ಕನ್ನಡದ ಜನಪ್ರಿಯ ಮನರಂಜನೆ ಟಿವಿ ಚಾನೆಲ್‌ಗಳಲ್ಲಿ ಒಂದಾದ ಕಲರ್ಸ್ ಕನ್ನಡ ಧಾರಾವಾಹಿಗಳು ಹಾಗೂ ರಿಯಾಲಿಟಿ ಶೋಗಳಿಗೆ ಹೆಚ್ಚು ಖ್ಯಾತಿಯನ್ನು ಪಡೆದಿದೆ.
ಅದರಲ್ಲೂ ಬಿಗ್‌ಬಾಸ್ ಕನ್ನಡವನ್ನು ಪ್ರಸಾರ ಮಾಡುವ ಈ ಚಾನೆಲ್ ವಿಶೇಷವಾದ ವೀಕ್ಷಕರ ಬಳಗವನ್ನೇ ಹೊಂದಿದೆ. ಹೀಗಿರುವ ಕಲರ್ಸ್ ಕನ್ನಡ ವಿಚಾರವಾಗಿ ಸದ್ಯ ಸಾಮಾಜಿಕ ಜಾಲತಾಣದಲ್ಲಿ ಟ್ರೋಲ್‌ಗಳು ನಡೆಯುತ್ತಿದ್ದು, ಇಷ್ಟು ದಿನ ತಮ್ಮ ಮೇಲೆ ಕಾಪಿರೈಟ್ ಸ್ಟ್ರೈಕ್ ಹಾಕುತ್ತಿದ್ದ ಕಲರ್ಸ್ ಕನ್ನಡ ಚಾನೆಲ್‌ನ ಖಾತೆಯೇ ಇದೀಗ ನಿಷ್ಕ್ರಿಯವಾಗಿದೆ ಎಂದು ಟೀಕೆಗಳು ಹರಿದಾಡುತ್ತಿವೆ.
ಹೌದು, ಕಲರ್ಸ್ ಕನ್ನಡ ಇನ್ಸ್ಟಾಗ್ರಾಮ್ ಖಾತೆಯನ್ನು ಓಪನ್ ಮಾಡಲು ಯತ್ನಿಸಿದರೆ 0 ಫಾಲೋವರ್ಸ್ ಎಂದು ತೋರಿಸುತ್ತಿದ್ದು, ಯಾವುದೇ ಪೋಸ್ಟ್ ಕಾಣಿಸುತ್ತಿಲ್ಲ. ಹೀಗಾಗಿ ಚಾನೆಲ್‌ನ ಇನ್ಸ್ಟಾಗ್ರಾಮ್ ಖಾತೆ ಹೊಗೆ ಹಾಕಿಸಿಕೊಂಡಿದೆ ಎಂದು ಟ್ರೋಲ್‌ಗಳು ಹರಿದಾಡುತ್ತಿದ್ದು, ಬಹುಶಃ ಇನ್ಸ್ಟಾಗ್ರಾಮ್‌ನ ನಿಯಮ ಉಲ್ಲಂಘನೆಯಾಗಿದ್ದಕ್ಕೆ ಖಾತೆ ನಿಷ್ಕ್ರಿಯವಾಗಿರಬಹುದು.
ಇನ್ನು ದೊಡ್ಡ ಚಾನೆಲ್‌ಗಳು ಹಾಗೂ ಸೆಲೆಬ್ರಿಟಿಗಳ ಖಾತೆಗಳು ಈ ರೀತಿ ನಿಷ್ಕ್ರಿಯಗೊಂಡಾಗ ಅವುಗಳನ್ನು ವಾಪಸ್ ಪಡೆದುಕೊಳ್ಳಲಾಗಿದೆ. ನಿಯಮ ಉಲ್ಲಂಘನೆಯಾಗಿದ್ದರೆ ಅಂತಹ ಪೋಸ್ಟ್‌ಗಳನ್ನು ತೆರವು ಮಾಡಿ ಇನ್ನುಮುಂದೆ ಎಚ್ಚರಿಕೆಯಿಂದ ಇರುತ್ತೇವೆ ಎಂದು ಮುಚ್ಚಳಿಕೆ ಬರೆದುಕೊಟ್ಟು ಖಾತೆಯನ್ನು ವಾಪಸ್ ಪಡೆಯಬಹುದಾಗಿದೆ.
ಕೇವಲ ಇನ್ಸ್ಟಾಗ್ರಾಮ್ ಮಾತ್ರವಲ್ಲದೇ ಫೇಸ್‌ಬುಕ್ ಹಾಗೂ ಎಕ್ಸ್ ವೇದಿಕೆಯಲ್ಲೂ ಸಹ ಕಲರ್ಸ್ ಕನ್ನಡ ಚಾನೆಲ್‌ಗಳು ಬ್ಲಾಕ್ ಆಗಿವೆ.
ಜಿಎಸ್‌ಟಿ ಕಡಿತದ ನಡುವೆಯೂ ಹಣಕಾಸು ವರ್ಷ 26 ರಲ್ಲಿ ಭಾರಿ ಏರಿಕೆ: ಅಕ್ಟೋಬರ್‌ನಲ್ಲಿ ₹1.96 ಲಕ್ಷ ಕೋಟಿ ಸಂಗ್ರಹ!
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


