ಬೆಂಗಳೂರು: ಸಂವಿಧಾನದ ಪ್ರಸ್ತಾವನೆಯಲ್ಲಿನ ಸಮಾಜವಾದ ಹಾಗೂ ಜಾತ್ಯಾತೀತ ಈ ಎರಡು ಪದಗಳು ಅಂಬೇಡ್ಕರ್ ರಚಿಸಿದ ಸಂವಿಧಾನದಲ್ಲಿ ಇರಲಿಲ್ಲ, ಇಂದಿರಾ ಗಾಂಧಿ ಆ ಎರಡು ಪದಗಳನ್ನು ಸೇರಿಸಿದ್ದಾರೆ, ಅವುಗಳನ್ನು ತೆಗೆದುಹಾಕಬೇಕು ಎಂದು ಆರ್‌ಎಸ್‌ಎಸ್‌ನ ಪ್ರಧಾನ ಕಾರ್ಯದರ್ಶಿ ದತ್ತಾತ್ರೇಯ ಹೊಸಬಾಳೆ ನೀಡಿದ ಹೇಳಿಕೆ ಕಾಂಗ್ರೆಸ್ ಹಾಗೂ ಆರ್‌ಎಸ್‌ಎಸ್ ನಡುವಿನ ವಾಕ್ಸಮರಕ್ಕೆ ಎಡೆ ಮಾಡಿಕೊಟ್ಟಿತು.
ಪ್ರಿಯಾಂಕ್ ಖರ್ಗೆ ಸಹ ಈ ಕುರಿತು ಪ್ರತಿಕ್ರಿಯಿಸಿ ಆರ್‌ಎಸ್‌ಎಸ್ ಬ್ಯಾನ್ ಪಡೆದದ್ದು ತಪ್ಪಾಯಿತು, ಕೇಂದ್ರದಲ್ಲಿ ಮತ್ತೆ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ನೋಡೋಣ ಎಂದು ಹೇಳಿಕೆಯನ್ನು ನೀಡಿದ್ದರು. ಅಲ್ಲದೇ ಆರ್‌ಎಸ್‌ಎಸ್ ರಾಷ್ಟ್ರಧ್ವಜ ವಿರೋಧಿ ಎಂದೂ ಸಹ ಕಿಡಿಕಾರಿದ್ದರು.
ಇದಕ್ಕೆ ವಿಪಕ್ಷ ನಾಯಕ ಆರ್ ಅಶೋಕ್ ತಿರುಗೇಟು ನೀಡಿದ್ದು, ಪ್ರಿಯಾಂಕ್ ಖರ್ಗೆ ಕೇವಲ ಆಟದ ಬೊಂಬೆ ಒರಿಜಿನಲ್ ಇರೋದು ನಕಲಿ ಗಾಂಧಿ ಕುಟುಂಬದ ರಾಹುಲ್ ಗಾಂಧಿ ಎಂದರು. ರಾಹುಲ್ ಗಾಂಧಿ ಅವರ ಅಜ್ಜಿ ಇಂದಿರಾ ಗಾಂಧಿ ಅವರ ಕೈನಲ್ಲೇ ಆರ್‌ಎಸ್‌ಎಸ್ ಅನ್ನು ಏನು ಮಾಡೋಕಾಗಲಿಲ್ಲ ಎಂದಮೇಲೆ ಇವರಿಂದ ಆಗುತ್ತಾ ಎಂದರು.
ಅಲ್ಲದೇ ಇಂದಿರಾ ಗಾಂಧಿ ಅವರು ಎಮರ್ಜೆನ್ಸಿ ಸಮಯದಲ್ಲಿ ಬ್ಯಾನ್ ಮಾಡಿ ಮತ್ತೆ ಮಾನ ಮರ್ಯಾದೆ ಬಿಟ್ಟು, ಅಂಗಲಾಚಿ ಬೇಡಿಕೊಂಡು ವಾಪಸ್ ತಗೊಂಡಿದ್ರು, ಒಂದಲ್ಲ ಎರಡು – ಮೂರು ಬಾರಿ ಹೀಗೆ ಬ್ಯಾನ್ ಮಾಡಿ, ಪ್ರತಿ ಬಾರಿಯೂ ವಾಪಸ್ ತೆಗೆದುಕೊಂಡಿದ್ದಾರೆ, ನೀವು ಎಷ್ಟು ಸಾರಿ ಬ್ಯಾನ್ ಎನ್ನುತ್ತೀರೋ ಅಷ್ಟು ಸಾರಿಯೂ ಆರ್‌ಎಸ್‌ಎಸ್ ಪುಟಿದೇಳುತ್ತೆ ಎಂದು ಅಶೋಕ್ ಕಿಡಿಕಾರಿದರು.
ಎಐ ಕೃಷಿ ಕನ್ನಡ ವೆಬ್‌ಸೈಟ್‌ಗಾಗಿ ಇಲ್ಲಿ ಕ್ಲಿಕ್ ಮಾಡಿ
ನಿಮ್ಮ ಹೆಸರಿನಲ್ಲಿ ಎಷ್ಟು ಸಿಮ್ ಕಾರ್ಡ್‌ಗಳಿವೆ? ಈ ಸರಳ ವಿಧಾನದ ಮೂಲಕ ಈಗಲೇ ತಿಳಿಯಿರಿ
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


