ಅಣ್ಣಾವ್ರ ಕುಟುಂಬದ ಕುಡಿ ಯುವ ರಾಜ್‌ಕುಮಾರ್ ನಟನೆಯ ಯುವ ಚಿತ್ರಕ್ಕೆ ಅಭಿಮಾನಿಗಳ ಭರ್ಜರಿ ಬೆಂಬಲ ಸಿಕ್ಕಿತ್ತು. ದೊಡ್ಡ ಮಟ್ಟದಲ್ಲಿ ಬಿಡುಗಡೆಗೊಂಡ ಚಿತ್ರ ಮಿಶ್ರ ಪ್ರತಿಕ್ರಿಯೆಯನ್ನು ಪಡೆದುಕೊಂಡಿತ್ತು. ಇನ್ನು ಈ ಚಿತ್ರದಲ್ಲಿ ಕಾಂತಾರ ಯಶಸ್ಸಿನಲ್ಲಿ ತೇಲುತ್ತಿದ್ದ ನಟಿ ಸಪ್ತಮಿ ಗೌಡ ನಾಯಕಿಯಾಗಿ ಕಾಣಿಸಿಕೊಂಡಿದ್ದರು.
ಆದರೆ ಯುವ ಬಿಡುಗಡೆಯಾದ ಕೆಲವೇ ದಿನಗಳಲ್ಲಿ ಯುವ ರಾಜ್‌ಕುಮಾರ್ ಹಾಗೂ ಪತ್ನಿ ಶ್ರೀದೇವಿ ಭೈರಪ್ಪ ವಿಚ್ಛೇದನ ಪಡೆದುಕೊಳ್ಳಲಿದ್ದಾರೆ ಎಂಬ ಸುದ್ದಿ ಹೊರಬಿದ್ದಿತ್ತು. ಪ್ರೀತಿಸಿ ವಿವಾಹವಾಗಿದ್ದ ಈ ಜೋಡಿಗೆ ಇದೇನಾಯ್ತು ಎಂದು ವೀಕ್ಷಕರು ಸುದ್ದಿ ಕೇಳಿ ಗೊಂದಲಕ್ಕೊಳಗಾಗಿದ್ದರು.
ಇನ್ನು ವಿಚ್ಛೇದನಕ್ಕೆ ಕಾರಣ ನೀಡಿದ್ದ ಶ್ರೀದೇವಿ ಭೈರಪ್ಪ ಯುವ ರಾಜ್‌ಕುಮಾರ್ ಹಾಗೂ ನಟಿ ಸಪ್ತಮಿ ಗೌಡ ನಡುವೆ ಅಕ್ರಮ ಸಂಬಂಧವಿದೆ ಎಂದು ಆರೋಪಿಸಿದ್ದರು. ಇನ್ನು ಶ್ರೀದೇವಿ ಭೈರಪ್ಪ ಮಾಡಿದ ಈ ಆರೋಪಕ್ಕೆ ನಟಿ ಸಪ್ತಮಿ ಗೌಡ ಆಗಲಿ ಅಥವಾ ಯುವ ರಾಜ್‌ಕುಮಾರ್ ಆಗಲಿ ಒಮ್ಮೆಯೂ ಪ್ರತಿಕ್ರಿಯಿಸಲಿಲ್ಲ.
ಸದ್ಯ ಯುವ ರಾಜ್‌ಕುಮಾರ್ ತಮ್ಮ ಎರಡನೇ ಚಿತ್ರ ಎಕ್ಕ ಬಿಡುಗಡೆಗೆ ಕಾಯುತ್ತಿದ್ದು, ಅತ್ತ ಸಪ್ತಮಿ ಗೌಡ ತೆಲುಗಿನ ಕಡೆ ಮುಖ ಮಾಡಿದ್ದಾರೆ. ನಿತಿನ್ ನಟನೆಯ ತಮ್ಮುಡು ಚಿತ್ರದಲ್ಲಿ ನಟಿಸುತ್ತಿರುವ ಸಪ್ತಮಿ ಗೌಡ ತೆಲುಗು ಫಿಲ್ಮಿಬೀಟ್‌ನ ರಾಜಾ ಬಾಬು ಎಂಬುವವರು ನಡೆಸಿದ ಸಂದರ್ಶನದಲ್ಲಿ ಮಾತನಾಡಿ ತೆಲುಗು ಚಿತ್ರರಂಗ, ಕನ್ನಡ ಚಿತ್ರರಂಗ ಹಾಗೂ ಯುವ ವಿವಾದದ ಬಗ್ಗೆಯೂ ಮಾತನಾಡಿದರು ಎಂದು ವರದಿಯಾಗಿದೆ.
ʼಯುವ ರಾಜ್‌ಕುಮಾರ್ ವಿಷಯಕ್ಕೆ ಸಂಬಂಧಿಸಿದ ಹಲವಾರು ವಿಷಯಗಳು ಅಂತರ್ಜಾಲದಲ್ಲಿ ಹರಿದಾಡಿದ್ದವು. ಆದರೆ ಪ್ರಕರಣ ಇನ್ನೂ ಕೋರ್ಟ್‌ನಲ್ಲಿದ್ದು, ಮುಂದೆ ಏನಾಗಲಿದೆಯೋ ಎಲ್ಲವೂ ಗೊತ್ತಾಗಲಿದೆ. ಆಗ ನಾನು ಈ ಬಗ್ಗೆ ಮಾತನಾಡುತ್ತೇನೆʼ ಎಂದಿದ್ದಾರೆ.
ಶ್ರೀದೇವಿ ಭೈರಪ್ಪ ಮಾಡಿದ ಈ ಗಂಭೀರ ಆರೋಪದ ವಿರುದ್ಧ ನಟಿ ಸಪ್ತಮಿ ಗೌಡ ಮಾನನಷ್ಟ ಮೊಕದ್ದಮೆ ದಾಖಲಿಸಿ ಕೋರ್ಟ್ ಮೆಟ್ಟಿಲೇರಿದ್ದರು.
ಎಐ ಕನ್ನಡ ಕೃಷಿ ವೆಬ್‌ಸೈಟ್‌ಗಾಗಿ ಇಲ್ಲಿ ಕ್ಲಿಕ್ ಮಾಡಿEkka: ಯುವರಾಜ್‌ಕುಮಾರ್ ʼಎಕ್ಕʼ ಟ್ರೈಲರ್ ಬಿಡುಗಡೆ, ಪ್ರಿ ರಿಲೀಸ್ ಇವೆಂಟ್ ದಿನಾಂಕ ಘೋಷಣೆ
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


