ಬೆಂಗಳೂರು: ನಾಳೆ ( ಜುಲೈ 3 ) ಬಹು ನಿರೀಕ್ಷಿತ ಚಿತ್ರ ʼರಾಮಾಯಣ ಚಾಪ್ಟರ್ 1ʼರ ಗ್ಲಿಂಪ್ಸ್ ಬಿಡುಗಡೆಯಾಗಲಿದೆ. ಬೆಳಗ್ಗೆ 11.30ಕ್ಕೆ ಮುಂಬೈನಲ್ಲಿ ಗ್ಲಿಂಪ್ಸ್ ಬಿಡುಗಡೆ ಕಾರ್ಯಕ್ರಮ ಆರಂಭವಾಗಲಿದ್ದು, ಇಡೀ ಚಿತ್ರರಂಗ ಭಾಗವಹಿಸಲಿದೆ.
ಚಿತ್ರದಲ್ಲಿ ರಾಮನಾಗಿ ರಣ್ಬೀರ್ ಕಪೂರ್ ನಟಿಸಿದ್ದು, ಸೀತೆಯಾಗಿ ಸಾಯಿ ಪಲ್ಲವಿ ನಟಿಸಿದ್ದಾರೆ ಹಾಗೂ ರಾವಣನಾಗಿ ರಾಕಿಂಗ್ ಸ್ಟಾರ್ ಯಶ್ ನಟಿಸಿದ್ದಾರೆ. ಯಶ್ ಚಿತ್ರದಲ್ಲಿ ರಾವಣನ ಪಾತ್ರ ಮಾಡಲಿದ್ದಾರೆ ಎಂದ ಕೂಡಲೇ ಒಂದು ದೊಡ್ಡ ಮೈಲೇಜ್ ಪಡೆದುಕೊಂಡಿದ್ದ ರಾಮಾಯಣ ಚಿತ್ರದತ್ತ ದಕ್ಷಿಣ ಭಾರತದ ಸಿನಿ ರಸಿಕರೂ ಸಹ ಕಣ್ಣಿಟ್ಟಿದ್ದರು.
ಇನ್ನು ನಾಳೆ ಗ್ಲಿಂಪ್ಸ್ ಬಿಡುಗಡೆಯಾಗುತ್ತಿದ್ದು, ಸಾಮಾಜಿಕ ಜಾಲತಾಣದಲ್ಲಿ ಈಗಾಗಲೇ ಸೌಂಡ್ ಆರಂಭವಾಗಿದೆ. ಕೆಜಿಎಫ್ ಚಿತ್ರ ಸರಣಿ ಮೂಲಕ ಇಡೀ ದೇಶದಾದ್ಯಂತ ಅಭಿಮಾನಿಗಳನ್ನು ಹೊಂದಿರುವ ಯಶ್ಗಾಗಿ ನಾಳೆ ಬಿಡುಗಡೆಯಾಗಲಿರುವ ಗ್ಲಿಂಪ್ಸ್ಗಾಗಿ ಅಪಾರ ಸಿನಿ ರಸಿಕರು ಕಾಯುತ್ತಿದ್ದು, ಎಕ್ಸ್ ಅಪ್ಲಿಕೇಶನ್ನಲ್ಲಿ ಈಗಾಗಲೇ ಟ್ರೆಂಡ್ ಶುರುವಿಟ್ಟುಕೊಂಡಿದ್ದಾರೆ.
ಯಶ್ ರಾವಣಾಸುರನ ಅವತಾರದಲ್ಲಿರುವ ಎಐ ಫೋಟೊಗಳನ್ನು ಹಂಚಿಕೊಂಡು ʼRavana Rage Begins’ ( ರಾವಣನ ಕ್ರೋಧ ಶುರು ) ಜೈ ರಾವಣ ಎಂದು ಬರೆದುಕೊಳ್ಳುತ್ತಿದ್ದಾರೆ. ಈ ಮೂಲಕ ನಟನಿಗಿಂತ ವಿಲನ್ ಮೂಲಕವೇ ಮೊದಲ ಬಾರಿಗೆ ಚಿತ್ರವೊಂದು ಇಷ್ಟು ದೊಡ್ಡ ಮಟ್ಟದಲ್ಲಿ ಪ್ರಚಾರ ಪಡೆದುಕೊಳ್ಳುತ್ತಿದೆ ಎಂದರೆ ತಪ್ಪಾಗಲಾರದು.
ಕೃಷಿ ಎಐ ಕನ್ನಡ ವೆಬ್ಸೈಟ್ಗಾಗಿ ಇಲ್ಲಿ ಕ್ಲಿಕ್ ಮಾಡಿ
ಅವರ ಮಾತಿಗೆ ಮಹತ್ವ ನೀಡುವ ಅಗತ್ಯವಿಲ್ಲ; ಡಿಕೆಶಿ ಸಿಎಂ ಎಂದ ಕಾಂಗ್ರೆಸ್ ಶಾಸಕರಿಗೆ ರಾಜಣ್ಣ ಪ್ರತಿಕ್ರಿಯೆ
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


