ಆಪಲ್ ಸ್ಟೊರ್ ಭಾರತದಲ್ಲಿ ಈಗಾಗಲೇ ಎರಡು ಸ್ಟೋರ್‌ಗಳನ್ನ ಓಪನ್ ಮಾಡಿದೆ. ಇದೀಗ ಮೂರನೇ ಸ್ಟೋರ್ ಅನ್ನು ಬೆಂಗಳೂರಿನ ಹೆಬ್ಬಾಳದಲ್ಲಿ ಆರಂಭ ಮಾಡಿದೆ. ದಕ್ಷಿಣ ಭಾರತದ ಮೊದಲ ಆಪಲ್ ಸ್ಟೋರ್ ಹಾಗೂ ದೇಶದ ಮೂರನೇಯ ಆಪಲ್ ಸ್ಟೋರ್ ಇದಾಗಿದೆ.
ಬೆಂಗಳೂರಿನ ಬ್ಯಾಟರಾಯನಪುರ ಬಳಿಯ ಫೀನಿಕ್ಸ್ ಮಾಲ್ ಆಫ್ ಏಷ್ಯಾದಲ್ಲಿ ಆ್ಯಪಲ್ ಹೆಬ್ಬಾಳ್ ಸ್ಟೋರ್ ಸೆಪ್ಟೆಂಬರ್ 1 ರಂದು ಉದ್ಘಾಟನೆಗೊಂಡಿದೆ.
ಹೆಬ್ಬಾಳದ ಈ ಸ್ಟೋರ್ ಗ್ರಾಹಕರಿಗೆ ಆಪಲ್‌ನ ಸಂಪೂರ್ಣ ಉತ್ಪನ್ನಗಳನ್ನು ಶಾಪಿಂಗ್ ಮಾಡಲು, ಅತ್ಯುತ್ತಮ ಸೇವೆ ನೀಡುತ್ತದೆ. 8,000 ಚದರಡಿ ವಿಸ್ತೀರ್ಣದಲ್ಲಿ ಆ್ಯಪಲ್ ಸ್ಟೋರ್ ನಿರ್ಮಾಣವಾಗಿದೆ.
ಈ ಹೊಸ ಸ್ಟೋರ್‌ನಲ್ಲಿ 70 ಸಿಬ್ಬಂದಿಗಳಿದ್ದು, ಭಾರತ 15 ರಾಜ್ಯಗಳಿಂದ ಇಲ್ಲಿಗೆ ಬಂದಿದ್ದಾರೆ. ಈ ಸಿಬ್ಬಂದಿಗಳು ಗ್ರಾಹಕರಿಗೆ ಆಪಲ್ ಉತ್ಪನ್ನಗಳು, ಮಾಸಿಕ ಹಣಕಾಸು ಆಯ್ಕೆಗಳು ಮತ್ತು ಆಪಲ್ ಟ್ರೇಡ್ ಇನ್ ಕಾರ್ಯಕ್ರಮದ ಬಗ್ಗೆ ತಿಳಿದುಕೊಳ್ಳಲು ಸಹಾಯ ಮಾಡುತ್ತಾರೆ.
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


