Thursday, September 3, 2026
spot_img
More
    spot_img
    HomeLatest newsಪರ್ಫೆಕ್ಟ್ ಸೋರೆಕಾಯಿ ಬರ್ಫಿ, ಹದವಾಗಿ ರುಚಿಯಾಗಿ ಬಾಯಲ್ಲಿಟ್ಟರೆ ಕರಗುವಂತ ಬರ್ಫಿ ಮಾಡುವ ವಿಧಾನ ಇಲ್ಲಿದೆ

    ಪರ್ಫೆಕ್ಟ್ ಸೋರೆಕಾಯಿ ಬರ್ಫಿ, ಹದವಾಗಿ ರುಚಿಯಾಗಿ ಬಾಯಲ್ಲಿಟ್ಟರೆ ಕರಗುವಂತ ಬರ್ಫಿ ಮಾಡುವ ವಿಧಾನ ಇಲ್ಲಿದೆ

    ಪ್ರತಿ ಬಾರಿಯೂ ಹಬ್ಬಕ್ಕೆ ಒಂದೇ ತರದ ಸಿಹಿ ತಿಂಡಿಗಳನ್ನು ಮಾಡಿ, ತಿಂದು ಬೋರ್ ಆಗಿದೆಯಾ?ಹೆಚ್ಚು ಕೊಬ್ಬಿಲ್ಲದ ತರಕಾರಿ ಎಂದೇ ಕರೆಯಿಸಿಕೊಂಡಿರುವ ಸೋರೆಕಾಯಿ ವಿಟಮಿನ್ ಸಿ ಮತ್ತು ಇತರ ನ್ಯೂಟ್ರೀಶಿಯಸ್ ಅಂಶಗಳನ್ನು ಒಳಗೊಂಡಿವೆ.ಸೋರೆಕಾಯಿ (Bottle Gourd), ಕನ್ನಡದಲ್ಲಿ ಇದನ್ನು ಸೋರೆಕಾಯಿ ಅಥವಾ ಲೌಕಿ ಎಂದು ಕರೆಯಲಾಗುತ್ತದೆ. ತುಪ್ಪ, ಹಾಲು, ಕೋವಾ ಬೆರೆಸಿ ಇನ್ನಷ್ಟು ರುಚಿಕರವಾಗಿ ಈ ಬರ್ಫಿಯನ್ನು ಸಿದ್ಧಪಡಿಸಿಕೊಳ್ಳಬಹುದಾಗಿದೆ.ಇದನ್ನು ತಿನ್ನುವುದರಿಂದ ದಿನವಿಡೀ ಚೈತನ್ಯದಿಂದ ಇಡುತ್ತದೆ. ಅಲ್ಲದೆ, ಇದನ್ನೂ ತಿನ್ನುವುದರಿಂದ ಬೇಗನೆ ಹಸಿವಾಗುವುದಿಲ್ಲ.ಈ ಸೋರೆಕಾಯಿ ಮಿಶ್ರಣವು ಸಿಹಿ ಮತ್ತು ಪೌಷ್ಟಿಕಾಂಶದಿಂದ ತುಂಬಿದ್ದು, ಮನೆಯಲ್ಲೇ ಸುಲಭವಾಗಿ ತಯಾರಿಸಬಹುದಾದ ಆರೋಗ್ಯಕರ ತಿಂಡಿ. ಆರೋಗ್ಯಕರವಾಗಿ, ರುಚಿಯಾದ ಸ್ವೀಟ್ ಮಾಡಬೇಕು ಅಂದುಕೊಂಡಿದ್ದೀರಾ? ಹಾಗಾದರೆ ಒಂದೇ ಒಂದು ತರಕಾರಿಯಲ್ಲಿ ಮಾಡುವ ಈ ಗ್ರೀನ್ ಬರ್ಫಿನ ಟ್ರೈ ಮಾಡಿ, ರೆಸಿಪಿ ಇಲ್ಲಿದೆ.

    Advertisement

    ಬೇಕಾಗುವ ಪದಾರ್ಥಗಳು:

    ತುರಿದ ಸೋರೆಕಾಯಿ – 2 ಬಟ್ಟಲು

    ತುಪ್ಪ – 1 ಬಟ್ಟಲು

    ಹಾಲು – 1 ಬಟ್ಟಲು

    ಕೋವಾ – 1 1/2 ಬಟ್ಟಲು

    ಏಲಕ್ಕಿ ಪುಡಿ – 1 ಚಮಚ

    ಲವಂಗ – 2

    ಸಕ್ಕರೆ – 2 ಬಟ್ಟಲು

    ಡ್ರೈಫ್ರೂಟ್ಸ್ (ದ್ರಾಕ್ಷಿ, ಬಾಗಾಮಿ, ಗೋಡಂಬಿ, ಗೇರು ಬೀಜ, ಅಕ್ರೂಟ್,) ಅರ್ಧ ಬಟ್ಟಲು

    ತುರಿದ ತೆಂಗಿನ ಕಾಯಿ – ಅರ್ಧ ಬಟ್ಟಲು

    ಸೂರ್ಯಕಾಂತಿ ಬೀಜ – 1 ಚಮಚ

    ಮೆಲನ್ ಬೀಜ – 1 ಚಮಚ

    ಮಾಡುವ ವಿಧಾನ:

    ಸೋರೆಕಾಯಿಯನ್ನು ಚೆನ್ನಾಗಿ ತೊಳೆಯಿರಿ ಮತ್ತು ತುರಿದುಕೊಳ್ಳಿ.ನೆಲಗಡಲೆಯ ಸಿಪ್ಪೆ ತೆಗೆದು ಬೀಜವನ್ನು ಬಿಡಿಸಿ ತಯಾರಿಸಿ.

    ಪ್ಯಾನ್‌ನಲ್ಲಿ ಸ್ವಲ್ಪ ತುಪ್ಪ ಹಾಕಿ ಬಿಸಿ ಮಾಡಿದ ಮೇಲೆ ಏಲಕ್ಕಿ ಪುಡಿ, ಲವಂಗ ಹಾಕಿ ಸುಗಂಧ ಬರುವವರೆಗೆ ಹುರಿದುಕೊಳ್ಳಿ.

    ಇದಕ್ಕೆ ತುರಿದ ಸೋರೆಕಾಯಿ ಸೇರಿಸಿ ತುಪ್ಪ ಬೇರ್ಪಡುವವರೆಗೆ ಕೈಯಾಡಿಸಿ ಮಿಶ್ರಣ ಮಾಡಿ.

    ನಂತರ ತೆಂಗಿನ ತುರಿ ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ.ಬೇರೆ ಒಲೆಯ ಮೇಲೆ ಹಾಲು ಹಾಕಿ ಬಿಸಿ ಮಾಡಿ, ಅದಕ್ಕೆ ಸಕ್ಕರೆ ಸೇರಿಸಿ ಕರಗಿಸಿ ಸಿಹಿ ಸಿರಪಾಗಿ ಮಾಡಿ.

    ಈ ಸಿರಪನ್ನು ಸೋರೆಕಾಯಿ ಮಿಶ್ರಣದಲ್ಲಿ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ.ಮಿಶ್ರಣ ಗಟ್ಟಿಯಾಗುತ್ತಿದ್ದಂತೆ ಕೋವಾ ಮತ್ತು ಕತ್ತರಿಸಿದ ಡ್ರೈಫ್ರೂಟ್ಸ್ ಸೇರಿಸಿ ಮಿಕ್ಸ್ ಮಾಡಿ.

    ತಟ್ಟೆಗೆ ಸ್ವಲ್ಪ ತುಪ್ಪ ಹಾಕಿ ಮಿಶ್ರಣವನ್ನು ಹಚ್ಚಿ ತಣ್ಣಗಾಗಲು ಬಿಡಿ.ತಣ್ಣಗಾದ ಮೇಲೆ ಬೇಕಾದ ಆಕಾರಕ್ಕೆ ಕತ್ತರಿಸಿ, ಉಳಿದ ಡ್ರೈಫ್ರೂಟ್ಸ್‌ಗಳಿಂದ ಅಲಂಕಾರ ಮಾಡಿ

    ಮಸಾಲೆ ಚುರುಮುರಿ ಅಂದ್ರೆ ನೆನಪಾಗೋದು ಸ್ಟ್ರೀಟ್ ಫುಡ್; ಇದನ್ನು ಈಗ ಮನೆಯಲ್ಲೇ ಮಾಡಿ!

    ಕೃಷಿ ಎಐ ಕನ್ನಡ ವೆಬ್‌ಸೈಟ್‌ಗಾಗಿ ಇಲ್ಲಿ ಕ್ಲಿಕ್‌ ಮಾಡಿ

    ಎಐ ಅಡ್ವೋಕೇಟ್‌ ಅಸಿಸ್ಟೆಂಟ್‌ ವೆಬ್‌ಸೈಟ್‌ಗಾಗಿ ಇಲ್ಲಿ ಕ್ಲಿಕ್‌ ಮಾಡಿ


    Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ

    Subscribe to get the latest posts sent to your email.

    Leave a Reply

    Related News

    ಎಸ್‌ಐಆರ್ ಅಕ್ರಮ: ಎನ್‌ಡಿಎ ನಿಯೋಗ ಮುಖ್ಯ ಚುನಾವಣಾ ಆಯುಕ್ತರಿಗೆ ದೂರು

    ಕರ್ನಾಟಕದಲ್ಲಿ ಎಸ್‌ಐಆರ್ ಪ್ರಕ್ರಿಯೆ ದುರುಪಯೋಗದ ಆರೋಪದೊಂದಿಗೆ ಕುಮಾರಸ್ವಾಮಿ ಮತ್ತು ಪ್ರಲ್ಹಾದ ಜೋಶಿ ನೇತೃತ್ವದ ಎನ್‌ಡಿಎ ನಿಯೋಗ ನವದೆಹಲಿಯಲ್ಲಿ ಮುಖ್ಯ ಚುನಾವಣಾ ಆಯುಕ್ತರಿಗೆ ದಾಖಲೆ ಸಮೇತ ದೂರು ಸಲ್ಲಿಸಿತು.

    ಮಾದಪಟ್ಟಣ ಕ್ವಾರಿ ದುರಂತ: ಅಶೋಕ ತಲಾ ₹50 ಲಕ್ಷ ಪರಿಹಾರ ಆಗ್ರಹ

    ಬೆಂಗಳೂರು ಮಾದಪಟ್ಟಣ ಕ್ವಾರಿಯಲ್ಲಿ ಬಂಡೆ ಬಿದ್ದು 7 ಕಾರ್ಮಿಕರು ಮೃತಪಟ್ಟ ಘಟನೆಗೆ ಪ್ರತಿಪಕ್ಷ ನಾಯಕ ಆರ್.ಅಶೋಕ ರಾಜ್ಯ ಸರ್ಕಾರದ ನಿರ್ಲಕ್ಷ್ಯವೇ ಕಾರಣ ಎಂದು ದೂರಿ ತಲಾ ₹50 ಲಕ್ಷ ಪರಿಹಾರ ಒತ್ತಾಯಿಸಿದ್ದಾರೆ.

    Most Popular

    Recent Comments

    Home
    Play
    Notification
    Search

    Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ

    Subscribe now to keep reading and get access to the full archive.

    Continue reading