Tuesday, November 3, 2026
spot_img
More
    spot_img
    HomeCrimeತಡರಾತ್ರಿ ಬೆಂಗಳೂರಿನ ಶಾಂತಿನಗರದಲ್ಲಿ ಭೀಕರ ಅಪಘಾತ; ಆಂಬುಲೆನ್ಸ್ ಡಿಕ್ಕಿಗೆ ಇಬ್ಬರು ಸ್ಥಳದಲ್ಲೇ ಸಾವು!

    ತಡರಾತ್ರಿ ಬೆಂಗಳೂರಿನ ಶಾಂತಿನಗರದಲ್ಲಿ ಭೀಕರ ಅಪಘಾತ; ಆಂಬುಲೆನ್ಸ್ ಡಿಕ್ಕಿಗೆ ಇಬ್ಬರು ಸ್ಥಳದಲ್ಲೇ ಸಾವು!

    ಬೆಂಗಳೂರು: ಶನಿವಾರ ತಡರಾತ್ರಿ ಶಾಂತಿನಗರ ಬಸ್ ನಿಲ್ದಾಣದ ಬಳಿ ನಡೆದ ಅತ್ಯಂತ ಭೀಕರ ಅಪಘಾತದಲ್ಲಿ, ದಂಪತಿ ಸೇರಿದಂತೆ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿ, ಮತ್ತಿಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ. ರೋಗಿಗಳು ಯಾರೂ ಇಲ್ಲದಿದ್ದರೂ, ಅತಿ ವೇಗವಾಗಿ ಬಂದ ಆಂಬುಲೆನ್ಸ್ ಚಾಲಕನ ನಿರ್ಲಕ್ಷ್ಯವೇ ಈ ದುರಂತಕ್ಕೆ ಕಾರಣವಾಗಿದೆ.

    ರಿಚ್ಮಂಡ್ ಸರ್ಕಲ್ ಕಡೆಯಿಂದ ಅತಿ ವೇಗವಾಗಿ ಬಂದ ಆಂಬುಲೆನ್ಸ್, ರೆಡ್ ಸಿಗ್ನಲ್‌ನಲ್ಲಿ ನಿಂತಿದ್ದ ಎರಡು ಬೈಕ್‌ಗಳಿಗೆ ಭೀಕರವಾಗಿ ಡಿಕ್ಕಿ ಹೊಡೆದಿದೆ. ಅಪಘಾತದ ತೀವ್ರತೆ ಎಷ್ಟಿತ್ತೆಂದರೆ, ಬೈಕ್‌ ಅನ್ನು ಆಂಬುಲೆನ್ಸ್ ಸುಮಾರು 50 ಮೀಟರ್‌ ದೂರದವರೆಗೆ ಎಳೆದೊಯ್ದು, ನಂತರ ಪೊಲೀಸ್ ಚೌಕಿಗೂ ಡಿಕ್ಕಿ ಹೊಡೆದಿದೆ.

    ಸಾವನ್ನಪ್ಪಿದವರನ್ನು ಇಸ್ಮಾಯಿಲ್ (40) ಮತ್ತು ಸಮೀನಾಬಾನು ಎಂದು ಗುರುತಿಸಲಾಗಿದೆ. ಗಾಯಾಳು ಸಿದ್ದಿಖಿ ಸೇರಿದಂತೆ ಮತ್ತಿಬ್ಬರನ್ನು ತಕ್ಷಣವೇ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

    ಘಟನೆ ನಡೆದ ತಕ್ಷಣ ಆಂಬುಲೆನ್ಸ್ ಚಾಲಕ ಸ್ಥಳದಿಂದ ತಲೆಮರೆಸಿಕೊಂಡಿದ್ದಾನೆ. ಆಕ್ರೋಶಗೊಂಡ ಸ್ಥಳೀಯರು ಆಂಬುಲೆನ್ಸ್ ಅನ್ನು ತಳ್ಳಿ ಪಲ್ಟಿ ಹೊಡೆಸಿದ್ದಾರೆ. ಸ್ಥಳಕ್ಕೆ ಅಶೋಕನಗರ ಸಂಚಾರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪರಾರಿಯಾದ ಚಾಲಕನಿಗಾಗಿ ತೀವ್ರ ಶೋಧ ನಡೆಸುತ್ತಿದ್ದಾರೆ.

    ಜಿಎಸ್‌ಟಿ ಕಡಿತದ ನಡುವೆಯೂ ಹಣಕಾಸು ವರ್ಷ 26 ರಲ್ಲಿ ಭಾರಿ ಏರಿಕೆ: ಅಕ್ಟೋಬರ್‌ನಲ್ಲಿ ₹1.96 ಲಕ್ಷ ಕೋಟಿ ಸಂಗ್ರಹ!


    Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ

    Subscribe to get the latest posts sent to your email.

    LEAVE A REPLY

    Related News

    ಮಹಾಲಯ ಅಮಾವಾಸ್ಯೆ 2026: ಅಕ್ಟೋಬರ್ 10ರಂದು ಆಚರಣೆ; ಪಿತೃಪೂಜೆಯ ಮಹತ್ವವೇನು?

    ಹಿಂದೂ ಧರ್ಮದಲ್ಲಿ ಮಹಾಲಯ ಅಮಾವಾಸ್ಯೆಗೆ ವಿಶೇಷ ಸ್ಥಾನವಿದೆ. ಪಿತೃಪಕ್ಷದ ಕೊನೆಯ ದಿನವಾದ ಈ ಸಂದರ್ಭದಲ್ಲಿ ಪೂರ್ವಜರನ್ನು ಸ್ಮರಿಸಿ, ಅವರ ಆತ್ಮಕ್ಕೆ ಶಾಂತಿ ಕೋರಿ ವಿವಿಧ ಧಾರ್ಮಿಕ ವಿಧಿವಿಧಾನಗಳನ್ನು ನೆರವೇರಿಸಲಾಗುತ್ತದೆ. ಈ ದಿನ ಶ್ರಾದ್ಧ,...

    ಕರ್ನಾಟಕಕ್ಕೆ ಗುಡ್‌ನ್ಯೂಸ್: ಯುಬಿಯಿಂದ ₹4,500 ಕೋಟಿ ಕೊಡುಗೆ, 36 ಸಾವಿರಕ್ಕೂ ಹೆಚ್ಚು ಉದ್ಯೋಗ

    ಬೆಂಗಳೂರು: ದೇಶದ ಅತಿದೊಡ್ಡ ಬಿಯರ್ ಉತ್ಪಾದನಾ ಸಂಸ್ಥೆ ಹಾಗೂ ಹೈನೆಕನ್‌ ಕಂಪನಿಯ ಭಾಗವಾಗಿರುವ ಬೆಂಗಳೂರು ಮೂಲದ 'ಯುನೈಟೆಡ್ ಬ್ರೂವರೀಸ್ ಲಿಮಿಟೆಡ್' (ಯುಬಿಎಲ್‌), ಕರ್ನಾಟಕದ ಆರ್ಥಿಕತೆ ಮತ್ತು ಉದ್ಯೋಗ ಸೃಷ್ಟಿಯಲ್ಲಿ ಮಹತ್ವದ ಪಾತ್ರ ವಹಿಸುತ್ತಿದೆ...

    Most Popular

    Recent Comments

    Home
    Play
    Notification
    Search