ಬೆಂಗಳೂರು: ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣ್‌ದೀಪ್ ಸಿಂಗ್ ಸುರ್ಜೇವಾಲ ಸದ್ಯ ಬೆಂಗಳೂರಿಗೆ ಆಗಮಿಸಿದ್ದು, ಪಕ್ಷದಲ್ಲಿ ಎದ್ದಿರುವ ಅಸಮಾಧಾನವನ್ನು ತಿಳಿಗೊಳಿಸಲು ಮುಂದಾಗಿದ್ದಾರೆ. ಎಲ್ಲ ಶಾಸಕರ ಜೊತೆಗೂ ನೇರವಾಗಿ ಮಾತನಾಡಿ ಅಭಿಪ್ರಾಯ ಸಂಗ್ರಹಿಸುತ್ತಿರುವ ಸುರ್ಜೇವಾಲ ಪಕ್ಷವನ್ನು ಸರಿ ಹಾದಿಗೆ ತರಲು ಏನು ಮಾಡಬೇಕೆಂಬುದನ್ನು ಮನಗಾಣುವ ಯೋಜನೆಯಲ್ಲಿದ್ದಾರೆ.
ಇನ್ನು ಕಾಂಗ್ರೆಸ್ ಪಾಳಯದಲ್ಲಿ ಅಸಮಾಧಾನದ ಜೊತೆ ಸಿಎಂ ಬದಲಾವಣೆ ಚರ್ಚೆಗಳೂ ಸಹ ಜೋರಾಗಿ ನಡೆಯುತ್ತಿದ್ದು, ಇದೇ ನವೆಂಬರ್‌ಗೆ ಹೊಸ ಮುಖ್ಯಮಂತ್ರಿ ಆಯ್ಕೆಯಾಗಲಿದ್ದಾರೆ ಎಂಬ ಮಾತುಗಳು ಕೇಳಿಬಂದಿದ್ದವು. ಇನ್ನು ನಿನ್ನೆ ( ಜುಲೈ 1 ) ಸುರ್ಜೇವಾಲ ನಗರದಲ್ಲಿರುವ ವೇಳೆಯೇ ರಾಮನಗರ ಶಾಸಕ ಇಕ್ಬಾಲ್ ಹುಸೇನ್‌ರಿಂದ ಸಿಎಂ ಬದಲಾವಣೆ ಕುರಿತು ಹೇಳಿಕೆ ನೀಡಿದ್ದರು.
ಈ ಕುರಿತು ಕಾಂಗ್ರೆಸ್‌ನ ಮತ್ತೋರ್ವ ಶಾಸಕ ತನ್ವೀರ್ ಸೇಠ್ ಸಹ ಮಾತನಾಡಿದ್ದು, ನಿನ್ನೆ ಸುರ್ಜೇವಾಲ ಜತೆ ಸಿಎಂ ಬದಲಾವಣೆ ಕುರಿತು ಯಾವುದೇ ಚರ್ಚೆಯಾಗಿಲ್ಲ ಎಂದರು. ಸಿಎಂ ಬದಲಾವಣೆ ಕುರಿತು ಹಾಗೂ ಸಚಿವ ಸ್ಥಾನಗಳ ಕುರಿತು ಯಾವುದೇ ಚರ್ಚೆ ನಡೆದಿಲ್ಲ, ಆ ವಿಚಾರವನ್ನು ನಾವು ವರಿಷ್ಠರ ಜೊತೆಗೆ ಮಾತನಾಡುತ್ತೇವೆ ಎಂದು ಸೇಠ್ ತಿಳಿಸಿದರು.
ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರ ಬರಲು ಸುರ್ಜೇವಾಲ ಅವರ ಪ್ರಯತ್ನ ಇದ್ದಿದ್ದರಿಂದ ಅವರು ಸರ್ಕಾರ 2 ವರ್ಷ ಪೂರೈಸಿದ ಕಾರಣ ಏನಾದರೂ ಸಮಸ್ಯೆ ಇದೆಯಾ ಎಂದು ಪ್ರಶ್ನಿಸಿದ್ದಾರೆ, ನಾವು ಅದಕ್ಕೆ ಉತ್ತರ ನೀಡಿದ್ದೇವೆ, ಸಲಹೆಗಳನ್ನೂ ಕೊಟ್ಟಿದ್ದೇವೆ ಎಂದರು. ಇನ್ನು ತಮ್ಮ ಕ್ಷೇತ್ರಕ್ಕೆ ಸಂಬಂಧಿಸಿದ ಹಲವು ವಿಷಯಗಳನ್ನು ಮಾತನಾಡಿದೆ ಎಂದು ತನ್ವೀರ್ ಸೇಠ್ ಹೇಳಿಕೊಂಡಿದ್ದಾರೆ.
ನಾನೊಬ್ಬನೇ ಅಲ್ಲ 100 ಶಾಸಕರು ಸಿಎಂ ಬದಲಾವಣೆ ಬೇಕೆಂದಿದ್ದಾರೆ: ಕಾಂಗ್ರೆಸ್ ಶಾಸಕ ಇಕ್ಬಾಲ್ ಹುಸೇನ್!
ಎಐ ಕನ್ನಡ ವೆಬ್‌ಸೈಟ್‌ಗಾಗಿ ಇಲ್ಲಿ ಕ್ಲಿಕ್ ಮಾಡಿ
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


