ವಿವಾದದಿಂದಲೇ ಹೆಸರುವಾಸಿಯಾದ ಆಧ್ಯಾತ್ಮಿಕ ಗುರು ನಿತ್ಯಾನಂದ ಸಾವನ್ನಪ್ಪಿದ್ದಾರೆ ಎಂಬ ಸುದ್ದಿ ಸದ್ಯ ಸಣ್ಣದೊಂದು ಚರ್ಚೆಯನ್ನು ಹುಟ್ಟುಹಾಕಿದೆ.
2019ರಲ್ಲಿ ಭಾರತ ತೊರೆದು ಯುನೈಟೆಡ್ ಸ್ಟೇಟ್ಸ್ ಆಫ್ ಕೈಲಾಸ ಎಂಬ ಹೊಸ ದೇಶವನ್ನೇ ಕಟ್ಟಿದ್ದೇನೆ ಎಂದು ಹೇಳಿಕೊಂಡಿದ್ದ ನಿತ್ಯಾನಂದ ಯುಗಾದಿ ಹಬ್ಬದ ನಂತರಿದಂದ ಎಲ್ಲಿಯೂ ಕಾಣಿಸಿಕೊಂಡಿಲ್ಲ.
ಶಿವರಾತ್ರಿ ಹಬ್ಬದ ಪ್ರಯುಕ್ತ ನಿತ್ಯಾನಂದ ವಿಡಿಯೊ ಮಾಡಿ ಆ ವಿಶೇಷತೆ ಬಗ್ಗೆ ಮಾತನಾಡುತ್ತಿದ್ದರು. ಈ ವೇಳೆ ವಿಡಿಯೊ ಇದ್ದಕ್ಕಿದ್ದಂತೆ ಸ್ಟಕ್ ಆಗಿ ನಿಂತುಹೋಗಿತ್ತು. ಈ ವಿಡಿಯೊ ಬಳಿಕ ನಿತ್ಯಾನಂದ ಯಾವೊಂದು ವಿಡಿಯೊದಲ್ಲೂ ಸಹ ಕಾಣಿಸಿಕೊಂಡಿಲ್ಲ.
ಇನ್ನು ನಿತ್ಯಾನಂದ ತುಂಬಾ ದಿನಗಳಿಂದ ಇಲ್ಲದೇ ಇರುವುದು ಸಾಕಷ್ಟು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದ್ದು, ಸದ್ಯ ಈ ವಿಷಯ ಗಂಭೀರ ಸ್ವರೂಪ ಪಡೆದುಕೊಳ್ಳುವ ಲಕ್ಷಣಗಳು ಕಾಣಿಸಿಕೊಳ್ಳುತ್ತಿವೆ.
ನಿತ್ಯಾನಂದನ ಸೋದರಳಿಯ ಕಳೆದ ಭಾನುವಾರ ವಿಡಿಯೊವೊಂದನ್ನು ಬಿಡುಗಡೆ ಮಾಡಿದ್ದು, ಈ ವಿಡಿಯೊದಲ್ಲಿ ಹಿಂದೂ ಧರ್ಮವನ್ನು ರಕ್ಷಿಸಲು ಸ್ವಾಮಿ ನಿತ್ಯಾನಂದ ಅವರು ಪ್ರಾಣತ್ಯಾಗ ಮಾಡಿದ್ದಾರೆ ಎಂಬ ಹೇಳಿಕೆ ನೀಡಿದ್ದಾರೆ. ಈ ಮೂಲಕ ನಿತ್ಯಾನಂದ ಸಾವನ್ನಪ್ಪಿರಬಹುದು ಎನ್ನಲಾಗುತ್ತಿದ್ದ ಸುದ್ದಿ ಮತ್ತಷ್ಟು ವೈರಲ್ ಆಗಿದೆ.
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


