Monday, August 3, 2026
spot_img
More
    spot_img
    HomeLatest newsದಿತ್ವಾ ಚಂಡಮಾರುತದ ಅಬ್ಬರ: ಗಗನಕ್ಕೇರಿದ ತರಕಾರಿ ಬೆಲೆಗಳು; ಯಾವುದರ ಬೆಲೆ ಎಷ್ಟು? ಇಲ್ಲಿದೆ ಪಟ್ಟಿ

    ದಿತ್ವಾ ಚಂಡಮಾರುತದ ಅಬ್ಬರ: ಗಗನಕ್ಕೇರಿದ ತರಕಾರಿ ಬೆಲೆಗಳು; ಯಾವುದರ ಬೆಲೆ ಎಷ್ಟು? ಇಲ್ಲಿದೆ ಪಟ್ಟಿ

    ಬೆಂಗಳೂರು (ಡಿಸೆಂಬರ್ 1, 2025): ಕಳೆದ ಎರಡು ಮೂರು ದಿನಗಳಿಂದ ರಾಜ್ಯಾದ್ಯಂತ ಚಳಿಯ ಪ್ರಮಾಣ ವಿಪರೀತವಾಗಿ ಏರಿಕೆ ಕಂಡಿದ್ದು, ಅಲ್ಲಲ್ಲಿ ಜಿಟಿಜಿಟಿ ಮಳೆ ಕೂಡ ಆಗಿದೆ. ಸೂರ್ಯನ ಕಿರಣ ಕಾಣದೇ ಮೈಕೊರೆಯುವ ಚಳಿಗೆ ಜನರು ನಡುಗಿಹೋಗಿದ್ದು, ಇದರ ನಡುವೆಯೇ ಅಗತ್ಯ ವಸ್ತುಗಳಲ್ಲೊಂದಾದ ತರಕಾರಿ ಬೆಲೆಗಳು ಗಗನಕ್ಕೇರಿವೆ.

    Advertisement

    ದಿತ್ವಾ ಚಂಡಮಾರುತದ ಎಫೆಕ್ಟ್‌ನಿಂದಾಗಿ ಈ ವೈಪರಿತ್ಯ ಉಂಟಾಗಿದ್ದು, ಜನಸಾಮಾನ್ಯರು ತರಕಾರಿ ಬೆಲೆ ಏರಿಕೆಗೆ ಸುಸ್ತಾಗಿದ್ದಾರೆ. ನಗರದ ಕೆಆರ್‌ ಮಾರುಕಟ್ಟೆಯಲ್ಲಿ ಒಂದು ಕೆಜಿ ಟೊಮ್ಯಾಟೊಗೆ 60ರಿಂದ 80 ರೂಪಾಯಿಗಳಾಗಿದ್ದು, ನುಗ್ಗೆಕಾಯಿ ಕೆಜಿಗೆ 600 ರೂಗಳ ಸನಿಹ ತಲುಪಿದೆ.

    ದಿತ್ವಾ ಚಂಡಮಾರುತ ನೆರೆಯ ತಮಿಳುನಾಡಿನಲ್ಲಿ ಅಕಾಲಿಕ ಮಳೆ ತರಿಸಿದ್ದು, ತರಕಾರಿ ಫಸಲು ಕೈಗೆ ಬರುತ್ತದೆ ಎಂಬ ನಿರೀಕ್ಷೆಯಲ್ಲಿದ್ದ ರೈತನ ಬೆಳೆಗಳು ಹಾನಿಗೊಳಗಾವಿವೆ. ಹೀಗಾಗಿ ತಮಿಳುನಾಡಿನಿಂದ ರಾಜ್ಯಕ್ಕೆ ತರಕಾರಿ ಪೂರೈಕೆಯಲ್ಲಿ ಕುಸಿತ ಕಂಡಿದ್ದು, ಟೊಮ್ಯಾಟೊ ಹಾಗೂ ನುಗ್ಗೆಕಾಯಿ ಮಾತ್ರವಲ್ಲದೇ ಇತರೆ ತರಕಾರಿ ಬೆಲೆಗಳು ಸಹ ಏರಿಕೆ ಕಂಡಿವೆ. ಯಾವ ತರಕಾರಿ ಬೆಲೆ ಕೆಜಿಗೆ ಎಷ್ಟಿದೆ ಎಂಬುದರ ಪಟ್ಟಿ ಮುಂದಿದೆ.

    ನುಗ್ಗೆಕಾಯಿ: 550 – 600

    ಟೊಮ್ಯಾಟೊ: 60 – 80

    ಅವರೆಕಾಯಿ: 80 – 100

    ಹಸಿರು ಬಟಾಣಿ: 250

    ಬೀನ್ಸ್: 60-80

    ತೊಂಡೆಕಾಯಿ: 80 – 100

    ತೊಗರಿಕಾಯಿ: 60-70

    ಕ್ಯಾರೆಟ್: 60-80

    ಬೀಟ್ರೂಟ್ 60-70

    ದಪ್ಪ ಮೆಣಸಿನಕಾಯಿ: 80-100

    ಗೆಡ್ಡೆಕೋಸು: 70-80

    ಬೆಂಡೆಕಾಯಿ: 60-80

    ಯುವಕನಿಂದ ಲೈಂಗಿಕ ಕಿರುಕುಳ: ನಟಿ ಆಶಿಕಾ ರಂಗನಾಥ್ ಮಾವನ ಮಗಳು ಆತ್ಮಹತ್ಯೆ


    Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ

    Subscribe to get the latest posts sent to your email.

    Leave a Reply

    Related News

    ಎಸ್‌ಐಆರ್ ಅಕ್ರಮ: ಎನ್‌ಡಿಎ ನಿಯೋಗ ಮುಖ್ಯ ಚುನಾವಣಾ ಆಯುಕ್ತರಿಗೆ ದೂರು

    ಕರ್ನಾಟಕದಲ್ಲಿ ಎಸ್‌ಐಆರ್ ಪ್ರಕ್ರಿಯೆ ದುರುಪಯೋಗದ ಆರೋಪದೊಂದಿಗೆ ಕುಮಾರಸ್ವಾಮಿ ಮತ್ತು ಪ್ರಲ್ಹಾದ ಜೋಶಿ ನೇತೃತ್ವದ ಎನ್‌ಡಿಎ ನಿಯೋಗ ನವದೆಹಲಿಯಲ್ಲಿ ಮುಖ್ಯ ಚುನಾವಣಾ ಆಯುಕ್ತರಿಗೆ ದಾಖಲೆ ಸಮೇತ ದೂರು ಸಲ್ಲಿಸಿತು.

    ಮಾದಪಟ್ಟಣ ಕ್ವಾರಿ ದುರಂತ: ಅಶೋಕ ತಲಾ ₹50 ಲಕ್ಷ ಪರಿಹಾರ ಆಗ್ರಹ

    ಬೆಂಗಳೂರು ಮಾದಪಟ್ಟಣ ಕ್ವಾರಿಯಲ್ಲಿ ಬಂಡೆ ಬಿದ್ದು 7 ಕಾರ್ಮಿಕರು ಮೃತಪಟ್ಟ ಘಟನೆಗೆ ಪ್ರತಿಪಕ್ಷ ನಾಯಕ ಆರ್.ಅಶೋಕ ರಾಜ್ಯ ಸರ್ಕಾರದ ನಿರ್ಲಕ್ಷ್ಯವೇ ಕಾರಣ ಎಂದು ದೂರಿ ತಲಾ ₹50 ಲಕ್ಷ ಪರಿಹಾರ ಒತ್ತಾಯಿಸಿದ್ದಾರೆ.

    Most Popular

    Recent Comments

    Home
    Play
    Notification
    Search

    Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ

    Subscribe now to keep reading and get access to the full archive.

    Continue reading