿಕ ಜಾಲತಾಣದಲ್ಲೂ ಹಳದಿ, ಕೆಂಪು ಜತೆ ಅಪ್ಪು

    ಕನ್ನಡದ ವಿಚಾರದಲ್ಲಿ ಚಿತ್ರರಂಗದ ಕುರಿತು ಚರ್ಚೆ ಬಂದಾಗಲೆಲ್ಲ ಮೊದಲಿಗೆ ಬರುವ ಹೆಸರೇ ರಾಜ್‌ಕುಮಾರ್‌ ಕುಟುಂಬ. ತಂದೆ ರಾಜ್‌ಕುಮಾರ್‌ ರೀತಿಯೇ ಕನ್ನಡವೆಂದರೆ ಅಪಾರವಾದ ಪ್ರೀತಿ ಹಾಗೂ ಅಭಿಮಾನ ಹೊಂದಿದ್ದ ಪುನೀತ್‌ ಎಂದರೆ ಅಪ್ಪಟ ಕನ್ನಡದ ಹೀರೊ ಎಂದೇ ಹೆಸರು ಮಾಡಿದವರು. ತೆರೆ ಮೇಲೆ ಮಾತ್ರವಲ್ಲದೇ ತೆರೆಯ ಹೊರಗೂ ಸಹ ಅನೇಕ ಬಾರಿ ಕನ್ನಡ ನಾಡು, ನುಡಿ, ಜಲದ ಕುರಿತು ಮಾತನಾಡಿರುವ ಪುನೀತ್‌ ಅವರ ವಿಡಿಯೊಗಳು ಸಹ ಇಂದು ರಾಜ್ಯೋತ್ಸವದ ಪ್ರಯುಕ್ತ ಮತ್ತೊಮ್ಮೆ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡಿವೆ.


    Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ

    Subscribe to get the latest posts sent to your email.

    Leave a Reply

    Related News

    ಎಸ್‌ಐಆರ್ ಅಕ್ರಮ: ಎನ್‌ಡಿಎ ನಿಯೋಗ ಮುಖ್ಯ ಚುನಾವಣಾ ಆಯುಕ್ತರಿಗೆ ದೂರು

    ಕರ್ನಾಟಕದಲ್ಲಿ ಎಸ್‌ಐಆರ್ ಪ್ರಕ್ರಿಯೆ ದುರುಪಯೋಗದ ಆರೋಪದೊಂದಿಗೆ ಕುಮಾರಸ್ವಾಮಿ ಮತ್ತು ಪ್ರಲ್ಹಾದ ಜೋಶಿ ನೇತೃತ್ವದ ಎನ್‌ಡಿಎ ನಿಯೋಗ ನವದೆಹಲಿಯಲ್ಲಿ ಮುಖ್ಯ ಚುನಾವಣಾ ಆಯುಕ್ತರಿಗೆ ದಾಖಲೆ ಸಮೇತ ದೂರು ಸಲ್ಲಿಸಿತು.

    ಮಾದಪಟ್ಟಣ ಕ್ವಾರಿ ದುರಂತ: ಅಶೋಕ ತಲಾ ₹50 ಲಕ್ಷ ಪರಿಹಾರ ಆಗ್ರಹ

    ಬೆಂಗಳೂರು ಮಾದಪಟ್ಟಣ ಕ್ವಾರಿಯಲ್ಲಿ ಬಂಡೆ ಬಿದ್ದು 7 ಕಾರ್ಮಿಕರು ಮೃತಪಟ್ಟ ಘಟನೆಗೆ ಪ್ರತಿಪಕ್ಷ ನಾಯಕ ಆರ್.ಅಶೋಕ ರಾಜ್ಯ ಸರ್ಕಾರದ ನಿರ್ಲಕ್ಷ್ಯವೇ ಕಾರಣ ಎಂದು ದೂರಿ ತಲಾ ₹50 ಲಕ್ಷ ಪರಿಹಾರ ಒತ್ತಾಯಿಸಿದ್ದಾರೆ.

    Most Popular

    Recent Comments

    Home
    Play
    Notification
    Search

    Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ

    Subscribe now to keep reading and get access to the full archive.

    Continue reading