ಚಿಕ್ಕಬಳ್ಳಾಪುರ: ಇಂದು ( ಜುಲೈ 2 ) ನಂದಿಬೆಟ್ಟದಲ್ಲಿ ನಡೆದ ವಿಶೇಷ ಸಚಿವ ಸಂಪುಟ ಸಭೆಯಲ್ಲಿ ಹಲವು ವಿಷಯಗಳ ಬಗ್ಗೆ ಚರ್ಚೆ ನಡೆದಿದ್ದು, ಬೆಂಗಳೂರು ಗ್ರಾಮಾಂತರ ಜಿಲ್ಲೆ ಹಾಗೂ ಬಾಗೇಪಲ್ಲಿ ಹೆಸರನ್ನು ಬದಲಾಯಿಸಲು ಸಂಪುಟ ಅಸ್ತು ಎಂದಿದೆ.
ಬೆಂಗಳೂರು ಗ್ರಾಮಾಂತರ ಜಿಲ್ಲೆಯನ್ನು ಬೆಂಗಳೂರು ಉತ್ತರ ಎಂತಲೂ ಹಾಗೂ ಬಾಗೇಪಲ್ಲಿಯ ಹೆಸರನ್ನು ಭಾಗ್ಯ ನಗರ ಎಂದು ಬದಲಾಯಿಸಲಾಗಿದೆ. ಈ ಮೂಲಕ ರಾಮನಗರದ ಬಳಿಕ ಮತ್ತೆರಡು ಹೆಸರುಗಳನ್ನು ಕಾಂಗ್ರೆಸ್ ಸರ್ಕಾರ ಬದಲಿಸಿದೆ.
ಈ ಕುರಿತು ಸಚಿವ ಸಂಪುಟ ಸಭೆ ಮುಕ್ತಾಯವಾದ ನಂತರ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಕಾರಣವನ್ನೂ ಸಹ ತಿಳಿಸಿದರು.
ಬಾಗೇಪಲ್ಲಿ ಪಟ್ಟಣದ ಹೆಸರನ್ನು ಭಾಗ್ಯನಗರ ಎಂದು ನಾಮಕರಣ ಮಾಡಿದ್ದೇವೆ. ಏಕೆಂದರೆ ಪಲ್ಲಿ ಎನ್ನುವುದು ತೆಲುಗು ಭಾಷೆಯ ಪದ. ಅದಕ್ಕೆ ಪಲ್ಲಿ ಎನ್ನುವುದು ಬೇಡ, ನಮ್ಮ ಕಡೆ ಹಲ್ಲಿ ಎನ್ನುವುದಕ್ಕೆ ಪಲ್ಲಿ ಎನ್ನುತ್ತೇವೆ, ಬಾಗೇಪಲ್ಲಿ ಎನ್ನುವುದು ಬಹಳ ಮೊದಲಿನಿಂದಲೂ ಇರುವ ಹೆಸರು. ಅದು ಬೇಡ ಅಂತ ಹೇಳಿ ಎಂಎಲ್‌ಎ ಭಾಗ್ಯನಗರ ಅಂತ ಮಾಡಿ ಒತ್ತಾಯ ಮಾಡಿದ್ರು. ಹೀಗಾಗಿ ಇನ್ನುಮುಂದೆ ಬಾಗೇಪಲ್ಲಿ ಭಾಗ್ಯನಗರ ಆಗಲಿದೆ ಎಂದು ಸಿದ್ದರಾಮಯ್ಯ ತಿಳಿಸಿದರು.
ಇಂದಿರಾ ಗಾಂಧಿ ಆರ್‌ಎಸ್‌ಎಸ್ ಬ್ಯಾನ್ ಮಾಡಿ ಮಾನ ಮರ್ಯಾದೆ ಬಿಟ್ಟು ವಾಪಸ್ ತಗೊಂಡ್ರು: ಆರ್ ಅಶೋಕ್
ಕೃಷಿ ಕನ್ನಡ ಎಐ ವೆಬ್‌ಸೈಟ್‌ಗಾಗಿ ಇಲ್ಲಿ ಕ್ಲಿಕ್ ಮಾಡಿ
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


