ಚಿಕ್ಕಮಗಳೂರು: ಹೆಂಡತಿ ಬಿಟ್ಟುಹೋದ ಬಳಿಕ ನೆರೆ ಹೊರೆಯುವರು ಹಾಗೂ ಸ್ನೇಹಿತರು ಪದೆಪದೇ ಪ್ರಶ್ನೆ ಕೇಳುತ್ತಿದ್ದಾರೆ, ತನ್ನ ಮಗಳಿಗೂ ಸಹ ಈ ಪ್ರಶ್ನೆ ಎದುರಾಗುತ್ತಿದೆ ಎಂಬ ಕಾರಣದಿಂದ ಮನನೊಂದ ಪತಿಯೊಬ್ಬ ತನ್ನ ಅತ್ತೆ, ನಾದಿನಿ ಹಾಗೂ ಮಗಳನ್ನು ಗುಂಡು ಹಾರಿಸಿ ಹತ್ಯೆಗೈದಿದ್ದಾನೆ.
ಎರಡು ವರ್ಷಗಳ ಹಿಂದೆ ಹೆಂಡತಿ ಕೊಪ್ಪ ಮೂಲದ ರತ್ನಾಕರ್ ಎಂಬಾತನನ್ನು ಬಿಟ್ಟುಹೋಗಿದ್ದಳು. ರತ್ನಾಕರ್ ಖಾಸಗಿ ಶಾಲೆಯೊಂದರಲ್ಲಿ ಡ್ರೈವರ್ ಆಗಿ ಕೆಲಸ ಮಾಡಿಕೊಂಡಿದ್ದನು. ತನ್ನ ಮಗಳು ಮೌಲ್ಯಳನ್ನೂ ಸಹ ಅದೇ ಶಾಲೆಯಲ್ಲಿ ಓದಿಸುತ್ತಿದ್ದ.
ಇದೇ ಶಾಲೆಯಲ್ಲಿ ಮಕ್ಕಳು ತನ್ನ ಮಗಳಿಗೆ ಆಕೆಯ ತಾಯಿ ಬಗ್ಗೆ ಪ್ರಶ್ನೆಗಳನ್ನು ಕೇಳುತ್ತಾರೆ, ಇದರಿಂದ ಆಕೆಯ ಮಾನಸಿಕ ನೆಮ್ಮದಿ ಹಾಳಾಗುತ್ತಿದೆ. ಅಲ್ಲದೇ ತನ್ನನ್ನೂ ಸಹ ಈ ಕುರಿತಾಗಿ ಸ್ನೇಹಿತರು ಪ್ರಶ್ನೆ ಮಾಡಿದ್ದರಿಂದ ಮನನೊಂದ ಕಾರಣ ಈ ಹತ್ಯೆ ಮಾಡಿರುವುದಾಗಿ ರತ್ನಾಕರ್ ವಿಡಿಯೊ ಮಾಡುವ ಮೂಲಕ ಕೊಲೆಗೆ ಕಾರಣವನ್ನು ಬಿಚ್ಚಿಟ್ಟಿದ್ದಾನೆ.
ನಾಡ ಬಂದೂಕನ್ನು ಬಳಸಿ ಅತ್ತೆ ಜ್ಯೋತಿ ( 50 ), ನಾದಿನಿ ಸಿಂಧು (26) ಹಾಗೂ ಮಗಳು ಮೌಲ್ಯ (7) ಈ ಮೂವರನ್ನೂ ಸಹ ಹತ್ಯೆಗೈದ ರತ್ನಾಕರ್ ಬಳಿಕ ಮನೆ ಹಿಂಬದಿಯ ಪ್ರದೇಶದಲ್ಲಿ ವಿಷ ಸೇವಿಸಿ ತಾನೂ ಸಹ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


