Wednesday, November 4, 2026
spot_img
More
    spot_img
    HomeSportsCricketಟೆಸ್ಟ್‌ನಲ್ಲಿ ಅಜೇಯ 303 ರನ್‌ ಬಾರಿಸಿದ್ದ ಕರುಣ್‌ ನಾಯರ್‌ ಅದನ್ನು ಬಿಟ್ಟರೆ ಒಮ್ಮೆಯೂ 50 ರನ್‌...

    ಟೆಸ್ಟ್‌ನಲ್ಲಿ ಅಜೇಯ 303 ರನ್‌ ಬಾರಿಸಿದ್ದ ಕರುಣ್‌ ನಾಯರ್‌ ಅದನ್ನು ಬಿಟ್ಟರೆ ಒಮ್ಮೆಯೂ 50 ರನ್‌ ದಾಟಿಲ್ಲ!

    ಬರ್ಮಿಂಗ್‌ಹ್ಯಾಮ್:‌ ಎಡ್ಜ್‌ಬಾಸ್ಟನ್‌ ಕ್ರೀಡಾಂಗಣದಲ್ಲಿ ಭಾರತ ಹಾಗೂ ಇಂಗ್ಲೆಂಡ್‌ ತಂಡಗಳ ನಡುವಿನ ಎರಡನೇ ಟೆಸ್ಟ್‌ ಪಂದ್ಯ ಇಂದು ( ಜುಲೈ 2 ) ಆರಂಭಗೊಂಡಿದ್ದು, ಟಾಸ್‌ ಗೆದ್ದ ಇಂಗ್ಲೆಂಡ್‌ ಭಾರತ ತಂಡವನ್ನು ಮೊದಲು ಬ್ಯಾಟಿಂಗ್‌ ಮಾಡಲು ಆರಂಭಿಸಿದೆ.

    ಅದರಂತೆ ಮೊದಲು ಬ್ಯಾಟಿಂಗ್‌ ಮಾಡಿರುವ ಟೀಮ್‌ ಇಂಡಿಯಾ ಮೊದಲ ಇನ್ನಿಂಗ್ಸ್‌ನಲ್ಲಿ 161 ರನ್‌ಗೆ ತನ್ನ ಮೊದಲ 3 ವಿಕೆಟ್‌ ಕಳೆದುಕೊಂಡಿದೆ. ಆರಂಭಿಕರಾಗಿ ಕಣಕ್ಕಿಳಿದ ಯಶಸ್ವಿ ಜೈಸ್ವಾಲ್‌ 87 ರನ್‌ ಗಳಿಸಿದರೆ, ಮತ್ತೋರ್ವ ಆರಂಭಿಕ ಆಟಗಾರ ಕೆಎಲ್‌ ರಾಹುಲ್‌ ಕೇವಲ 2 ರನ್‌ ಕಲೆಹಾಕಿ ಪೆವಿಲಿಯನ್‌ ಸೇರಿಕೊಂಡರು.

    ಇನ್ನುಳಿದಂತೆ ಮೂರನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಕರುಣ್‌ ನಾಯರ್‌ 31 ರನ್‌ ಕಲೆಹಾಕಿ ಬ್ರೈಡನ್‌ ಕಾರ್ಸ್‌ ಎಸೆದ ಎಸೆತದಲ್ಲಿ ಹ್ಯಾರಿ ಬ್ರೂಕ್‌ಗೆ ಕ್ಯಾಚ್‌ ನೀಡಿ ವಿಕೆಟ್‌ ಒಪ್ಪಿಸಿದರು. ಈ ಮೂಲಕ ಕರುಣ್‌ ನಾಯರ್‌ ಮತ್ತೆ ಟೆಸ್ಟ್‌ನಲ್ಲಿ ಹಿಡಿತ ಕಂಡುಕೊಳ್ಳುವಲ್ಲಿ ವಿಫಲರಾದರು.

    2016ರ ಡಿಸೆಂಬರ್‌ನಲ್ಲಿ ಬೆಂಗಳೂರಿನಲ್ಲಿ ನಡೆದಿದ್ದ ಇಂಗ್ಲೆಂಡ್‌ ವಿರುದ್ಧದ ಐದನೇ ಟೆಸ್ಟ್‌ನ ಪ್ರಥಮ ಇನ್ನಿಂಗ್ಸ್‌ನಲ್ಲಿ 303 ರನ್‌ ಬಾರಿಸಿದ್ದ ಕರುಣ್‌ ನಾಯರ್‌ ಅಜೇಯರಾಗಿ ಉಳಿದಿದ್ದರು. ಇದು ಕರುಣ್‌ ನಾಯರ್‌ರ ಟೆಸ್ಟ್‌ ಕ್ರಿಕೆಟ್‌ನ ಅತ್ಯಧಿಕ ರನ್‌ ಆಗಿದೆ. ಹೀಗೆ ಅಬ್ಬರಿಸಿದ್ದ ಕರುಣ್‌ ನಾಯರ್‌ಗೆ ಇದೊಂದು ಇನ್ನಿಂಗ್ಸ್‌ ಬಿಟ್ಟರೆ ಉಳಿದ ಯಾವ ಇನ್ನಿಂಗ್ಸ್‌ನಲ್ಲೂ ಸಹ 50 ರನ್‌ ದಾಟಿಯೇ ಇಲ್ಲ.

    ಅಂದಹಾಗೆ ಕರುಣ್‌ ನಾಯರ್‌ಗೆ ಅಂತಹ ಇನ್ನಿಂಗ್ಸ್‌ ಆಡಿದರೂ ಸಹ ಹೆಚ್ಚೇನೂ ಅವಕಾಶ ಸಿಕ್ಕಿರಲಿಲ್ಲ. ಈ ಇನ್ನಿಂಗ್ಸ್‌ ಸೇರಿದಂತೆ ಒಟ್ಟು 10 ಟೆಸ್ಟ್‌ ಇನ್ನಿಂಗ್ಸ್‌ನಲ್ಲಿ ಬ್ಯಾಟಿಂಗ್‌ ಮಾಡಿರುವ ಕರುಣ್‌ ನಾಯರ್‌ ಒಟ್ಟಾರೆ 425 ರನ್‌ ಬಾರಿಸಿದ್ದಾರೆ.

    ಕರುಣ್‌ ನಾಯರ್‌ 10 ಟೆಸ್ಟ್‌ ಇನ್ನಿಂಗ್ಸ್‌ ರನ್‌ಗಳು ( ಕ್ರಮವಾಗಿ ): 4, 13, 303*, 26, 0, 23, 5, 0, 20 ಮತ್ತು 31 ರನ್.

    ಎಐ ಕನ್ನಡ ಕೃಷಿ ವೆಬ್‌ಸೈಟ್‌ಗಾಗಿ ಇಲ್ಲಿ ಕ್ಲಿಕ್ ಮಾಡಿ

    ಯಶ್‌, ರಣಬೀರ್‌ ನಟನೆಯ ʼರಾಮಾಯಣʼ ಗ್ಲಿಂಪ್ಸ್ ಬಿಡುಗಡೆಗೆ ಕ್ಷಣಗಣನೆ ಆರಂಭ


    Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ

    Subscribe to get the latest posts sent to your email.

    LEAVE A REPLY

    Related News

    ಮಹಾಲಯ ಅಮಾವಾಸ್ಯೆ 2026: ಅಕ್ಟೋಬರ್ 10ರಂದು ಆಚರಣೆ; ಪಿತೃಪೂಜೆಯ ಮಹತ್ವವೇನು?

    ಹಿಂದೂ ಧರ್ಮದಲ್ಲಿ ಮಹಾಲಯ ಅಮಾವಾಸ್ಯೆಗೆ ವಿಶೇಷ ಸ್ಥಾನವಿದೆ. ಪಿತೃಪಕ್ಷದ ಕೊನೆಯ ದಿನವಾದ ಈ ಸಂದರ್ಭದಲ್ಲಿ ಪೂರ್ವಜರನ್ನು ಸ್ಮರಿಸಿ, ಅವರ ಆತ್ಮಕ್ಕೆ ಶಾಂತಿ ಕೋರಿ ವಿವಿಧ ಧಾರ್ಮಿಕ ವಿಧಿವಿಧಾನಗಳನ್ನು ನೆರವೇರಿಸಲಾಗುತ್ತದೆ. ಈ ದಿನ ಶ್ರಾದ್ಧ,...

    ಕರ್ನಾಟಕಕ್ಕೆ ಗುಡ್‌ನ್ಯೂಸ್: ಯುಬಿಯಿಂದ ₹4,500 ಕೋಟಿ ಕೊಡುಗೆ, 36 ಸಾವಿರಕ್ಕೂ ಹೆಚ್ಚು ಉದ್ಯೋಗ

    ಬೆಂಗಳೂರು: ದೇಶದ ಅತಿದೊಡ್ಡ ಬಿಯರ್ ಉತ್ಪಾದನಾ ಸಂಸ್ಥೆ ಹಾಗೂ ಹೈನೆಕನ್‌ ಕಂಪನಿಯ ಭಾಗವಾಗಿರುವ ಬೆಂಗಳೂರು ಮೂಲದ 'ಯುನೈಟೆಡ್ ಬ್ರೂವರೀಸ್ ಲಿಮಿಟೆಡ್' (ಯುಬಿಎಲ್‌), ಕರ್ನಾಟಕದ ಆರ್ಥಿಕತೆ ಮತ್ತು ಉದ್ಯೋಗ ಸೃಷ್ಟಿಯಲ್ಲಿ ಮಹತ್ವದ ಪಾತ್ರ ವಹಿಸುತ್ತಿದೆ...

    Most Popular

    Recent Comments

    Home
    Play
    Notification
    Search