ಬೆಂಗಳೂರು: ನಿನ್ನೆ ಕನ್ನಡ ರಾಜ್ಯೋತ್ಸವದ ಪ್ರಯುಕ್ತ ಕನ್ನಡ ಚಿತ್ರ ಲ್ಯಾಂಡ್‌ಲಾರ್ಡ್‌ನ ಟೀಸರ್ ಬಿಡುಗಡೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ದುನಿಯಾ ವಿಜಯ್ ನಾಯಕನಾಗಿ ನಟಿಸುತ್ತಿರುವ ಈ ಚಿತ್ರದಲ್ಲಿ ನಾಯಕಿಯಾಗಿ ರಚಿತಾ ರಾಮ್ ನಟಿಸುತ್ತಿದ್ದು, ಕಾರ್ಯಕ್ರಮದಲ್ಲಿ ಇಡೀ ಚಿತ್ರತಂಡ ಭಾಗವಹಿಸಿತ್ತು. ಈ ವೇಳೆ ಕಲಾವಿದರು ವೇದಿಕೆಯನ್ನೇರಿ ಚಿತ್ರೀಕರಣದ ಕುರಿತು ಹಾಗೂ ಚಿತ್ರದ ವಿಚಾರದ ಕುರಿತು ತಮ್ಮ ಅನುಭವ ಹಾಗೂ ಅಭಿಪ್ರಾಯವನ್ನು ತಿಳಿಸತೊಡಗಿದರು.
ಅದೇ ರೀತಿ ರಚಿತಾ ರಾಮ್ ಸಹ ವೇದಿಕೆಯನ್ನೇರಿ ಮಾತನಾಡಿದರು. ಈ ಹಿಂದೆ ತಾವೆಂದೂ ಮಾಡಿರದ ಪಾತ್ರದಲ್ಲಿ ಕಾಣಿಸಿಕೊಂಡಿರುವ ಬಗ್ಗೆ ಮಾತನಾಡುತ್ತಿದ್ದ ರಚಿತಾ ರಾಮ್ ಭಾಷಣದ ಮಧ್ಯದಲ್ಲಿಯೇ ಕಾರ್ಯಕ್ರಮಕ್ಕೆ ಆಗಮಿಸಿದ್ದ ಕೊಲೆ ಆರೋಪಿ ದರ್ಶನ್ ಅಭಿಮಾನಿಗಳು ಜೈ ಡಿ ಬಾಸ್ ಘೋಷಣೆಯನ್ನು ಕೂಗಿದರು.
ಈ ವೇಳೆ ಇರಿಸುಮುರಿಸುಗೊಂಡ ರಚಿತಾ ರಾಮ್ ಮೊದಲಿಗೆ ಕೈ ಸನ್ನೆಯಲ್ಲಿಯೇ ಸಾಕು ಎಂದು ತಿಳಿಸಿದರು. ಆದರೂ ಇದಕ್ಕೆ ಸುಮ್ಮನಾಗದ ದರ್ಶನ್ ಫ್ಯಾನ್ಸ್ ಇನ್ನೂ ದೊಡ್ಡ ಮಟ್ಟದಲ್ಲಿ ದರ್ಶನ್ ಪರ ಘೋಷಣೆಯನ್ನು ಶುರುವಿಟ್ಟುಕೊಂಡರು. ಈ ವೇಳೆ ರಚಿತಾ ರಾಮ್ ʼದಯವಿಟ್ಟು ಒಂದು ನಿಮಿಷ.. ನನಗೋಸ್ಕರ್ ಒಂದು ನಿಮಿಷ ಸುಮ್ಮಿನಿರಿʼ ಎಂದರು ಆದರೂ ಸುಮ್ಮನಾಗದ ಗುಂಪು ಕಂಡು ಕೋಪದಿಂದಲೇ ಒಂದು ನಿಮಿಷ ಸುಮ್ಮನಿರಿ ಎಂದು ಮನವಿ ಮಾಡಿಕೊಂಡರು.
ಇಷ್ಟಾದರೂ ಕೇಳದೇ ತಮ್ಮ ಜೈ ಡಿ ಬಾಸ್ ಘೋಷಣೆಯನ್ನು ಮುಂದುವರಿಸಿದ ಗುಂಪನ್ನು ಕಂಡು ರಚಿತಾ ರಾಮ್ ಮಾತನಾಡದೇ ಅರ್ಧದಲ್ಲಿಯೇ ವೇದಿಕೆಯಿಂದ ಇಳಿದು ಹೊರಟುಹೋದರು. ಹೀಗೆ ತಮ್ಮ ನಟ ಜೈಲಿನಲ್ಲಿದ್ದರೂ ಮತ್ತೊಬ್ಬರ ಚಿತ್ರದ ವೇದಿಕೆ ಕಾರ್ಯಕ್ರಮಕ್ಕೆ ಬಂದು ದರ್ಶನ್ ಅಭಿಮಾನಿಗಳು ಬೇಡದ ಘೋಷಣೆಗಳನ್ನು ಕೂಗಿ ಮತ್ತೊಮ್ಮೆ ಸಣ್ಣತನ ಮೆರೆದಿದ್ದಾರೆ.
ಅಂದಹಾಗೆ ಲ್ಯಾಂಡ್‌ಲಾರ್ಡ್ ಚಿತ್ರಕ್ಕೆ ಕಥೆ ಬರೆದಿದ್ದ ಜಡೇಶ್ ಕೆ ಹಂಪಿ ಈ ಚಿತ್ರಕ್ಕೆ ನಿರ್ದೇಶನ ಮಾಡುತ್ತಿದ್ದು, ಚಿತ್ರದ ಮೇಲೆ ದೊಡ್ಡ ನಿರೀಕ್ಷೆ ಇದೆ. ಕಾಟೇರ ಚಿತ್ರವನ್ನು ತರುಣ್ ಸುಧೀರ್ ನಿರ್ದೇಶನ ಮಾಡಿದ್ದರೂ ಆ ಚಿತ್ರ ವಿಭಿನ್ನ ಎನಿಸಿಕೊಳ್ಳಲು ಪ್ರಮುಖ ಕಾರಣ ಜಡೇಶ್ ಎಂಬುವುದನ್ನು ಒಪ್ಪಲೇಬೇಕು.
ರಾಜ್ಯದ ಮದರಸಾ ಮತ್ತು ಉರ್ದು ಶಾಲೆಗಳಲ್ಲಿ ಕನ್ನಡ ಕಲಿಕೆ ಕಡ್ಡಾಯ!
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


