Wednesday, November 4, 2026
spot_img
More
    spot_img
    HomeInternationalಆಪರೇಷನ್‌ ಸಿಂಧೂರ್‌ ವೇಳೆ ಪಾಕ್‌ ಚಾನೆಲ್‌ಗಳ ಮೇಲೆ ಹೇರಿದ್ದ ನಿಷೇಧ ಹಿಂಪಡೆದ ಕೇಂದ್ರ ಸರ್ಕಾರ!

    ಆಪರೇಷನ್‌ ಸಿಂಧೂರ್‌ ವೇಳೆ ಪಾಕ್‌ ಚಾನೆಲ್‌ಗಳ ಮೇಲೆ ಹೇರಿದ್ದ ನಿಷೇಧ ಹಿಂಪಡೆದ ಕೇಂದ್ರ ಸರ್ಕಾರ!

    ಬೆಂಗಳೂರು: ಪೆಹಲ್ಗಾಮ್‌ ಮೇಲೆ ಉಗ್ರರ ದಾಳಿಯ ಪ್ರತೀಕಾರವಾಗಿ ಭಾರತೀಯ ಸೇನೆ ನಡೆಸಿದ ಆಪರೇಷನ್‌ ಸಿಂಧೂರ್‌ ಕೈಗೊಂಡು ಪಾಕ್‌ನಲ್ಲಿ ಬೀಡುಬಿಟ್ಟಿದ್ದ ಉಗ್ರರ ನೆಲೆಗಳ ಮೇಲೆ ದಾಳಿ ಮಾಡಿತ್ತು.

    ಈ ಸಮಯದಲ್ಲಿ ಭಾರತದ ಸೇನೆಯ ಚಲನವಲನಗಳ ಗೌಪ್ಯತೆ ಕಾಪಾಡುವ ಕಾರಣವನ್ನು ನೀಡಿ ಪಾಕಿಸ್ತಾನದ ಹಲವಾರು ಸುದ್ದಿ ವಾಹಿನಿಗಳು, ಅವುಗಳ ಯುಟ್ಯೂಬ್‌ ಚಾನೆಲ್‌ಗಳು, ಸೆಲೆಬ್ರಿಟಿ ಖಾತೆಗಳು ಹಾಗೂ ಯುಟ್ಯೂಬ್‌ ಚಾನೆಲ್‌ಗಳನ್ನು ನಿಷೇಧಿಸಿತ್ತು.

    ಏಪ್ರಿಲ್‌ ಸಮಯದಲ್ಲಿ ಕೇಂದ್ರ ಸರ್ಕಾರ ತೆಗೆದುಕೊಂಡ ಈ ನಿರ್ಧಾರ ಇದೀಗ ಅಂತ್ಯಗೊಂಡಿದ್ದು, ನಿಷೇಧಕ್ಕೊಳಗಾಗಿದ್ದ ಎಲ್ಲ ಚಾನೆಲ್‌ಗಳೂ ಭಾರತದಲ್ಲಿ ವೀಕ್ಷಿಸಲು ಲಭ್ಯವಾಗಿವೆ.

    ಈ ಪೈಕಿ ಕ್ರಿಕೆಟಿಗರಾದ ಶೋಯೆಬ್‌ ಅಕ್ತರ್‌ ಹಾಗೂ ಶಾಹಿದ್‌ ಅಫ್ರಿದಿ ಅವರ ಯುಟ್ಯೂಬ್‌ ಚಾನೆಲ್‌ಗಳೂ ಸಹ ಸೇರಿದ್ದವು. ಇವರ ಚಾನೆಲ್‌ಗಳೂ ಸಹ ಇದೀಗ ಭಾರತದಲ್ಲಿ ಸ್ಟ್ರೀಮ್‌ ಆಗುತ್ತಿವೆ.

    ಇನ್ನು ಭಾರತದ ಈ ನಿರ್ಧಾರದ ವಿರುದ್ಧ ಪಾಕಿಸ್ತಾನ ಮನರಂಜನಾ ಕ್ಷೇತ್ರ ತೀವ್ರ ಬೇಸರ ಹೊರಹಾಕಿತ್ತು. ಪಾಕ್‌ನ ಹಾಡುಗಳು ಹಾಗೂ ವಿಡಿಯೊಗಳನ್ನು ದೊಡ್ಡ ಸಂಖ್ಯೆಯಲ್ಲಿಯೇ ವೀಕ್ಷಿಸಲಿದ್ದು, ಗೌಪ್ಯತೆ ವಿಚಾರವಾಗಿ ಮನರಂಜನೆ ವಿಡಿಯೊಗಳನ್ನು ನಿಷೇಧಿಸುವುದು ಸರಿಯಲ್ಲ, ಇದರಿಂದ ತಮಗೆ ಭಾರೀ ಹೊಡೆತ ಬೀಳಲಿದೆ ಎಂದು ಬೇಸರ ಹೊರಹಾಕಿದ್ದರು.

    ಜಿಯೋ ನ್ಯೂಸ್‌ ಎಂಬ ಪಾಕ್‌ನ ಚಾನೆಲ್‌ ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ ಕೇಂದ್ರ ಸರ್ಕಾರದ ವಿರುದ್ಧ ನೀಡಿದ ಹೇಳಿಕೆಯನ್ನು ಪ್ರಸಾರ ಮಾಡಿ ಹೊಗಳಿತ್ತು. ಇದೂ ಸಹ ಭಾರೀ ವಿವಾದವನ್ನು ಹುಟ್ಟುಹಾಕಿತ್ತು.

    BREAKING: ಸಿದ್ದರಾಮಯ್ಯ ಸುದ್ದಿ ಮಾಡಿದ್ದ ಚಾನೆಲ್‌ ಸೇರಿ ಪಾಕಿಸ್ತಾನದ 16 ನ್ಯೂಸ್ ಚಾನೆಲ್‌ಗಳನ್ನು ಬ್ಯಾನ್‌ ಮಾಡಿದ ಕೇಂದ್ರ ಸರ್ಕಾರ!

    ಎಐ ಕನ್ನಡ ಕೃಷಿ ವೆಬ್‌ಸೈಟ್‌ಗಾಗಿ ಇಲ್ಲಿ ಕ್ಲಿಕ್‌ ಮಾಡಿ


    Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ

    Subscribe to get the latest posts sent to your email.

    LEAVE A REPLY

    Related News

    ಮಹಾಲಯ ಅಮಾವಾಸ್ಯೆ 2026: ಅಕ್ಟೋಬರ್ 10ರಂದು ಆಚರಣೆ; ಪಿತೃಪೂಜೆಯ ಮಹತ್ವವೇನು?

    ಹಿಂದೂ ಧರ್ಮದಲ್ಲಿ ಮಹಾಲಯ ಅಮಾವಾಸ್ಯೆಗೆ ವಿಶೇಷ ಸ್ಥಾನವಿದೆ. ಪಿತೃಪಕ್ಷದ ಕೊನೆಯ ದಿನವಾದ ಈ ಸಂದರ್ಭದಲ್ಲಿ ಪೂರ್ವಜರನ್ನು ಸ್ಮರಿಸಿ, ಅವರ ಆತ್ಮಕ್ಕೆ ಶಾಂತಿ ಕೋರಿ ವಿವಿಧ ಧಾರ್ಮಿಕ ವಿಧಿವಿಧಾನಗಳನ್ನು ನೆರವೇರಿಸಲಾಗುತ್ತದೆ. ಈ ದಿನ ಶ್ರಾದ್ಧ,...

    ಕರ್ನಾಟಕಕ್ಕೆ ಗುಡ್‌ನ್ಯೂಸ್: ಯುಬಿಯಿಂದ ₹4,500 ಕೋಟಿ ಕೊಡುಗೆ, 36 ಸಾವಿರಕ್ಕೂ ಹೆಚ್ಚು ಉದ್ಯೋಗ

    ಬೆಂಗಳೂರು: ದೇಶದ ಅತಿದೊಡ್ಡ ಬಿಯರ್ ಉತ್ಪಾದನಾ ಸಂಸ್ಥೆ ಹಾಗೂ ಹೈನೆಕನ್‌ ಕಂಪನಿಯ ಭಾಗವಾಗಿರುವ ಬೆಂಗಳೂರು ಮೂಲದ 'ಯುನೈಟೆಡ್ ಬ್ರೂವರೀಸ್ ಲಿಮಿಟೆಡ್' (ಯುಬಿಎಲ್‌), ಕರ್ನಾಟಕದ ಆರ್ಥಿಕತೆ ಮತ್ತು ಉದ್ಯೋಗ ಸೃಷ್ಟಿಯಲ್ಲಿ ಮಹತ್ವದ ಪಾತ್ರ ವಹಿಸುತ್ತಿದೆ...

    Most Popular

    Recent Comments

    Home
    Play
    Notification
    Search