ರಾಯಚೂರು: ಕೌಟುಂಬಿಕ ಕಲಹದ ದೂರಿನ ಮೇರೆಗೆ ಬಂಧಿನಕ್ಕೊಳಗಾಗಿದ್ದ ವ್ಯಕ್ತಿ ಸಾವನ್ನಪ್ಪಿದ್ದು, ವಿಚಾರಣೆ ವೇಳೆ ಪೊಲೀಸರು ಹಲ್ಲೆ ನಡೆಸಿದ್ದರಿಂದಲೇ ಈ ಸಾವು ಸಂಭವಿಸಿದೆ ಎಂದು ಮೃತನ ಕುಟುಂಬಸ್ಥರು ಆರೋಪ ಮಾಡಿ ಗ್ರಾಮಸ್ಥರ ಜೊತೆ ಸೇರಿ ಪೊಲೀಸ್ ಅಧೀಕ್ಷಕರ ಕಚೇರಿ ಎದುರು ಊಟ ಮಾಡಿ ಧರಣಿ ನಡೆಸಿದ್ದಾರೆ.
ನಗರದ ಐಬಿ ರಸ್ತೆಯ ಈಶ್ವರ ನಗರದ ನಿವಾಸಿ ವೀರೇಶ್ ( 27 ) ಮೃತಪಟ್ಟಿದ್ದಾರೆ. ಮೃತ ಯುವಕ ವೀರೇಶ್ನನ್ನು ಪೊಲೀಸರು ಪತ್ನಿ ಹಾಗೂ ಪತ್ನಿಯ ಮನೆಯವರು ನೀಡಿದ ಕೌಟುಂಬಿಕ ಕಲಹದ ದೂರಿನ ಮೇರೆಗೆ ಪೊಲೀಸರು ಬಂಧಿಸಿದ್ದು, ಈ ವಿಚಾರಣೆ ವೇಳೆ ಪೊಲೀಸರು ಹಲ್ಲೆ ನಡೆಸಿದ ಕಾರಣ ಮೃತಪಟ್ಟಿದ್ದಾನೆ ಎಂದು ವೀರೇಶ್ ಪೋಷಕರು ದೂರಿದ್ದಾರೆ.
ಇನ್ನು ರಾಯಚೂರು ಪೊಲೀಸ್ ಅಧೀಕ್ಷಕರ ಕಚೇರಿ ಮುಂದೆ ನಡೆಯುತ್ತಿದ್ದ ಧರಣಿಯಲ್ಲಿ ಶಾಸಕ ಶಿವರಾಜ್ ಪಾಟೀಲ್ ಸಹ ಭಾಗಿಯಾಗಿದ್ದು, ಪೊಲೀಸರ ವಿರುದ್ಧ ದನಿ ಎತ್ತಿದ್ದಾರೆ. ಅಲ್ಲಿಯೇ ಊಟ ಮಾಡಿ ಧರಣಿ ಮಾಡಿದ ಶಿವರಾಜ್ ಪಾಟೀಲ್ ಪಿಎಸ್ಐ ಮಂಜುನಾಥ್ ಹಾಗೂ ಠಾಣೆಯ ಸಿಬ್ಬಂದಿ ವಿರುದ್ಧ ಆರೋಪ ಮಾಡಿದ ಶಿವರಾಜ್ ಪಾಟೀಲ್ ಈ ಕುರಿತಯ ಸರಿಯಾದ ತನಿಖೆಯಾಗಬೇಕು, ಸಂತ್ರಸ್ತನ ಕುಟುಂಬಕ್ಕೆ ನ್ಯಾಯ ಸಿಗಬೇಕು ಎಂದರು.
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


