ಬೆಂಗಳೂರು: ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಇಂದು ( ಜುಲೈ 2 ) ರಾಜ್ಯಾಧ್ಯಕ್ಷ ಸ್ಥಾನ ಖಾಲಿ ಇದೆ ಎಂದು ಹೇಳಿದವರು ಯಾರು ಎಂದು ಪ್ರಶ್ನೆ ಹಾಕುವ ಮೂಲಕ ರಾಜ್ಯಾಧ್ಯಕ್ಷ ಸ್ಥಾನದ ಬದಲಾವಣೆ ಬಯಸುತ್ತಿರುವ ಪಕ್ಷದ ರೆಬೆಲ್ ನಾಯಕರಿಗೆ ಟಾಂಗ್ ಕೊಟ್ಟರು.
ಸಂಜೆ ದಿಢೀರ್ ಸುದ್ದಿಗೋಷ್ಟಿ ನಡೆಸಿದ ವಿಪಕ್ಷ ನಾಯಕ ಆರ್ ಅಶೋಕ್ ಸಹ ಈ ಕುರಿತು ಮಾತನಾಡಿದ್ದು, ಅಧ್ಯಕ್ಷರು ಸರಿಯಾಗಿಯೇ ಹೇಳಿದ್ದಾರೆ, ಇಲ್ಲಿ ಯಾವುದೇ ಅಧ್ಯಕ್ಷರ ಸ್ಥಾನವೂ ಖಾಲಿಯಿಲ್ಲ ಎಂದು ವಿಜಯೇಂದ್ರಗೆ ಬೆಂಬಲ ವ್ಯಕ್ತಪಡಿಸಿದರು.
ಇನ್ನೂ ಮುಂದುವರಿದು ಮಾತನಾಡಿದ ಆರ್ ಅಶೋಕ್ ಕೇವಲ ಕರ್ನಾಟಕದಲ್ಲಿ ಮಾತ್ರವಲ್ಲ ಇಡೀ ದೇಶದಲ್ಲಿ ಅಧ್ಯಕ್ಷರ ಚುನಾವಣೆ ನಡೆಯುತ್ತಿದೆ, ಆದ್ದರಿಂದ ನಮ್ಮ ಕೇಂದ್ರದ ನಾಯಕರು ಏನು ತೀರ್ಮಾನ ತೆಗೆದುಕೊಳ್ಳುತ್ತಾರೋ ಅದಕ್ಕೆ ನಾವೆಲ್ಲರೂ ಬದ್ಧವಾಗಿರಬೇಕಾಗುತ್ತದೆ, ಯಾರನ್ನಾದರೂ ಘೋಷಣೆ ಮಾಡಲಿ, ವಿಜಯೇಂದ್ರ ಅವರನ್ನೇ ಮುಂದುವರಿಸಲಿ ನಮ್ಮದೇನೂ ಅಭ್ಯಂತರವಿಲ್ಲ, ಇದರಲ್ಲಿ ಎರಡು ಮಾತಿಲ್ಲ ಎಂದರು.
ಇನ್ನು ಪ್ರಿಯಾಂಕ್ ಖರ್ಗೆ ಆರ್ಎಸ್ಎಸ್ ನಿಷೇಧದ ಕುರಿತು ನೀಡಿದ ಹೇಳಿಕೆಗೂ ಸಹ ಪ್ರತಿಕ್ರಿಯಿಸಿದ ಅಶೋಕ್ ಇಂದಿರಾ ಗಾಂಧಿಯವರೇ ಎಮರ್ಜೆನ್ಸಿ ಸಮಯದಲ್ಲಿ ಆರ್ಎಸ್ಎಸ್ ಬ್ಯಾನ್ ಮಾಡಿ ಬಳಿಕ ಮಾನ ಮರ್ಯಾದೆ ಬಿಟ್ಟು ವಾಪಸ್ ತೆಗೆದುಕೊಂಡರು, ಇನ್ನು ಇವರು ಬ್ಯಾನ್ ಮಾಡ್ತಾರಾ ಎಂದು ಟೀಕಿಸಿದರು.
ಕೃಷಿ ಕನ್ನಡ ಎಐ ವೆಬ್ಸೈಟ್ಗಾಗಿ ಇಲ್ಲಿ ಕ್ಲಿಕ್ ಮಾಡಿ
ಮತ್ತೊಂದು ಐಷಾರಾಮಿ ಕಾರು ಖರೀದಿಸಿದ ರಾಕಿಂಗ್ ಸ್ಟಾರ್ ಯಶ್; ಬೆಲೆ ಎಷ್ಟು ಕೋಟಿ ಗೊತ್ತಾ?
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


