Monday, August 3, 2026
spot_img
More
    spot_img
    HomeEntertainmentಕಾಂತಾರ ದೈವವನ್ನು ರಿಷಬ್ ಶೆಟ್ಟಿ ಮುಂದೆಯೇ ದೆವ್ವ ಎಂದ ರಣ್‌ವೀರ್ ಸಿಂಗ್; ವಿಡಿಯೊ

    ಕಾಂತಾರ ದೈವವನ್ನು ರಿಷಬ್ ಶೆಟ್ಟಿ ಮುಂದೆಯೇ ದೆವ್ವ ಎಂದ ರಣ್‌ವೀರ್ ಸಿಂಗ್; ವಿಡಿಯೊ

    ನಟ ರಿಷಬ್‌ ಶೆಟ್ಟಿ ಹೊಗಳುವ ಭರದಲ್ಲಿ ಬಾಲಿವುಡ್‌ ನಟ ರಣವೀರ್‌ ಸಿಂಗ್‌ ಕಾಂತಾರ ದೈವಕ್ಕೆ ಅಪಮಾನ ಮಾಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ.

    Advertisement

    ಗೋವಾದಲ್ಲಿ ನಡೆದ ಅಂತರಾಷ್ಟ್ರೀಯ ಚಿತ್ರೋತ್ಸವದಲ್ಲಿ ಮಾತನಾಡಿದ ರಣವೀರ್‌ ಸಿಂಗ್‌ ಅವರು, ಕಾಂತಾರ-1 ಚಿತ್ರವನ್ನು ಥಿಯೇಟರ್‌ನಲ್ಲಿ ನೋಡಿದೆ. ರಿಷಬ್‌ ಶೆಟ್ಟಿ ಅವರ ಅಭಿನಯ ನಿಜವಾಗಿಯೂ ಅದ್ಭುತವಾಗಿದೆ. ಹೆಣ್ಣು ದೆವ್ವ ನಿಮ್ಮ ಮೇಲೆ ಬರುತ್ತಲ್ಲ ಅದು ಅದ್ಭುತ. ನಿಮ್ಮ ನಟನೆ ಸೂಪರ್‌ ಎಂದು ದೈವದ ಅನುಕರಣೆ ಮಾಡಿದ್ದಾರೆ.

    ಹೀಗೆ ದೈವ ಎನ್ನುವ ಬದಲು ದೆವ್ವ ಎಂದು ಹೇಳಿಕೆ ನೀಡುವ ಮೂಲಕ ರಣ್‌ವೀರ್ ಸಿಂಗ್ ವಿವಾದವನ್ನು ಎಬ್ಬಿಸಿದ್ದಾರೆ. ಇನ್ನು ನೆಟ್ಟಿಗರು ಈ ಕುರಿತು ಕಿಡಿಕಾರಿದ್ದು, ಓರ್ವ ಸ್ಟಾರ್ ನಟನಿಗೆ ದೊಡ್ಡ ಚಿತ್ರದ ಅಂಶ ಅರ್ಥವಾಗದೇ ಇರುವುದು ವಿಪರ್ಯಾಸದ ಸಂಗತಿ ಹಾಗೂ ದಡ್ಡತನ ಎಂದು ಕಿಡಿಕಾರಿದ್ದಾರೆ.

    ಅತ್ತ ಅಮೆಜಾನ್ ಪ್ರೈಮ್ ವಿಡಿಯೊ ಸಹ ತನ್ನ ಎಕ್ಸ್ ಖಾತೆಯಲ್ಲಿ ಕಾಂತಾರ ಚಾಪ್ಟರ್ 1 ಚಿತ್ರದ ದೃಶ್ಯವನ್ನು ಹಂಚಿಕೊಂಡು ರಣ್‌ವೀರ್ ಸಿಂಗ್‌ಗೆ ಕೌಂಟರ್ ಕೊಟ್ಟಿದೆ. ಚಿತ್ರದಲ್ಲಿ ನಾಯಕಿ ಹಾಗೂ ನಾಯಕನ ನಡುವೆ ದೈವದ ಕುರಿತಾಗಿ ನಡೆಯುವ ಸಂಭಾಷಣೆಯೊಂದರ ಹಿಂದಿ ಭಾಷೆಯ ವಿಡಿಯೊವನ್ನು ಅಮೆಜಾನ್ ಹರಿಬಿಟ್ಟಿದ್ದು, ನೆಟ್ಟಿಗರು ರಣ್‌ವೀರ್ ವಿವಾದ ಎಬ್ಬಿಸಿದ ಹೊತ್ತಿನಲ್ಲಿ ಸರಿಯಾಗಿ ಕೌಂಟರ್ ಕೊಟ್ಟಿದ್ದೀರ ಎಂದು ಕಾಮೆಂಟ್ ಮಾಡುತ್ತಿದ್ದಾರೆ.

    ಈ ವಿಡಿಯೊ ಮಾತ್ರವಲ್ಲದೇ ಮತ್ತೊಂದು ವಿಡಿಯೊ ವೈರಲ್ ಆಗಿದ್ದು, ಇದರಲ್ಲಿ ರಣ್‌ವೀರ್ ಸಿಂಗ್ ದೈವದ ರೀತಿ ನಟಿಸಲು ಮುಂದಾಗಿದ್ದು, ಈ ವೇಳೆ ರಿಷಬ್ ಅನುಕರಣೆ ಬೇಡ ಎಂದು ರಣ್‌ವೀರ್‌ ಸಿಂಗ್‌ಗೆ ತಿಳಿಸಿದ್ದಾರೆ. ಈ ಕುರಿತು ಸಹ ಚರ್ಚೆಗಳು ನಡೆದಿವೆ.

    ಯುವಕನಿಂದ ಲೈಂಗಿಕ ಕಿರುಕುಳ: ನಟಿ ಆಶಿಕಾ ರಂಗನಾಥ್ ಮಾವನ ಮಗಳು ಆತ್ಮಹತ್ಯೆ


    Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ

    Subscribe to get the latest posts sent to your email.

    Leave a Reply

    Related News

    ಎಸ್‌ಐಆರ್ ಅಕ್ರಮ: ಎನ್‌ಡಿಎ ನಿಯೋಗ ಮುಖ್ಯ ಚುನಾವಣಾ ಆಯುಕ್ತರಿಗೆ ದೂರು

    ಕರ್ನಾಟಕದಲ್ಲಿ ಎಸ್‌ಐಆರ್ ಪ್ರಕ್ರಿಯೆ ದುರುಪಯೋಗದ ಆರೋಪದೊಂದಿಗೆ ಕುಮಾರಸ್ವಾಮಿ ಮತ್ತು ಪ್ರಲ್ಹಾದ ಜೋಶಿ ನೇತೃತ್ವದ ಎನ್‌ಡಿಎ ನಿಯೋಗ ನವದೆಹಲಿಯಲ್ಲಿ ಮುಖ್ಯ ಚುನಾವಣಾ ಆಯುಕ್ತರಿಗೆ ದಾಖಲೆ ಸಮೇತ ದೂರು ಸಲ್ಲಿಸಿತು.

    ಮಾದಪಟ್ಟಣ ಕ್ವಾರಿ ದುರಂತ: ಅಶೋಕ ತಲಾ ₹50 ಲಕ್ಷ ಪರಿಹಾರ ಆಗ್ರಹ

    ಬೆಂಗಳೂರು ಮಾದಪಟ್ಟಣ ಕ್ವಾರಿಯಲ್ಲಿ ಬಂಡೆ ಬಿದ್ದು 7 ಕಾರ್ಮಿಕರು ಮೃತಪಟ್ಟ ಘಟನೆಗೆ ಪ್ರತಿಪಕ್ಷ ನಾಯಕ ಆರ್.ಅಶೋಕ ರಾಜ್ಯ ಸರ್ಕಾರದ ನಿರ್ಲಕ್ಷ್ಯವೇ ಕಾರಣ ಎಂದು ದೂರಿ ತಲಾ ₹50 ಲಕ್ಷ ಪರಿಹಾರ ಒತ್ತಾಯಿಸಿದ್ದಾರೆ.

    Most Popular

    Recent Comments

    Home
    Play
    Notification
    Search

    Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ

    Subscribe now to keep reading and get access to the full archive.

    Continue reading