ಮಂಡಕ್ಕಿ ಮಸಾಲೆ ಅಥವಾ ಮಸಾಲೆ ಚುರುಮುರಿ ಹೆಸರು ಕೇಳಿದರೆ ಸಾಕು, ಬಾಯಲ್ಲಿ ನೀರೂರುವುದು ಸಹಜ. ಸಂಜೆ ಸಮಯದಲ್ಲಿ ಸಮೋಸ, ಬಜ್ಜಿ ಮಾತ್ರವಲ್ಲದೆ, ಚುರುಮುರಿಯಂತಹ ರೋಡ್ ಸೈಡ್ ಸ್ನ್ಯಾಕ್ಸ್‌ಗಳು ಎಲ್ಲರಿಗೂ ಬಹಳ ಇಷ್ಟ. ಆರೋಗ್ಯಕ್ಕೂ ಪೂರಕವಾಗಿರುವ ಮಂಡಕ್ಕಿಯು ಪೌಷ್ಟಿಕಾಂಶದಿಂದ ಕೂಡಿದೆ ಮತ್ತು ಪಾನಿಪೂರಿಗಿಂತ ಉತ್ತಮ ಆಯ್ಕೆ ಎನ್ನಬಹುದು.ರಸ್ತೆ ಬದಿಯ ಅಂಗಡಿಗಳಲ್ಲಿ ಸಿಗುವ ಈ ರುಚಿಕರ ಚುರುಮುರಿಯನ್ನು ಮನೆಯಲ್ಲಿಯೇ ಸುಲಭವಾಗಿ ತಯಾರಿಸಬಹುದು. ಮಳೆಗಾಲದ ಸಂಜೆ ವೇಳೆ ಟೀ ಜೊತೆ ಬಿಸಿ ಬಿಸಿ ಚುರುಮುರಿ ಸವಿಯುವುದು ಒಂದು ವಿಶೇಷ ಅನುಭವ. ರಸ್ತೆ ಬದಿಯ ಅಂಗಡಿಗಳಲ್ಲಿ ಜನಸಂದಣಿ ಇರುವುದನ್ನು ನೋಡಿದರೆ, ಈ ತಿಂಡಿಗಳ ಜನಪ್ರಿಯತೆ ಸ್ಪಷ್ಟವಾಗುತ್ತದೆ.

ಪಾನಿಪೂರಿ, ಗೋಬಿ ಮಂಚೂರಿಯನ್, ಬೋಂಡಾ, ಬಜ್ಜಿ, ಸಮೋಸ, ನೂಡಲ್ಸ್, ಪಾವ್ ಬಾಜಿ, ವಡಾ ಪಾವ್, ದೋಸೆ, ಚುರುಮುರಿ ಹೀಗೆ ಹಲವಾರು ರುಚಿಯ ತಿಂಡಿಗಳು ಸಿಗುತ್ತವೆ.ನೀವು ಮನೆಯಲ್ಲಿಯೇ ಈ ರುಚಿಕರ ಮಸಾಲೆ ಚುರುಮುರಿಯನ್ನು ತಯಾರಿಸುವುದು ತುಂಬಾ ಸುಲಭ. ಇದಕ್ಕೆ ಬೇಕಾಗುವ ಪದಾರ್ಥಗಳು, ಮಾಡುವ ವಿಧಾನ ಮತ್ತು ಸಮಯದ ವಿವರಗಳನ್ನು ತಿಳಿದುಕೊಂಡು, ಮನೆಯವರ ಜೊತೆ ಕುಳಿತು ರುಚಿಯಾಗಿ ಸವಿಯಬಹುದು.ರೋಡ್ ಸೈಡ್‌ನಲ್ಲಿ ಸಿಗುವ ರುಚಿಯನ್ನು ಮನೆಯಲ್ಲಿಯೇ ಅನುಭವಿಸಲು, ಮಸಾಲೆ ಚುರುಮುರಿ ಒಂದು ಸುಲಭ ಹಾಗೂ ಆರೋಗ್ಯಕರ ಆಯ್ಕೆ. ಕಡಿಮೆ ಸಮಯದಲ್ಲಿ ತಯಾರಿಸಿ, ಮಳೆಗಾಲದ ಸಂಜೆ ಟೀ ಜೊತೆ ಸವಿಯಿರಿ
ಬೇಕಾಗುವ ಪದಾರ್ಥಗಳು:
ಮಂಡಕ್ಕಿ
ಖಾರದ ಪುಡಿ
ಈರುಳ್ಳಿ-2
ಟೊಮೆಟೋ- 2
ಉಪ್ಪು
ಹಸಿ ಮೆಣಸು
ಕ್ಯಾರೆಟ್- 1
ತೆಂಗಿನಕಾಯಿ ತುರಿ
ದನಿಯ
ಜೀರಿಗೆ
ನಿಂಬೆ ರಸ

ಮಸಾಲೆ ಚುರುಮುರಿ ಮಾಡುವ ಸುಲಭ ವಿಧಾನ
ಮಂಡಕ್ಕಿಯನ್ನು (ಚುರುಮುರಿ) ಜರಡಿ ಹಿಡಿದು, ಕಸ ಅಥವಾ ಪುಡಿಯನ್ನು ಬೇರೆ ಮಾಡಿಕೊಂಡು ಒಂದು ಪಾತ್ರೆಗೆ ಹಾಕಿ.
4-5 ಜನರಿಗೆ ಸಾಕಾಗುವಷ್ಟು ಮಂಡಕ್ಕಿ ತೆಗೆದುಕೊಳ್ಳಿ.
ಖಾರದ ಪುಡಿ, ಸಣ್ಣದಾಗಿ ಹೆಚ್ಚಿದ ಈರುಳ್ಳಿ, ಟೊಮೆಟೋ, ತುರಿದ ಕ್ಯಾರೆಟ್, ತೆಂಗಿನ ತುರಿ ಸೇರಿಸಿ ಮಿಕ್ಸ್ ಮಾಡಿ.
ಬೇಯಿಸಿದ ಬಟಾಣಿ ಇದ್ದರೆ ಸೇರಿಸಿ. ಮೊಳಕೆ ಬಂದಿರುವ ಕಾಳು ಇದ್ದರೆ ಅದನ್ನು ಕೂಡ ಹಾಕಬಹುದು (ಐಚ್ಛಿಕ).
ಚಿಕ್ಕದಾಗಿ ಕತ್ತರಿಸಿದ ಕೊತ್ತಂಬರಿ ಸೊಪ್ಪು ಹಾಕಿ.
ಮೊದಲು ತಯಾರಿಸಿದ ಹಸಿರು ಚಟ್ನಿ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ.
ಖಾರ ಅಥವಾ ಸೇವ್, 2 ಸ್ಪೂನ್ ಎಣ್ಣೆ ಹಾಕಿ ಮಿಕ್ಸ್ ಮಾಡಿ.
ಸೌತೆಕಾಯಿ ಚೂರುಗಳೊಂದಿಗೆ ಚುರುಮುರಿಯನ್ನು ತಟ್ಟೆಗೆ ಹಾಕಿ, ತಕ್ಷಣವೇ ಸವಿಯಿರಿ.
ಚುರುಮುರಿ ತಯಾರಿಸಲು 10-15 ನಿಮಿಷ ಸಾಕು. ತಾಜಾ ಪದಾರ್ಥಗಳನ್ನು ಬಳಸಿ, ತಕ್ಷಣವೇ ಸವಿಯುವುದು ಉತ್ತಮ.
ಸಾಂಪ್ರದಾಯಿಕ ಶೈಲಿಯಲ್ಲಿ ಡಿಫ್ರೆಂಟ್ ಟೇಸ್ಟ್‌ನ ಹಲಸಿನ ಹಣ್ಣುಇಡ್ಲಿ ರೆಸಿಪಿ ಇಲ್ಲಿದೆ
ಕೃಷಿ ಎಐ ಕನ್ನಡ ವೆಬ್‌ಸೈಟ್‌ಗಾಗಿ ಇಲ್ಲಿ ಕ್ಲಿಕ್ ಮಾಡಿ
ಎಐ ಅಡ್ವೋಕೇಟ್ ಅಸಿಸ್ಟೆಂಟ್ ವೆಬ್‌ಸೈಟ್‌ಗಾಗಿ ಇಲ್ಲಿ ಕ್ಲಿಕ್ ಮಾಡಿ
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


